Advertisement
ಕಳೆದೊಂದು ತಿಂಗಳಲ್ಲಿ ಜಿಲ್ಲೆಯಲ್ಲಿ ಕಾಡಾನೆ ಹಾವಳಿಗೆ 3 ಮಂದಿ ಸಾವಿಗೀಡಾಗಿದ್ದು, ಗುರುವಾರ ನಡೆದಿರುವ ಘಟನೆ ಸೇರಿ ದಂತೆ 6 ಮಂದಿ ಕಾಡಾನೆಯಿಂದ ಗಾಯಗೊಂಡಿದ್ದಾರೆ. ಇನ್ನು ತೆಂಗಿನಕಲ್ಲು, ಚಿಕ್ಕಮಣ್ಣುಗುಡ್ಡೆ, ನರೀಕಲ್ಲು ಹಾಗೂ ಹಂದಿಗುಂದಿ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ನಡೆದಿರುವ ಬೆಳೆ ಹಾನಿ, ಆಸ್ತಿಪಾಸ್ತಿಗಳ ಹಾನಿ ಪ್ರಕರಣಗಳು ನೂರರ ಗಡಿದಾಟಿವೆ.
Related Articles
Advertisement
ಕಾಡಾನೆ ಹಾವಳಿಗೆ ವೈಜ್ಞಾನಿಕ ಪರಿಹಾರ ಬೇಕು: ಅರಣ್ಯ ಇಲಾಖೆಯ ವಾದಗಳನ್ನು ರೈತ ಮುಖಂಡರು ಹಾಗೂ ಸಾರ್ವಜನಿಕರು ಒಪ್ಪುತ್ತಿಲ್ಲ. ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ಕಾಡಾನೆಗಳು ದಾಂಧಲೆ ಎಬ್ಬಿಸುತ್ತಿದ್ದು, ಮೂಲನೆಲೆಯಿಂದ ಕಾಡಾನೆಗಳು ಹೊರ ಬರುತ್ತಿರುವುದನ್ನು ನಿಯಂತ್ರಿಸಲು ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ಪರಿಹಾರ ಕಲ್ಪಿಸುವ ಕೆಲಸವಾಗಬೇಕಿದೆ. ಈ ಬಗ್ಗೆ ಅರಣ್ಯ ಇಲಾಖೆ ಗಂಭೀರವ ಕ್ರಮ ವಹಿಸಬೇಕು.
ಪರಿಹಾರ ನೀಡಿ ಅರಣ್ಯ ಇಲಾಖೆ ಹೈರಾಣು: ಜಿಲ್ಲೆಯಲ್ಲಿ ಕಾಡಾನೆ, ಚಿರತೆ, ಕರಡಿ, ಕಾಡುಹಂದಿ ಹಾವಳಿ ತೀವ್ರಗೊಂಡಿದ್ದು, ಕಾಡಾನೆಗಳ ಹಾವಳಿಯಿಂದ ಉಂಟಾದ ನಷ್ಟಕ್ಕೆ ಅರಣ್ಯ ಇಲಾಖೆ ನಿರಂತರವಾಗಿ ಪರಿಹಾರ ನೀಡಿ ಹೈರಾಣಾಗಿದೆ. ಕಳೆದ 5 ವರ್ಷಗಳಲ್ಲಿ ಜಿಲ್ಲೆಯಲ್ಲಿ ಕಾಡುಪ್ರಾಣಿಗಳಿಂದ ಸಂಭವಿಸಿರುವ ಹಾನಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ 11.18 ಕೋಟಿ ರೂ. ಪರಿಹಾರ ನೀಡಿದೆ. ಜಿಲ್ಲೆಯಲ್ಲಿ ಕಳೆದ 5 ವರ್ಷಗಳಲ್ಲಿ 18 ಜೀವ ಹಾನಿ ಸಂಭವಿಸಿದ್ದು 1.18 ಕೋಟಿ ರೂ., 67 ಮಾನವ ಗಾಯ ಪ್ರಕರಣಗಳಿಗೆ 50.46 ಲಕ್ಷರೂ., 13830 ಬೆಳೆ ಹಾನಿ ಪ್ರಕರಣಗಳಿಗೆ 7 ಕೋಟಿ ರೂ., 770 ಆಸ್ತಿ ಹಾನಿಗಳಿಗೆ 41.78 ಲಕ್ಷ ರೂ., 3277 ಜಾನುವಾರುಗಳ ಸಾವಿಗೆ 2.35 ಕೋಟಿ ರೂ, ಪರಿಹಾರ ನೀಡಲಾಗಿದೆ.
ಜೂ.23ರಂದು ಜಿಲ್ಲೆಯ ವಿವಿಧ ಅರಣ್ಯಗಳಲ್ಲಿ 26 ಕಾಡಾನೆಗಳು ಇದ್ದವು. ಇದೀಗ 9 ಆನೆಗಳು ಮಾತ್ರ ಜಿಲ್ಲೆಯ ಪ್ರಾದೇಶಿಕ ಅರಣ್ಯಗಳಲ್ಲಿ ಇದ್ದು, ಇವುಗಳನ್ನು ಇನ್ನು 5 ರಿಂದ 6 ದಿನಗಳಲ್ಲಿ ಮೂಲ ನೆಲೆಗೆ ಕಳುಹಿಸಲಾಗುವುದು. 100 ಮಂದಿ ಸಿಬ್ಬಂದಿಯನ್ನು ಇದಕ್ಕಾಗಿ ನಿಯೋಜಿಸಲಾಗಿದೆ. 60 ಮಂದಿ ಆನೆ ಕಾರ್ಯಪಡೆಯ ಸಿಬ್ಬಂದಿ ಸಹ ಕಾರ್ಯಾಚರಣೆ ಕೈಗೊಂಡಿದ್ದಾರೆ. ● ದೇವರಾಜು, ಡಿಎಫ್‌ಒ, ರಾಮನಗರ
ಅರಣ್ಯ ಇಲಾಖೆ ವೈಜ್ಞಾನಿಕವಾಗಿ ಆನೆಗಳ ಸಮಸ್ಯೆಗೆ ಪರಿಹಾರ ಕಲ್ಪಿಸಲು ಮುಂದಾಗಬೇಕು. ಜಿಲ್ಲೆಯಲ್ಲಿ ಆನೆಗಳು ಗುಂಪುಗುಂಪಾಗಿ ಗ್ರಾಮದ ಸನಿಹದಲ್ಲೇ ತಿರುಗಾಡುತ್ತಿದ್ದು, ಇದರಿಂದಾಗಿ ಜನತೆ ಕಂಗಾಲಾಗಿದ್ದಾರೆ. 50ಕ್ಕೂ ಹೆಚ್ಚು ಆನೆಗಳು ಜಿಲ್ಲೆಯ ವಿವಿಧ ಅರಣ್ಯ ಪ್ರದೇಶದಲ್ಲಿ ಇದ್ದು, ಅರಣ್ಯ ಇಲಾಖೆ ಕಾಡಾನೆ ಹಾವಳಿಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ● ಸಿ.ಪುಟ್ಟಸ್ವಾಮಿ, ಹಿರಿಯ ರೈತ ಹೋರಾಟಗಾರ
-ಸು.ನಾ.ನಂದಕುಮಾರ್