Advertisement

ವಾಹನಗಳ ವೇಗಕ್ಕೆ ಬಲಿಯಾಗುತ್ತಿವೆ ಕಾಡುಪ್ರಾಣಿಗಳು: ಆಕ್ರೋಶ

11:43 AM Oct 21, 2021 | Team Udayavani |

ವಿಜಯಪುರ: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಜಿಂಕೆ ಸಾವನ್ನಪ್ಪಿರುವ ಘಟನೆ ಹೊಸಕೋಟೆ ತಾಲೂಕು ನಂದಗುಡಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಿಂತಾಮಣಿ-ಬೆಂಗಳೂರು ರಸ್ತೆಯ ಶಿವನಾಪುರ ಕ್ರಾಸ್‌ ಬಳಿ ಘಟನೆ ನಡೆದಿದ್ದು, ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದಾಗ ಪೊಲೀಸರ ಮಾಹಿತಿ ಆಧರಿಸಿ ಅರಣ್ಯಧಿಕಾರಿಗಳು ಮೃತ ಜಿಂಕೆಯನ್ನು ವಶಕ್ಕೆ ಪಡೆದ್ದಾರೆ.

Advertisement

ಆಹಾರ, ನೀರು ಅರಸಿ ರಸ್ತೆದಾಟುವ ದಾವಂತದಲ್ಲಿ ವೇಗವಾಗಿ ಚಲಿಸುವ ವಾಹನಕ್ಕೆ ಸಿಲುಕಿ, ನೂರಾರು ಕಾಡು ಪ್ರಾಣಿಗಳು ಜೀವ ಕಳೆದುಕೊಳ್ಳುತ್ತಿದ್ದರೂ. ಯಾವುದೇ ಕ್ರಮ ಕೈಗೊಳ್ಳದಿರುವುದು ಅರಣ್ಯಾಧಿಕಾರಿಗಳ ಬೇಜವಾಬ್ದಾರಿಗೆ ಸಾಕ್ಷಿಯಾಗಿದೆ ಎಂದು ಪ್ರಾಣಿಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಳಿವಿನಂಚಿಗೆ ತಲುಪುತ್ತಿವೆ ವನ್ಯಜೀವಿಗಳು: ನಂದಗುಡಿ ವಲಯದಲ್ಲಿ 1,500ಕ್ಕೂ ಹೆಚ್ಚು ಎಕರೆ ಅರಣ್ಯ ಪ್ರದೇಶವಿದ್ದು, ಸಾವಿರಾರು ಎಕರೆ ಮಾವು, ತೆಂಗು, ಸೀಬೆ, ಗೋಡಂಬಿ, ನೀಲಗಿರಿ, ಹುಣಸೆ ಸೇರಿದಂತೆ ಹಲವು ಬಗೆಯ ತೋಪುಗಳು ಅರಣ್ಯ ಪ್ರದೇಶವನ್ನು ಸುತ್ತುವರಿದಿದೆ. ರಾಜ್ಯ ಹೆದ್ದಾರಿ ಪಕ್ಕದಲ್ಲಿ ಗ್ರಾಮೀಣ ರಸ್ತೆಗಳು ಹಾದು ಹೋಗುತ್ತವೆ. ಅರಣ್ಯ ಪ್ರದೇಶದಲ್ಲಿ ಹಾದುಹೋಗುವ ರಸ್ತೆಗಳಲ್ಲಿ ವೇಗಮಿತಿ ವಿಧಿಸುವ ಜತೆಗೆ ಚಾಲಕರ ನಿರ್ಲಕ್ಷ್ಯವೂ ಸೇರಿದೆ.

ಇದನ್ನೂ ಓದಿ:- ಟಿ20 ವಿಶ್ವಕಪ್ ನಂತರ ಏಕದಿನ ತಂಡಕ್ಕೂ ಬದಲಿಗೆ ನಾಯಕ! ಕೊಹ್ಲಿಗೆ ಕೊಕ್?

ಅಲ್ಲಲ್ಲಿ ರಸ್ತೆ ಉಬ್ಬು ಗಳನ್ನು ನಿರ್ಮಿಸಬೇಕಿದೆ. ಆದರೆ, ಇಲ್ಲಿ ವೇಗ ಮಿತಿ ನಿಯಮ ನಾಮಫ‌ಲಕಕ್ಕೆ ಮಾತ್ರ ಸೀಮಿತವಾಗಿದೆ. ಬಹುತೇಕ ವಾಹನ ಚಾಲಕರಿಗೆ ರಾಷ್ಟ್ರೀಯ ಅಥವಾ ರಾಜ್ಯ ಹೆದ್ದಾರಿ ಅಥವಾ ಅರಣ್ಯ ಪ್ರದೇಶದಲ್ಲಿನ ರಸ್ತೆಗೂ ವ್ಯತ್ಯಾಸವೇ ಇಲ್ಲದಂತಾಗಿದೆ. ಪ್ರಾಣಿಗಳ ಮಾರಣ ಹೋಮಕ್ಕೆ ಕಡಿವಾಣ ಹಾಕಿ: ಅರಣ್ಯ, ಲೋಕೋಪ ಯೋಗಿ ಇಲಾಖೆ, ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಅಪರೂಪ ದ ವನ್ಯ ಮೃಗಗಳು ವೇಗವಾಗಿ ಬರುವ ವಾಹನ ಗಳಿಗೆ ಸಿಲುಕಿ ಬಲಿಯಾಗುತ್ತಿವೆ ಎಂದು ನಾಗರಿಕರ ಆರೋಪಿಸಿದ್ದಾರೆ.

Advertisement

ವಾಹನ ಗಳನ್ನು ನಿಧಾನಕ್ಕೆ ಚಲಿಸಿ ಎಂಬ ನಾಮ ಫ‌ಲಕ ಇಲಾಖೆ ಅಳವಡಿಸಿಲ್ಲ. ವಾಹನಗಳ ವೇಗ ಹಂಪ್‌ ಅಳವಡಿಸಲು ನಿಯಂತ್ರಣಕ್ಕೆ ಕಾನೂನಿನಲ್ಲಿ ಅವಕಾಶ ವಿದ್ದರೂ ಪಾಲನೆಗೆ ಮುಂದಾಗಿಲ್ಲ ಎಂಬು ದು ನಾಗರಿಕರ ಆರೋಪವಾಗಿದೆ. ಪಿಡಬ್ಲ್ಯುಡಿ ಹಾಗೂ ಪೊಲೀಸ್‌ ಇಲಾಖೆ ಜಂಟಿ ಯಾಗಿ ಸೂಕ್ತ ಕ್ರಮಕೈಗೊಂಡು ಕಾಡು ಪ್ರಾಣಿಗಳ ಮಾರಣ ಹೋಮಕ್ಕೆ ಕಡಿವಾಣ ಹಾಕ ಬೇಕೆಂಬುದು ಪ್ರಾಣಿ ಪ್ರಿಯರ ಆಗ್ರಹವಾಗಿದೆ.

“ಅರಣ್ಯ ಪ್ರದೇಶದಲ್ಲಿ ಹಾದು ಹೋಗುವ ರಸ್ತೆಗಳಲ್ಲಿ ವಾಹನಗಳು ವೇಗ ಮಿತಿಯಿಲ್ಲದೆ ಸಂಚರಿಸುತ್ತಿದ್ದು, ತಿಂಗಳಿಗೆ 10ಕ್ಕೂ ಹೆಚ್ಚು ಕಾಡು ಪ್ರಾಣಿಗಳು ಜೀವ ಕಳೆದುಕೊಳ್ಳುತ್ತಿವೆ. ಜಿಂಕೆ ಸತ್ತು ಬಿದ್ದಿದ್ದರೂ ಅರಣ್ಯಾಧಿಕಾರಿಗಳ ಸುಳಿವೇ ಇರಲಿಲ್ಲ.” – ಮಧುಸೂದನ್‌, ಸ್ಥಳೀಯ ನಿವಾಸಿ.

“ಅಪರಿಚಿತ ವಾಹನಕ್ಕೆ ಸಿಲುಕಿ ಜಿಂಕೆ ಸಾವನ್ನಪ್ಪಿದೆ. ಅಧಿಕಾರಿಗಳು ಮೃತ ಜಿಂಕೆಯನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ ನಡೆಸಿ, ಮುಂದಿನ ವಿಧಿ-ವಿಧಾನ ಅನುಸರಿಸಲಾಗಿದೆ. ಕಾಡುಪ್ರಾಣಿಗಳನ್ನು ಸಂರಕ್ಷಿಸಲು ವಾಹನಗಳ ವೇಗಕ್ಕೆ ಕಡಿವಾಣ ಹಾಕಲು ತ್ವರಿತವಾಗಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ನಾಮಫ‌ಲಕ ಅಳವಡಿಸಿ ಮತ್ತಷ್ಟು ಬಿಗಿ ಕ್ರಮ ವಹಿಸಲಾಗುವುದು.” ಪುಷ್ಪಲತಾ, ವಲಯ ಅರಣ್ಯಾಧಿಕಾರಿ, ಹೊಸಕೋಟ

ಬಸ್‌ಗೆ ಸಿಲುಕಿ ನವಿಲು ಸಾವು-

ವಿಜಯಪುರ: ವೇಗವಾಗಿ ಬರುತ್ತಿದ್ದ ಖಾಸಗಿ ಬಸ್‌ಗೆ ಸಿಲುಕಿ ನವಿಲು ಸಾವನ್ನಪ್ಪಿರುವ ಘಟನೆ ಹೊಸಕೋಟೆ ತಾಲೂಕು ನಂದಗುಡಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.ನಂದಗುಡಿ ಹೋಬಳಿಯಲ್ಲಿ ಮೂನಾಲ್ಕು ದಿನಗಳಲ್ಲೇ ಕಾಡು ಪ್ರಾಣಿಗಳ ಮಾರಣ ಹೋಮಕ್ಕೆ 2ನೇ ಬಲಿ ನಂದಗುಡಿ ಹೋಬಳಿ ವ್ಯಾಪ್ತಿಯ ಗಂಗಾಪುರ ಬಳಿ ದಾಟುತ್ತಿದ್ದಾಗ ಮುಳಬಾಗಿಲು ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್‌ಗೆ ನವಿಲು ಸಿಲುಕಿ ಸ್ಥಳದಲ್ಲೇ ಸಾವನ್ನಪಿದೆ. ಸುದ್ದಿತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದು, ಮೃತ ನವಿಲನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next