Advertisement

ಕಾಡು, ವನ್ಯಜೀವಿ ರಕ್ಷಣೆ ಸಿಬ್ಬಂದಿ ಕರ್ತವ್ಯ

02:06 PM May 20, 2018 | Team Udayavani |

ಹುಣಸೂರು: ಅರಣ್ಯ ಇಲಾಖೆ ಸಿಬ್ಬಂದಿ ಕಾಡು ರಕ್ಷಣೆ ಜತೆಗೆ ಕಾಡಂಚಿನ ಪ್ರದೇಶಗಳಲ್ಲಿ ವನ್ಯಜೀವಿ ಹಾಗೂ ಮಾನವ ಸಂಘರ್ಷ ತಡೆಗಟ್ಟುವ ಮಹತ್ತರ  ಜವಾಬ್ದಾರಿ ಹೊರಬೇಕಿದೆ ಎಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನ ಕುಮಾರ್‌ ತಿಳಿಸಿದರು.  

Advertisement

ನಾಗರಹೊಳೆ ರಾಷ್ಟ್ರೀಯ ಉದ್ಯಾನ ವನದ ಆನೆ ಚೌಕೂರು ವಲಯದಲ್ಲಿ ಶೈಕ್ಷಣಿಕ ಅಧ್ಯಯನ ಪ್ರವಾಸಕ್ಕಾಗಿ ಆಗಮಿಸಿದ್ದ ಪೊನ್ನಂ ಪೇಟೆ  ಅರಣ್ಯ ಮಹಾವಿದ್ಯಾಲಯದ ತರಬೇತಿನಿತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ವನ್ಯಜೀವಿ ವಲಯದ ಬಗ್ಗೆ ಮಾಹಿತಿ ನೀಡಿದ ಅವರು, ನಾಗರಹೊಳೆ ಉದ್ಯಾನವನ 643 ಚದರ ಕಿಲೋ ಮೀಟರ್‌ ವಿಸ್ತಾರ ಹೊಂದಿದೆ. ಒಂದೆಡೆ ಪಶ್ಚಿಮ ಘಟ್ಟಗಳ ಸಾಲು, ಮತ್ತೂಂದೆಡೆ ವೈನಾಡು ಹಾಗೂ  ಮಧುಮಲೈ ಅರಣ್ಯಕ್ಕೂ ಸಂಪರ್ಕವಿದೆ ಎಂದರು. 

ಮಾನವನ ದುರಾಸೆ: ವನ್ಯಜೀವಿ ವಲಯವನ್ನಾಗಿ ಘೋಷಣೆ ಮಾಡಿದ್ದರಿಂದಾಗಿ ಉದ್ಯಾನವನದಲ್ಲಿ ಸಾಕಷ್ಟು ಔಷಧ ಸಸ್ಯ ಪ್ರಬೇಧ, ವಿವಿಧ ಜಾತಿ  ಮರಗಳು ಇದರ ಜೊತೆಗೆ ಅರಣ್ಯಕ್ಕನುಗುಣವಾಗಿ ಪ್ರಾಣಿ ಸಂಕುಲಗಳು ಸ್ವತ್ಛಂದ ವಾಗಿ ಜೀವಿಸಲು ಸಾಧ್ಯವಾಗಿದೆ. ಒಂದೆಡೆ ಜನ ಸಂಖ್ಯಾ ಸ್ಫೋಟ,  ಮತ್ತೂಂದೆಡೆ ಮಾನವನ ದುರಾಸೆ, ಸ್ವಾರ್ಥಕ್ಕಾಗಿ ಕಾಡು ನಾಶಪಡಿಸುವ ಜತೆಗೆ ವನ್ಯಜೀವಿಗಳು ಸಹಜ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ.  ಇದರಿಂದ ಮಾನವ ಮತ್ತು ವನ್ಯಪ್ರಾಣಿಗಳ ಸಂಘರ್ಷ ನಡೆಯುತ್ತಲೇ ಇದೆ ಎಂದರು. 

ಅರಣ್ಯ ಅಧ್ಯಯನಕ್ಕೆ ಮುಂದಾಗಿ: ನಾಗರಿಕರಲ್ಲಿ ಕಾಡು ನಮ್ಮದೆನ್ನುವ ಭಾವನೆ ಬಾರದ ಹೊರತು ಇಲಾಖೆಯನ್ನು ದೂಷಿಸುವುದು ನಿಲ್ಲುವುದಿಲ್ಲ, ಮರ-ಗಿಡ  ಹನನವಾದಲ್ಲಿ, ವನ್ಯಜೀವಿಗಳು ಅರಣ್ಯದಿಂದ ಹೊರಬಂದಾಗ ಮಾತ್ರ ಅರಣ್ಯ ಇಲಾಖೆಯನ್ನು ದೂಷಿಸುವುದು ಮಾಮೂಲಾ ಗಿದೆ. ಆದರೆ ಇಲಾಖೆಗೆ  ನಿಯೋಜನೆಗೊಳ್ಳುವ ಸಿಬ್ಬಂದಿ ಮಾತ್ರ ಕಾಡು ನಮ್ಮದೆಂಬ ಭಾವನೆಯಿಂದ ಕಾಡೊಳಗಿನ ಎಲ್ಲ ಜೀವ ವೈವಿಧ್ಯತೆಯನ್ನು ಕಾಪಾಡುವ ಜೊತೆಗೆ ಅರಣ್ಯ ಅಧ್ಯಯನ ವಿಷಯದಲ್ಲಿ ಪದವಿಗಳಿಸಲು ಕೀಳರಿಮೆ ತೊರೆಯಬೇಕೆಂದು ಸೂಚಿಸಿದರು. 

ಸಂವಾದ: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕೊಡಗು ಮತ್ತು ಮೈಸೂರು ಜಿಲ್ಲೆಯ ವಿವಿಧ ಹಾಡಿ ಗಳಿಂದ ಹೊರಬಂದು ಹುಣಸೂರು ತಾಲೂಕಿನ  ಹನ ಗೋಡು ಹೋಬಳಿಯ ಶೆಟ್ಟಳ್ಳಿ-ಲಕ್ಕಪಟ್ಟಣ ಪುನರ್ವಸತಿ ಕೇಂದ್ರದಲ್ಲಿ ಬದುಕು ಕಟ್ಟಿಕೊಂಡಿರುವ ಆದಿವಾಸಿ ಹಾಡಿ ಮತ್ತು ನಾಡಿನ ಬದುಕಿನ ಬಗ್ಗೆ  ಹಾಗೂ ಕೇಂದ್ರದಲ್ಲಿ ಶಿಕ್ಷಣ ಪಡೆದುಕೊಳ್ಳುತ್ತಿರುವ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. 

Advertisement

ಸಾಕ್ಷಚಿತ್ರ ವೀಕ್ಷಣೆ: ಅರಣ್ಯ ಮತ್ತು ವನ್ಯಜೀವಿಗಳ ಬದುಕು-ಆಹಾರ ಕ್ರಮದ ಬಗ್ಗೆ ವೀರನಹೊಸಹಳ್ಳಿ ಗೇಟ್‌ ನಲ್ಲಿರುವ ಮಾಹಿತಿ ಕೇಂದ್ರದಲ್ಲಿ ಪಿಪಿಟಿ  ಮೂಲಕ ಸಾಕ್ಷಚಿತ್ರ ವೀಕ್ಷಿಸಿದರು. ಆರ್‌ಎಫ್ಒಗಳಾದ ಮಧುಸೂದನ್‌, ಸುರೇಂದ್ರ, ಕಂಠಾಪುರ ಡಿಆರ್‌ಎಫ್ಒ ಶಾರದಾ ನೇತೃತ್ವ ದಲ್ಲಿ ಮಹಾ  ವಿದ್ಯಾಲಯದ 55 ವಿದ್ಯಾರ್ಥಿಗಳು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next