Advertisement
ಅರವತ್ತೇಳನೆ ವನ್ಯ ಜೀವಿ ಸಪ್ತಾಹದ ಅಂಗವಾಗಿ ಬಿ.ಆರ್.ಟಿ. ಉದ್ಯಾನದಿಂದ ಬಂದ ಬೈಕ್ ಹಾಗೂ ಕಾರ್ ರ‍್ಯಾಲಿಯನ್ನು ಹುಣಸೂರಿನ ವನ್ಯಜೀವಿ ವಿಭಾಗದ ಕಚೇರಿ ಬಳಿ ಆದಿವಾಸಿಗಳ ಸಾಂಸ್ಕೃತಿಕ ಕಲರವಗಳ ನಡುವೆ ಶಾಸಕ ಎಚ್.ಪಿ.ಮಂಜುನಾಥ್, ಡಿ.ಸಿ.ಎಫ್. ಮಹೇಶ್‌ಕುಮಾರ್ ಹಾಗೂ ಸಿಬ್ಬಂದಿಗಳು ಸಂಭ್ರಮದಿಂದ ಬರಮಾಡಿಕೊಂಡರು.
Related Articles
ವಿಶ್ವದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ 2020-21ನೇ ಸಾಲಿನಲ್ಲಿ ನಡೆಸಿರುವ ಕ್ಯಾಮರಾ ಟ್ರಾಪಿಂಗ್‌ನಲ್ಲಿ 135 ಹುಲಿಗಳು ಸೆರೆ ಸಿಕ್ಕಿವೆ. ದೇಶದಲ್ಲಿ ಅತೀ ಹೆಚ್ಚು ಅಂದರೆ 1600ರಿಂದ 1600 ಆನೆಗಳು ಹಾಗೂ100 ಕ್ಕೂ ಹೆಚ್ಚು ಚಿರತೆಗಳು ದಾಖಲಾಗಿರುವುದು ಹೆಮ್ಮೆ, ವನ್ಯಜೀವಿ ಸಂರಕ್ಷಣೆಯಿಂದಾಗಿ ಆಗಾಗ್ಗೆ ಮಾನವ- ವನ್ಯಜೀವಿ ಸಂಘರ್ಷ ನಡೆಯುತ್ತಿದ್ದು, ಸಂಘರ್ಷದ ಸಂದರ್ಭದಲ್ಲಿ ಇಲ್ಲಿನ ಶಾಸಕ ಮಂಜುನಾಥರು ತಾವೇ ಮುಂದೆ ನಿಂತು ಸಹಕರಿಸುತ್ತಿರುವುದು ಶ್ಲಾಘನೀಯ ಎಂದರು.
Advertisement
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ನಾಗರಹೊಳೆ ಉದ್ಯಾನವು ವನ್ಯಜೀವಿ ಸಂರಕ್ಷಣೆಯಲ್ಲಿ ಮುಂಚೂಣಿಯಲ್ಲಿರುವುದು ಅಭಿನಂದನೀಯ. ಆದರೆ ಅರಣ್ಯ ಇಲಾಖೆ ಕಾರ್ಯಕ್ರಮಗಳು ನಾಲ್ಕು ಗೋಡೆಗಳ ಮದ್ಯೆ ನಡೆಯುತ್ತಿರುವುದು ಸರಿಯಲ್ಲ, ಬದಲಾಗಿ ಇಂತಹ ಕಾರ್ಯಕ್ರಮಗಳು ಸಾರ್ವಜನಿಕರ ಮಧ್ಯೆ ನಡೆಯಬೇಕು. ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನೊಳಗೊಂಡಂತೆ ಕಾರ್ಯಕ್ರಮ ರೂಪಿಸಬೇಕು. ಕಾಡು ಎಂದರೆ ಜನರಲ್ಲಿ ನಮ್ಮದು ಎನ್ನುವ ಭಾವನೆ ಮೂಡಿಸಬೇಕು, ಅವರಲ್ಲಿ ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಒಲುಮೆ ಹುಟ್ಟುವಂತೆ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ದೇವನಾಯಕ, ಪ್ರಾದೇಶಿಕ ಅರಣ್ಯ ವಿಭಾಗದ ಡಿಸಿಎಫ್. ಪ್ರಸನ್ನಕುಮಾರ್, ಬಿ.ಆರ್.ಟಿ.ವನ್ಯಧಾಮದ ಡಿಸಿಎಫ್ ಸಂತೋಷ್ ಕುಮಾರ್, ಎಸಿಎಫ್‌ಗಳಾದ ಸತೀಶ್,ಗೋಪಾಲ್, ಮಹದೇವ್, ಆರ್.ಎಫ್.ಓ ಹನುಮಂತರಾಜು ಸೇರಿದಂತೆ ಎಲ್ಲ ವಲಯಗಳ ಆರ್.ಎಫ್.ಓ.ಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.
ನಾಗರಹೊಳೆಯ ಆದಿವಾಸಿ ತಂಡದ ಸದಸ್ಯರು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.
ಎನ್.ಡಿ.ಸಿ.ಎ.ಧ್ವಜ ಹಸ್ತಾಂತರ:ಅಜಾದಿ ಅಮೃತ್ ಮಹೋತ್ಸವದ ಅಂಗವಾಗಿ ಈ ಬಾರಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಆಯೋಜಿಸಿರುವ ಈ ರ‍್ಯಾಲಿಯೊಂದಿಗೆ ಆಗಮಿಸಿದ್ದ ಬಿ.ಆರ್.ಟಿ ವನ್ಯಧಾಮದ ಮುಖ್ಯಸ್ಥ ಸಂತೋಷ್‌ಕುಮಾರ್ ಎನ್‌ಟಿಸಿಎ ಧ್ವಜವನ್ನು ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಗರಹೊಳೆ ಉದ್ಯಾನದ ಮುಖ್ಯಸ್ಥ ಮಹೇಶ್‌ಕುಮಾರರಿಗೆ ಹಸ್ತಾಂತರಿಸಿದರು.