Advertisement
ಶನಿವಾರ ಪಟ್ಟಣದ ಹಾಸನ ಜಿಲ್ಲಾ ಬೆಳೆಗಾರರ ಸಂಘದ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕಾಡಾನೆ ಸಮಸ್ಯೆ ನಿವಾರಣೆ ಸಭೆಯಲ್ಲಿ ಮಾತನಾ ಡಿದರು. ಮುಖ್ಯಮಂತ್ರಿಗಳು ಸಕಲೇಶಪುರ ತಾಲೂಕಿನ ಆಳಿಯನಾಗಿರುವ ಕಾರಣ ಸಮಸ್ಯೆ ಬಗ್ಗೆ ಅವರಿಗೂ ಸಾಕಷ್ಟು ಅರಿವಿದೆ. ಸಮಸ್ಯೆ ನಿವಾರಣೆಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದಾರೆ. ಜೀವ ಹಾನಿ ತಪ್ಪಿಸುವ ನಿಟ್ಟಿನಲ್ಲಿ ಇನ್ನೂ 10 ಕಾಡಾನೆಗಳಿಗೆ ರೇಡಿಯೋ ಕಾಲರ್ ಆಳವಡಿಸಲು ಸೂಚನೆ ನೀಡಲಾಗಿದೆ.
Related Articles
Advertisement
ಇಲಾಖೆ ಕ್ರಮಗಳ ಬಗ್ಗೆ ವಿವರಣೆ: ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಬಸವರಾಜ್ ಮಾತನಾಡಿ, ಕಾಡಾನೆ ಸಮಸ್ಯೆ ನಿವಾರಣೆಗಾಗಿ ಇಲಾಖೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು. ಸಭೆಯಲ್ಲಿ ಹಾಸನ ಕ್ಷೇತ್ರದ ಶಾಸಕ ಪ್ರೀತಂ ಜೆ.ಗೌಡ, ಮಾಜಿ ಶಾಸಕರಾದ ಎಚ್.ಎಂ. ವಿಶ್ವನಾಥ್, ಬಿ.ಆರ್.ಗುರುದೇವ್, ಸರ್ಕಾರದ ಅಪಾರ ಕಾರ್ಯದರ್ಶಿ ಜಾ ವೀದ್ ಅಖ್ತರ್, ಕೇಂದ್ರ ವನ್ಯ ಜೀವಿ ವಿಭಾಗದ ಕುಮಾರ್ ಪುಷ್ಕರ್, ಸಿಸಿಎಫ್ ಸಿದ್ರಾಮಪ್ಪ, ಡೀಸಿ ಅರ್ಚನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮುಂತಾದವರಿದ್ದರು.
ಸರ್ಕಾರದ ನಡೆಗೆ ಶಾಸಕರ ಖಂಡನೆ: ಶಾಸಕ ಎಚ್.ಕೆ ಕುಮಾರಸ್ವಾಮಿ ಮಾತನಾಡಿ, ಸಮಸ್ಯೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಅರಿವಿದೆ. ಟಾಸ್ಕ್ ಪೊರ್ಸ್ ರಚನೆಯಾಗಿದೆ. ಆದರೆ, ಯಾವುದೆ ನೌಕರರನ್ನು ನೇಮಿಸಿಲ್ಲ. ಇದರಿಂದಲು ಸಮಸ್ಯೆ ನಿವಾರಣೆ ಸಾಧ್ಯವಿಲ್ಲ. ಎತ್ತಿನಹೊಳೆ ನೀರು ತೆಗೆದುಕೊಂಡು ಹೋಗಲು ಸಾವಿರಾರು ಕೋಟಿ ವೆಚ್ಚ ಮಾಡುವ ಸರ್ಕಾರ, ಆನೆ ಕಾರಿಡಾರ್‌ಗಾಗಿ ಜಮೀನನ್ನು ಸರ್ಕಾರಕ್ಕೆ ಬಿಟ್ಟುಕೊಡಲು ಸಿದ್ಧರಿ ರುವ ರೈತರ ಜಮೀನು ಖರೀದಿಸಲು ಐದನೂರು ಕೋ ಟಿ ನೀಡುವುದಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು.
ಕರವೇ-ಸಚಿವರ ನಡುವೆ ಜಟಾಪಟಿ:
ಸಕಲೇಶಪುರ: ಕರವೇ ಮುಖಂಡರ ಪರವಾಗಿ ಮಾತನಾಡಿದ ಯಡೇಹಳ್ಳಿ ಮಂಜುನಾಥ್, ಬರಿ ಸಭೆಗಳನ್ನು ನಡೆಸಿದರೆ ಯಾವುದೆ ಪ್ರಯೋಜನವಿಲ್ಲ. ಗ್ರಾಮೀಣ ಜನರು ಬದುಕು ಇನ್ನಿಲ್ಲದಂತೆ ಹಾಳಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಧ್ಯೆ ಪ್ರವೇಶಿಸಿ ಮಾತನಾಡಿದ ಉಸ್ತುವರಿ ಸಚಿವ ಕೆ.ಗೋಪಾಲಯ್ಯ ಸಮಸ್ಯೆಗಳ ಬಗ್ಗೆ ನನಗೆಲ್ಲ ತಿಳಿದಿದೆ. ಗದ್ದಲ ಮಾಡದೇ ಒಬ್ಬೋಬ್ಬರೇ ಮಾತನಾಡಿ, ಇಲ್ಲಿಗೆ ನಾನು ಬಂದಿರುವುದು ಸಮಸ್ಯೆ ಪರಿಹಾರಕ್ಕೆ ಎಂದರು.
ಮಾತು ಮುಂದುವರೆಸಿದ ಮಂಜುನಾಥ್, ಹೆಬ್ಬನಹಳ್ಳಿ ಮನು ಮೃತಪಟ್ಟ ವೇಳೆ ನೀಡಿದ ಎಲ್ಲ ಭರವಸೆಗಳು ಸುಳ್ಳಾಗಿವೆ. ಸರ್ಕಾರಿ ಉದ್ಯೋಗ, 15 ಲಕ್ಷ ಪರಿಹಾರ ನೀಡುವ ಭರವಸೆಗಳು ಈಡೇರಿಸಬೇಕು. ಕಾಡಾನೆ ಸಮಸ್ಯೆ ಪರಿಹಾರಕ್ಕೆ ಬಜೆಟ್‌ನಲ್ಲಿ ಅನುದಾನ ನೀಡದೆ ಚುನಾವಣೆ ಹಿನ್ನೆಲೆ ಸಭೆಗಳನ್ನು ನಡೆಸಿದರೆ ನಾವು ಕೇಳುವುದಿಲ್ಲ ಎಂದರು.
ಇದಕ್ಕೆ ಸಚಿ ವರು ಆಕ್ಷೇಪ ವ್ಯಕ್ತಪ ಡಿಸಿ, ಸಿಎಂ ಬರುತ್ತಿರುವುದು ಗಿಮಿಕ್‌ಗಾಗಿ ಅಲ್ಲ. ಸಂಪೂರ್ಣ ವಿಚಾರ ಅರಿವಿದ್ದರೆ ಮಾತನಾಡಿ, ಬಜೆಟ್‌ನಲ್ಲಿ ಅನುದಾನವಿದ್ದರೆ ಮಾತ್ರ ಕೆಲಸ ಮಾಡಬೇಕಿಲ್ಲ ಎಂದು ಸಿಡು ಕಿ ಸಮಸ್ಯೆ ನಿವಾರಣೆಗೆ ನಿಮ ಗೆಷ್ಟು ಕಾಳಜಿ ಇದೆಯೋ ಅಷ್ಟೇ ಕಾಳಜಿ ಜಿಲ್ಲಾ ಉಸ್ತುವರಿ ಸಚಿವನಾಗಿ ನನಗೂ ಇದೆ. ಸಮಸ್ಯೆ ಇದ್ದರೆ ಹೇಳಿ ಇದರಲ್ಲಿ ರಾಜಕೀಯ ಬೆರಸ ಬೇಡಿ ಎಂದರು.
ಇದಕ್ಕೆ ಕರವೇ ಮುಖಂಡರು ಆಕ್ಷೇಪ ವ್ಯಕ್ತಪಡಿಸಿ ಮುಖ್ಯಮಂತ್ರಿಗೆ ಮನವಿ ನೀಡಲಿದ್ದೇವೆ. ಸಿಎಂ ಜತೆ ಸಭೆ ನಡೆಸಲು ಅವಕಾಶ ನೀಡದಿದ್ದರೆ ಕಾರ್ಯಕ್ರಮದ ದಿನ ನಾವೇನು ಮಾಡ ಬೇಕು ಗೊತ್ತಿದೆ ಎಂದು ಯಡೇಹಳ್ಳಿ ಮಂಜುನಾಥ್ ಎಚ್ಚರಿಕೆ ನೀಡಿದರು.
ಇದೇ ವೇಳೆ ಬೆಳೆಗಾರ ಸಂಘಟನೆ ಹಾಗೂ ಕರವೇ ಮುಖಂಡರ ನಡುವೆ ಮಾತಿನ ಚಕಾಮುಖೀ ನಡೆಯಿತು.