Advertisement

ಕಾಡಾನೆ ದಾಳಿಗೆ ಬೆಳೆ, ಕೃಷಿ ಪರಿಕರ ನಾಶ

04:46 PM Jul 13, 2022 | Team Udayavani |

ರಾಮನಗರ: ಹುಣಸನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುಂಬೇನಹಳ್ಳಿ ಗ್ರಾಮದಲ್ಲಿ ಮೂರು ಆನೆಗಳು ದಾಳಿ ನಡೆಸಿ, ರೈತರ ಟೊಮೊಟೋ ಬೆಳೆ ಮತ್ತು ನೀರಾವರಿ ಪರಿಕರ ಸೇರಿದಂತೆ ಮಾವಿನ ಮರಗಳನ್ನು ನಾಶಪಡಿಸಿರುವ ಘಟನೆ ನಡೆದಿದೆ.

Advertisement

ಕಳೆದ ತಿಂಗಳಿಂದ ತೆಂಗಿನಕಲ್ಲು ಅರಣ್ಯದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು, ಅರಣ್ಯ ಇಲಾಖೆ ಕಾರ್ಯಾಚರಣೆಯಿಂದ ಎಷ್ಟೇ ಪ್ರಯತ್ನ ಪಟ್ಟು ಓಡಿಸಿದರು ಸ್ವಸ್ಥಾನಕ್ಕೆ ತೆರಳದೆ, ತಪ್ಪಿಸಿಕೊಂಡಿರುವ ಮೂರು ಆನೆಗಳು ತೆಂಗಿನಕಲ್ಲು ಅರಣ್ಯದಿಂದಚಿಕ್ಕಮಣ್ಣುಗುಡ್ಡೆ ಅರಣ್ಯ, ಹಂದಿಗುಂದಿ ಅರಣ್ಯ ಹೀಗೆ ಮೂರು ದಿಕ್ಕಿನಲ್ಲೂ ಓಡಾಟ ನಡೆಸುತ್ತಿದ್ದು, ಆನೆಗಳಹಿಂಡು ಪ್ರತಿದಿನ ರಾತ್ರಿ ವೇಳೆಯಲ್ಲಿ ರೈತರ ಜಮೀನಿಗೆನುಗ್ಗಿ ದಾಂಧಲೆ ನಡೆಸಿ ಮಾವು, ಬಾಳೆತೋಟ, ತೆಂಗು ನಾಶಡಿಸುತ್ತಿವೆ. ಆದರೂ, ಅರಣ್ಯ ಇಲಾಖೆ ಅಧಿಕಾರಿಗಳು ಆನೆ ಕಂದಕ ನಿರ್ಮಿಸಿ, ಜಮೀನಿಗೆ ಬರದಂತೆ ಮುನ್ನೆಚ್ಚರಿಕೆ ವಹಿಸುವ ಕೆಲಸಕ್ಕೆ ಮುಂದಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿವಿಧೆಡೆ ಕಾಡಾನೆ ಓಡಾಟ: ತೆಂಗಿನಕಲ್ಲು ಅರಣ್ಯದಿಂದ ನೆಲಮಲೆ, ಕೋಟಹಳ್ಳಿ ಮುಖಾಂತರಅರ್ಕಾವತಿ ನದಿ ದಾಟಿ ಗುನ್ನೂರು ಅರಣ್ಯದಮುಖಾಂತರ ಸೀಗೆಹುದಿ ಅರಣ್ಯಕ್ಕೆ ಬಂದು ತುಂಬೇನಹಳ್ಳಿ ಗ್ರಾಮದ ಆಸುಪಾಸಿನಲ್ಲಿ ಓಡಾಟನಡೆಸಿರುವ ಆನೆಗಳ ಹಿಂಡು ಕೃಷ್ಣ, ಪಾಲಾಕ್ಷ ಎಂಬುವರ ಟೊಮೊಟೋ ಬೆಳೆಯನ್ನು ನಾಶಪಡಿಸಿ, ಪಾಲಾಕ್ಷ ಎಂಬ ರೈತರ ಮಾವು, ನೀರಾವರಿ ಪರಿಕರ, ಬೋರ್‌ ವೆಲ್‌ ಸ್ಟಾರ್ಟರ್‌ ಬೋರ್ಡ್‌ ನಾಶಪಡಿಸಿವೆ ಎಂದು ತಿಳಿದು ಬಂದಿದೆ.

ಆನೆಗಳ ದಾಳಿಯಿಂದ ಬೆಳೆದ ಟೊಮೊಟೋ, ತೆಂಗು, ಮಾವಿನ ಮರ, ನೀರಾವರಿ ಪರಿಕರ  ನಾಶವಾಗಿದೆ. ಇದರಿಂದ ನಾವು ಆರ್ಥಿಕ ನಷ್ಟ ಹೊಂದುವಂತಾಗಿದೆ. ಕೂಡಲೇ ಸರ್ಕಾರ ನಿಗದಿಪಡಿಸಿದ ವೈಜ್ಞಾನಿಕ ಪರಿಹಾರ ನೀಡಬೇಕು. ಆನೆಗಳನ್ನು ಅವುಗಳ ಸ್ವಸ್ಥಾನಕ್ಕೆ ಸೇರಿಸಿ, ಪದೇ ಪದೇ ಆನೆಗಳು ನಮ್ಮ ಗ್ರಾಮದ ಕಡೆ ಬರುವುದನ್ನು ತಪ್ಪಿಸಬೇಕು ಎಂದು ರೈತರಾದ ನಂಜಪ್ಪ, ಪಾಲಾಕ್ಷ, ಕೃಷ್ಣ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next