Advertisement

Subramanya: ಐನೆಕಿದು ಶಾಲಾ ಬಳಿ ರಸ್ತೆ ದಾಟಿದ ಕಾಡಾನೆ

08:25 PM Mar 07, 2024 | Team Udayavani |

ಸುಬ್ರಹ್ಮಣ್ಯ: ಕಾಡಾನೆಯೊಂದು ಶಾಲಾ ಬಳಿ ರಸ್ತೆ ದಾಟಿ ಆತಂಕ ಸೃಷ್ಟಿಸಿದ ಘಟನೆ ಕಡಬ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ಐನೆಕಿದು ಎಂಬಲ್ಲಿ ಮಾ.6ರ ಸಂಜೆ ನಡೆದಿದೆ.

Advertisement

ಸುಬ್ರಹ್ಮಣ್ಯ-ಹರಿಹರ ಪಲ್ಲತ್ತಡ್ಕ ರಸ್ತೆಯ ಸಮೀಪ ಕಡಬ ತಾಲೂಕಿನ ಐನೆಕಿದು ಶಾಲಾ ಬಳಿ  ಕಾಡಾನೆಯೊಂದು (ಒಂಟಿ ಸಲಗ) ಸಂಜೆ ರಸ್ತೆ ದಾಟಿದೆ. ಐನೆಕಿದು ಕಡೆಯಿಂದ ಕೋಟೆಗೆ ಸಂಪರ್ಕಿಸುವ ರಸ್ತೆಯನ್ನು ದಾಟಿದೆ. ಕಾಡಾನೆ ರಸ್ತೆ ದಾಟುತ್ತಿರುವುದನ್ನು ವ್ಯಕ್ತಿಯೊಬ್ಬರು ವಿಡಿಯೋ ಚಿತ್ರಿಸಿದ್ದಾರೆ. ಘಟನೆಯಿಂದ

ಆ ಭಾಗದ ಜನತೆ ಆತಂಕಕ್ಕೀಡಾಗಿದ್ದಾರೆ. ರಾತ್ರಿ ವೇಳೆ ಈ ಭಾಗದಲ್ಲಿ ಸಂಚರಿಸುವಾಗ ಎಚ್ಚರಿಕೆ ವಹಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next