Advertisement
ಆದಿವಾಸಿಗಳ ಅಭಿವೃದ್ಧಿಗಾಗಿ ಮಹತ್ವ ನೀಡುವ ನಿಟ್ಟನಲ್ಲಿ ವಿಶ್ವ ಸಂಸ್ಥೆ 1995ರಲ್ಲಿ ಆ.9ರಂದು ವಿಶ್ವ ಆದಿವಾಸಿ ದಿನವನ್ನಾಗಿ ಘೋಷಿಸಿದೆ. ಹಾಗಾಗಿ 2019ನೇ ವರ್ಷಾಚರಣೆಯಲ್ಲಿ ‘ಆದಿವಾಸಿಗಳ ಭಾಷೆ ಗಳು ಮತ್ತು ಹೋರಾಟ’ ಎಂಬ ಧ್ಯೇಯವಾಕ್ಯವನ್ನು ಘೋಷಿಸಲಾಗಿದೆ.
Related Articles
Advertisement
ಅನೇಕ ಕಾಯ್ದೆ ಜಾರಿ: ಆದಿವಾಸಿಗಳು ವಾಸಮಾಡುವ ಪ್ರದೇಶಗಳಲ್ಲಿ ಹುಲಿ ಯೋಜನೆ, ರಾಷ್ಟ್ರೀಯ ಉದ್ಯಾ ನವನಗಳು, ವನ್ಯಜೀವಿಧಾಮಗಳು ಮತ್ತು ಸೂಕ್ಷ್ಮ ಪ್ರದೇಶವೆಂದು ಘೋಷಣೆ ಮಾಡಿ ಆದಿವಾಸಿಗಳ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ. ಈ ಅನ್ಯಾಯದ ವಿರುದ್ಧ ಆದಿವಾಸಿಗಳು ಸಂಘಟಿತರಾಗಿ ನಡೆಸಿದ ಹೋರಾಟದ ಫಲವಾಗಿ ಭಾರತ ಸರ್ಕಾರವು ಇವರ ಅಭಿವೃದ್ಧಿಗಾಗಿ ಅನೇಕ ಕಾಯ್ದೆ ಮತ್ತು ಕಾನೂನು ಜಾರಿಗೆ ತಂದಿತ್ತು. ಇದರಲ್ಲಿ 2006ರ ಅರಣ್ಯ ಹಕ್ಕು ಕಾಯ್ದೆ ಪ್ರಮುಖ ವಾದುದು. ಇದರೊಂದಿಗೆ ಜೀತ ವಿಮುಕ್ತ ಕಾಯ್ದೆ, ಜಮೀನು ಪರಬಾರೆ ನಿಷೇಧ ಕಾಯ್ದೆ, ದೌರ್ಜನ್ಯ ನಿಯಂತ್ರಣ ಕಾಯ್ದೆ, ಅರಣ್ಯ ಹಕ್ಕು ಮಾನ್ಯತೆ ಹಾಗೂ ಗಿರಿಜನ ಉಪಯೋಜನೆ ಕಾಯ್ದೆಯನ್ನು ಜಾರಿಗೆ ತಂದಿದ್ದರೂ ಇವುಗಳು ಸಮರ್ಪಕವಾಗಿ ಅನುಷ್ಠಾನ ಗೊಳಿಸುತ್ತಿಲ್ಲ. ಇದರಿಂದ ಸೋಲಿಗರು, ಬುಡಕಟ್ಟು ಜನಾಂಗದವರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿಯುತ್ತಿದ್ದಾರೆ.
ಮೂಲ ಸೌಲಭ್ಯವಿಲ್ಲ: ಕಾಡಿನಲ್ಲಿ ವಾಸಿಸುವ ಸೋಲಿಗರಿಗೆ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ರಸ್ತೆ, ಮನೆ, ಕೆಲಸ, ಶಿಕ್ಷಣ ಸೇರಿದಂತೆ ಅನೇಕ ಪ್ರಮುಖ ಸೌಲಭ್ಯಗಳು ವಂಚಿತರಾಗು ತ್ತಿದ್ದಾರೆ. ಇವು ಪಡೆಯಬೇಕಾದರೆ ಅರಣ್ಯ ಇಲಾಖೆಅನುಮತಿ ಕಡ್ಡಾಯ. ಆದರೆ ಇದನ್ನು ಅಷ್ಟು ಸುಲಭವಾಗಿ ಪಡೆದು ಕೊಳ್ಳಲು ಸಾಧ್ಯವಿಲ್ಲ. ಅರಣ್ಯ ಪ್ರದೇಶದ ಲ್ಲಿರುವ ಸೋಲಿಗರ ಕುಟುಂಬಗಳು ಇನ್ನೂ ಕೂಡ ಸೌಲಭ್ಯದಿಂದ ವಂಚಿತರಾಗಿ ಬದುಕನ್ನು ನಡೆಸುತ್ತಿದ್ದಾರೆ. ಇವುಗಳ ಬಗ್ಗೆ ಸರ್ಕಾರ, ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಸೇರಿದಂತೆ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕು ಎಂಬುದು ಬೆಟ್ಟದ ಮಾದೇಗೌಡ, ಕ್ಯಾತೇಗೌಡ ಸೇರಿದಂತೆ ಅನೇಕ ಸೋಲಿಗರ ಒತ್ತಾಸೆಯಾಗಿದೆ.
● ಫೈರೋಜ್‌ಖಾನ್