Advertisement
ಅಡಿಕೆ ತೋಟಕ್ಕೆ ಬೇರುಹುಳು ಬಾಧೆ ವ್ಯಾಪಿಸಿತ್ತು. ಮರಗಳ ತುದಿ ಸಣಕಲಾಯ್ತು, ಇಳುವರಿ ಕಡಿಮೆಯಾಯ್ತು. ವರ್ಷದಿಂದ ವರ್ಷಕ್ಕೆ ಸಮಸ್ಯೆ ಹೆಚ್ಚಿತು. ತೋಟಕ್ಕೆ ಹೋಗಲು ಬೇಜಾರಾಗುತ್ತಿತ್ತು. ಮರಗಳ ಬುಡಕ್ಕೆ ಬೇವಿನ ಗೊಬ್ಬರ, ಕಂಪನಿ ಕೀಟನಾಶಕ ಹಾಕಲು ತಜ್ಞರ ಸಲಹೆ ದೊರೆಯಿತು. ಮಳೆಗಾಲದ ಆರಂಭದಲ್ಲಿ ದುಂಬಿ ಹಿಡಿದು ಕೊಲ್ಲಲು ಸೂಚಿಸಿದರು. ನಮ್ಮ ಹಿತ್ತಲಿನಲ್ಲಿ ಜ್ವರ ಮದ್ದಿಗೆ ಬಳಕೆಯಾಗುವ ಚರಾಯತ ಕಡ್ಡಿ( ನೆಲಬೇವು) ಯ ಗಿಡ ಪೊದೆಯಾಗಿ ಬೆಳೆದಿತ್ತು. ಬೇವಿಗಿಂತ ದುಪ್ಪಟ್ಟು ಕಹಿ ಗುಣ ಇದರಲ್ಲಿದೆ. ಬೇವಿನ ಗೊಬ್ಬರದ ಬದಲು ಇದರ ಎಲೆ ಬಳಸಿದರೆ ಹೇಗೆಂದು ಯೋಚಿಸಿ ತೋಟದಲ್ಲಿ ನಾಟಿ ಮಾಡಿದೆವು. ಮುಂದಿನ ಎರಡು ವರ್ಷಗಳಲ್ಲಿ ಎರಡು ಮೂರು ಅಡಿಯೆತ್ತರ ಚೆಂದದ ಪೊದೆಯಾಗಿ ಎಕರೆಗಟ್ಟಲೆ ಗಿಡ ಹಬ್ಬಿತ್ತು. ಫಕ್ಕನೆ ನೋಡಿದರೆ, ಅಡಿಕೆಯ ಜೊತೆಗೆ ಹೊಸ ಉಪಬೆಳೆಯಂತೆ ಕಾಣುತ್ತಿತ್ತು.
Related Articles
Advertisement
40 ಟನ್ ದೊಡ್ಡಿ ಗೊಬ್ಬರ ಬೇಕು. ಇವನ್ನು ಖರೀದಿಸಿ ಬಳಸುವ ಬದಲು ತೋಟದ ಆವರಣದಲ್ಲಿ ಬೆಳೆದ ಸೊಪ್ಪಿನಿಂದ ತಯಾರಿಸಲು ಸಾಧ್ಯವಾದರೆ ಉತ್ತಮ ಗೊಬ್ಬರವೂ ದೊರೆತು, ಹಣವೂ ಉಳಿಯುತ್ತದೆ.
ರಾಜ್ಯ ಅರಣ್ಯ ಇಲಾಖೆಯ ಎರಡು ದಶಕದ ಹಿಂದೆ ಕೃಷಿ ಅರಣ್ಯ ಪದ್ಧತಿ ಕುರಿತು ಸಮೀಕ್ಷೆ ನಡೆಸಿತ್ತು. 19 ಜಿಲ್ಲೆಗಳ ಆಯ್ದ 25 ತಾಲೂಕಿನ 53 ಹಳ್ಳಿಯ 2650 ಕುಟುಂಬಗಳಲ್ಲಿ ಮರ ಆಧಾರಿತ ಕೃಷಿ ಕುರಿತು ವಿವರ ಸಂಗ್ರಹಿಸಿತು. ರೈತರು ಹೊಲಗಳಲ್ಲಿ ಹಿಂದಿನಿಂದ ಯಾವ ಜಾತಿಯ ಮರಗಳನ್ನು ಬೆಳೆಯುತ್ತಿದ್ದಾರೆ ? ಈಗ ಯಾವ ಜಾತಿಯ ಮರ ಬೆಳೆಸಲು ಇಚ್ಛಿಸಿದ್ದಾರೆ ? ರೈತರು ಕೃಷಿ ಅರಣ್ಯ ಪದ್ಧತಿಯನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಇರುವ ತೊಡಕುಗಳೇನು ? ಇಂಥವೇ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ನಡೆಯಿತು. ಬೆಂಗಳೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ನಡೆದ ಅಧ್ಯಯನ ಹೊಲದ ಮರದ ಕತೆ ಹೇಳುತ್ತದೆ. ಮರ ಬೆಳೆಸಲು ಸಾಕಷ್ಟು ಭೂಮಿ ಇಲ್ಲ, ಆದಾಯ ದೊರಕಲು ಹೆಚ್ಚು ವರ್ಷ ಕಾಯಬೇಕು, ಅಕ್ಕಪಕ್ಕದ ರೈತರಿಂದ ತೊಂದರೆ, ಕಳ್ಳತನದ ಭಯ, ನೀರಿನ ಸಮಸ್ಯೆ, ಮುಖ್ಯವಾಗಿ, ಪೈರಿನ ಇಳುವರಿ ಕಡಿಮೆಯಾಗುತ್ತದೆ, ಮರ ಬೆಳೆಸುವ ಕುರಿತು ತಿಳುವಳಿಕೆ ಇಲ್ಲ… ಹೀಗೆ ಹಲವು ಕಾರಣಗಳು ದೊರೆತವು . ಸಣ್ಣ ಮತ್ತು ಅತಿ ಸಣ್ಣ ಹಿಡುವಳಿಯೇ ದೊಡ್ಡ ಸಮಸ್ಯೆಯಾಗಿರುವುದು ಇನ್ನೊಂದು ಪ್ರಮುಖ ಸಮಸ್ಯೆಯಾಗಿತ್ತು.
ಕೃಷಿ ಪ್ರದೇಶವನ್ನು 4 ಭಾಗಗಳಾಗಿ ವಿಂಗಡಿಸಿ ಅಲ್ಲಿರುವ ಮರಗಳ ಮಾಹಿತಿ ಗಮನಿಸಿದಾಗ ಸ್ವಾರಸ್ಯಕರ ಸಂಗತಿಯೊಂದು ಹೊರಬಿತ್ತು. ಬೇವಿನ ಮರ ರಾಜ್ಯದ ಒಟ್ಟೂ ಕೃಷಿ ಅರಣ್ಯದ ಶೇಕಡಾ 16 ಭಾಗದಲ್ಲಿತ್ತು. ಅದರಂತೆ ತೆಂಗು 15, ಮಾವು 11, ಹುಣಸೆ 10, ಕರಿಜಾಲಿ 4.5, ಹಲಸಿನ ಮರಗಳಿಗೆ 4 ಶೇಕಡಾ ಪ್ರದೇಶಗಳಲ್ಲಿ ನೆಲೆ ನೀಡಲಾಗಿತ್ತು. ಮಲೆನಾಡಿನಲ್ಲಿ ತೆಂಗು,ಮಾವು, ಅಡಿಕೆ, ಹಲಸು, ತೇಗ, ಗೋಡಂಬಿ ಬೆಳೆಯುತ್ತಿದ್ದರು. ಮೈಸೂರು ಸೀಮೆಗಳಲ್ಲಿ ತೆಂಗು, ಮಾವು, ನೀಲಗಿರಿ, ಹೊಂಗೆ, ಆಲದ ಮರ ಬೆಳೆಸಿದ್ದರು. ಉತ್ತರ ಕರ್ನಾಟಕದಲ್ಲಿ ಬೇವು , ಮಾವು ,ಕರಿಜಾಲಿ, ನೀಲಗಿರಿ, ಬಳ್ಳಾರಿ ಜಾಲಿ, ಬಿದಿರು ಕಂಡುಬಂದಿತು. ಆದರೆ ರೈತರು ಇತ್ತೀಚಿನ ವರ್ಷಗಳಲ್ಲಿ ಮೇವು, ಗೊಬ್ಬರ ನೀಡುವ ಮರಗಳಿಗಿಂತ ವಾಣಿಜ್ಯ ದೃಷ್ಟಿಯಿಂದ ಲಾಭದಾಯಕವಾದ ತೇಗ, ನೀಲಗಿರಿ, ಅಕೇಸಿಯಾ, ಸರ್ವೆ, ಸಿಲ್ವರ್‌ಓಕ್ ಬೆಳೆಸಲು ಇಷ್ಟಪಡುತ್ತಿರುವುದು ಗಮನಕ್ಕೆ ಬಂದಿದೆ. ದಾಳಿಂಬೆ, ಅಡಿಕೆ, ಬಾಳೆ ಕೊಯ್ದು ಮಾರಿದಂತೆ ಮರ ಮಾರುವ ಆಸಕ್ತಿ ಬೆಳೆದಿದೆ. ಸಾವಯವ ಕೃಷಿಗೆ ಶಕ್ತಿ ಬರಲು ಸ್ಥಳೀಯ ಮರಗಳ ಕುರಿತು ಅರಿವು ಮೂಡಿಸುವ ಮುಖ್ಯ ಕಾರ್ಯ ಅಗತ್ಯವಿದೆ. ಮರ ಬೆಳೆಸುವ ಮೂಲಕ ನೈಸರ್ಗಿಕ ಜೀವ ವ್ಯವಸ್ಥೆ ಪೋಷಿಸಿದರೆ ಮಣ್ಣಿನ ಸೂûಾ¾ಣು ಜೀವಿಗಳು ಉಳಿಯುತ್ತವೆ. ಕೀಟಗಳ ಜೈವಿಕ ನಿಯಂತ್ರಣಕ್ಕೆ ಪಕ್ಷಿಗಳ ನೆರವು ದೊರೆಯುತ್ತದೆ. ಮರಗಳಿಗೆ ರೋಗ ಸಹಿಸುವ ಶಕ್ತಿ ಹೆಚ್ಚುತ್ತದೆ.
ಮುಂದಿನ ಸಂಚಿಕೆ: ಕೃಷಿ ಯೋಗ್ಯ ಕಾಡು ಸಂಕುಲ
– ಶಿವಾನಂದ ಕಳವೆ