ಶಿವಮೊಗ್ಗ: ಇಲ್ಲಿನ ಉಂಬ್ಳೇಬೈಲಿನಲ್ಲಿ ಮತ್ತೆ ಕಾಡಾನೆ ಕಾಟ ಆರಂಭವಾಗಿದೆ. ಉಂಬ್ಳೇಬೈಲು ಅರಣ್ಯ ವ್ಯಾಪ್ತಿಯ ಹಾಲ್ ಲಕ್ಕವಳ್ಳಿ, ಕೈದೋಟ್ಲು ಗ್ರಾಮದಲ್ಲಿ ತೋಟಗಳಿಗೆ ನುಗ್ಗಿರುವ ಆನೆ ಅಡಿಕೆ ಸಸಿಗಳನ್ನು ಹಾಳುಗೆಡವಿದೆ.
ಕೈದೊಟ್ಲು ಗ್ರಾಮದ ಬಾಲಪ್ಪ ಎಂಬುವರ ತೋಟದಲ್ಲಿ 25ಕ್ಕೂ ಹೆಚ್ಚು ಅಡಿಕೆ ಗಿಡಗಳು ನಾಶವಾಗಿದೆ.
ಇದನ್ನೂ ಓದಿ:ಅಶೋಕವನ ಎಸ್ಟೇಟಿಗೆ ಸ್ವಾಗತ ಕೋರಿದ ‘ಹೀರೋ’…ಶೆಟ್ಟರ ಸಿನಿಮಾ ರಿಲೀಸ್ ಡೇಟ್ ಪ್ರಕಟ
ಭದ್ರಾ ಅಭಯಾರಣ್ಯ ವ್ಯಾಪ್ತಿಯಿಂದ ಬಂದು ಶಿವಮೊಗ್ಗ ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಕಾಡಾನೆ ಹಾವಳಿ ನೀಡುತ್ತಿದೆ. ಇತ್ತೀಚಿಗಷ್ಟೇ ಸಕ್ರೇಬೈಲು ಆನೆಗಳನ್ನು ಬಳಸಿ, ಕಾಡಾನೆ ಕಾಡಿಗಟ್ಟುವ ಕಾರ್ಯಾಚರಣೆ ನಡೆಸಲಾಗಿತ್ತು. ಈ ಕಾರ್ಯಾಚರಣೆ ಮುಗಿದ ಕೆಲ ದಿನಗಳಲ್ಲೇ ಮತ್ತೆ ಕಾಡಾನೆ ನಾಡಿಗೆ ಲಗ್ಗೆಯಿಟ್ಟಿದ್ದು ಜನರ ನಿದ್ದೆಗೆಡಿಸಿದೆ.
ಇದನ್ನೂ ಓದಿ: ಸಮುದಾಯಗಳ ಮೀಸಲು ಬೇಡಿಕೆ ಸರ್ಕಾರ ಕಾನೂನಾತ್ಮಕ ಕ್ರಮ: ಕೋಟ ಶ್ರೀನಿವಾಸ ಪೂಜಾರಿ
ಕಳೆದ ಕೆಲ ವರ್ಷಗಳಿಂದ ಆಗಾಗ್ಗೆ ಗಡಿಯಂಚಿನ ಗ್ರಾಮಗಳಿಗೆ ಕಾಡಾನೆಗಳು ದಾಳಿ ಮಾಡಿ ರೈತರಿಗ ಹಾನಿ ಮಾಡುತ್ತಿದ್ದು, ಅವುಗಳನ್ನು ಕಾಡಿಗಟ್ಟುವ ಬದಲು, ಸೆರೆಹಿಡಿದು ಸ್ಥಳಾಂತರ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.