Advertisement

ಕಾಡು- ಹಸಿರೇ ಬೆಸ್ಟ್‌ ಟೀಚರ್ರು!

12:39 PM Jan 23, 2018 | Team Udayavani |

ಮಕ್ಕಳು ಕಲಿಕೆಯನ್ನು ಚುರುಕುಗೊಳಿಸೋದು ಹೇಗೆ? ಮಕ್ಕಳನ್ನು ಶಾರ್ಪ್‌ ಮಾಡೋದು ಹೇಗೆ? ಈ ಪ್ರಶ್ನೆಗಳನ್ನೇ ಮುಂದಿಟ್ಟುಕೊಂಡು ಇಂದು ಶೈಕ್ಷಣಿಕ ಜಗತ್ತು ಪೈಪೋಟಿಗೆ ಇಳಿದಿದೆ. ಸ್ಕೂಲಿಗೆ ಹೋದ ಮಗ, ಟಾಪ್‌ ಆಗಿಯೇ ಬರುತ್ತಾನೆಂಬ ಕನವರಿಕೆ ಆ ವಿದ್ಯಾರ್ಥಿಯ ಮನೆಯಲ್ಲಿ ದೀಪದಂತೆ ಉರಿಯುತ್ತಿರುತ್ತದೆ. ಆದರೆ, ವಿದ್ಯಾರ್ಥಿಗಳ ಪಾಲಿಗೆ ಶಾಲೆಯೇ ಪರಿಪೂರ್ಣ ಬೋಧಿವೃಕ್ಷವಲ್ಲ. ಕ್ಲಾಸ್‌ರೂಮ್‌ಗಿಂತ ಹೆಚ್ಚಾಗಿ, ಮಕ್ಕಳು ಹೆಚ್ಚು ಅಧ್ಯಯನಶೀಲರಾಗುವುದು ನಿಸರ್ಗದ ಮಧ್ಯೆಯಂತೆ!

Advertisement

ಭಾರತದ ತಜ್ಞರೂ ಸೇರಿದಂತೆ ಜಗತ್ತಿನ ಪ್ರಮುಖ ಮನಶಾಸ್ತ್ರಜ್ಞರೆಲ್ಲ ಮಕ್ಕಳ ಕಲಿಕೆಯ ರಹಸ್ಯ ಬೇಧಿಸಲು ಮುಂದಾದಾಗ ಕಂಡುಬಂದ ಸತ್ಯವಿದು. ಅಮೆರಿಕದ ಇಲಿನಾಯ್ಸ ಯುನಿವರ್ಸಿಟಿಯ ತಜ್ಞರು ಇತ್ತೀಚೆಗೆ ಈ ವಿಚಾರದ ಮೇಲೆ ಸಂಶೋಧನೆ ಕೈಗೊಂಡಿದ್ದರು. ಜಗತ್ತಿನ ನಾನಾ ಭಾಗದ ಪ್ರಮುಖ ಶಿಕ್ಷಣ ತಜ್ಞರನ್ನೂ ಇದರಲ್ಲಿ ಒಳಗೊಳ್ಳುವಂತೆ ಮಾಡಿದ್ದರು. ಅಲ್ಲಿ ಕಂಡುಬಂದ ಕೆಲವು ಸಂಗತಿಗಳು ಹೀಗಿದ್ದವು…

– ಮಕ್ಕಳು ಕ್ಲಾಸ್‌ರೂಮ್‌ಗಿಂತ ಹೆಚ್ಚಾಗಿ, ಹೊರಗಿನ ದೃಶ್ಯಗಳನ್ನು ನೋಡಿಯೇ ಹೆಚ್ಚು ಜ್ಞಾನವನ್ನು ಗ್ರಹಿಸುತ್ತಾರೆ. ಹೊರಗಿನ ಲೋಕವನ್ನು ತೋರಿಸುತ್ತಲೇ, ಅವರಿಗೆ ಶಿಕ್ಷಣವನ್ನು ನೀಡಿದರೆ, ಅವರು ಬೇಗನೆ ಆ ಸಂಗತಿಗಳನ್ನು ಜೀರ್ಣಿಸಿಕೊಳ್ಳುತ್ತಾರೆ.

– ಶಾಲೆಯಲ್ಲಿ ಗಂಟೆಗಟ್ಟಲೆ ಕುಳಿತು, ಪಾಠ ಮಾಡುವುದಕ್ಕಿಂತ, ಹೊರಗಿನ ಮೂರ್ನಾಲ್ಕು ನಿಮಿಷದ ದೃಶ್ಯಗಳು, ಎಲ್ಲವನ್ನೂ ಹೇಳಿಕೊಡುತ್ತವೆ.

– ನಗರದ ನಡುವೆ ಶಾಲೆಯನ್ನು ನಿರ್ಮಿಸುವುದಕ್ಕಿಂತ, ಕಾಡಿನ ನಡುವೆಯೋ, ಹಸಿರುಬೆಟ್ಟದ ನಡುವೆಯೋ ಶಾಲೆಯಿದ್ದರೆ, ಅಂಥ ವಾತಾವರಣದಲ್ಲಿ ಮಕ್ಕಳು ಬೇಗನೆ ಮತ್ತು ಹೆಚ್ಚು ಕಲಿಯುತ್ತಾರೆ.

Advertisement

– ಹಸಿರು ಬಣ್ಣವು ಮಕ್ಕಳಲ್ಲಿ ಗಾಢ ನೆನಪಿನ ಶಕ್ತಿಯನ್ನು ಬಿತ್ತುತ್ತದೆ. ನಿಸರ್ಗದ ಮೂಲಕ ವಿಜ್ಞಾನವನ್ನು ಕಲಿಸುವ ಪ್ರಯತ್ನವಾದರೆ, ಅವರ ಕಲಿಕೆ ಇನ್ನಷ್ಟು ಪರಿಣಾಮಕಾರಿ ಆಗಿರುತ್ತದೆ.

ಇದು ನಿಜವಿದ್ದರೂ ಇರಬಹುದು ಅಲ್ವೇ? ಎಸ್ಸೆಸ್ಸೆಲ್ಸಿ, ಪಿಯುಸಿ ಫ‌ಲಿತಾಂಶ ಬಂದಾಗ, ನಗರ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ವಿದ್ಯಾರ್ಥಿಗಳೇ ಅಚ್ಚರಿಯ ಫ‌ಲಿತಾಂಶ ಕೊಟ್ಟಿರುತ್ತಾರೆ. ಅವರ ಶಾಲೆಗಳು, ಕಾಲೇಜುಗಳೆಲ್ಲ ಇರುವುದು ನಿಸರ್ಗದ ನಡುವೆ ಆಗಿರುತ್ತದೆ. ನಿಸರ್ಗಕ್ಕಿಂತ ದೊಡ್ಡ ಪಾಠಶಾಲೆ ಮತ್ತೂಂದು ಬೇಕಾ?

Advertisement

Udayavani is now on Telegram. Click here to join our channel and stay updated with the latest news.

Next