Advertisement

ಕಾಸರಗೋಡು: ಕಾಡಾನೆ ತುಳಿತಕ್ಕೆ ಯುವಕ ಬಲಿ

03:20 AM Sep 08, 2018 | Team Udayavani |

ಕಾಸರಗೋಡು: ಪಾರಪಳ್ಳದಲ್ಲಿ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಬುಡಕಟ್ಟು ಜನಾಂಗಕ್ಕೆ ಸೇರಿದ ಯುವಕನ ಶವ ಪತ್ತೆಯಾಗಿದ್ದು, ಕಾಡಾನೆಯ ತುಳಿತದಿಂದ ಸಾವಿಗೀಡಾಗಿರುವುದು ದೃಢ ಪಟ್ಟಿದೆ. ಜಿಲ್ಲೆಯಲ್ಲಿ ಆನೆ ದಾಳಿಯಿಂದ ಸಾವಿಗೀಡಾದ ಮೊದಲ ಪ್ರಕರಣ ಇದು. ಕಾರಡ್ಕ ಬಳಿಯ ಕೊಟ್ಟುಂಗುಳಿ ಪರಿಶಿಷ್ಟ ಪಂಗಡ ಕಾಲನಿ ನಿವಾಸಿ ದಿ| ಕರಿಯನ್‌ ಅವರ ಪುತ್ರ ಕುಮಾರನ್‌ ಯಾನೆ ಮಾರನ್‌ (43) ಮೃತಪಟ್ಟವರು. ಕೂಲಿ ಕಾರ್ಮಿಕ ಕುಮಾರನ್‌ ಸೋಮವಾರ ಬೆಳಗ್ಗೆ ಕೆಲಸಕ್ಕೆಂದು ಮನೆಯಿಂದ ತೆರಳಿದ್ದು, ಬಳಿಕ ನಾಪತ್ತೆಯಾಗಿದ್ದರು. ಮನೆಯವರು ವ್ಯಾಪಕವಾಗಿ ಶೋಧ ನಡೆಸಿ ಪತ್ತೆಯಾಗದ ಹಿನ್ನೆಲೆಯಲ್ಲಿ ಆದೂರು ಪೊಲೀಸ್‌ ಠಾಣೆಗೆ ನಾಪತ್ತೆ ದೂರು ನೀಡಿದ್ದರು.

Advertisement

ಗುರುವಾರ ಮನೆಯಿಂದ ಒಂದು ಕಿ.ಮೀ. ದೂರದ ಪಾರಪಳ್ಳ ಅರಣ್ಯ ಪ್ರದೇಶದಲ್ಲಿ ಕುಮಾರನ್‌ ಅವರ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಕಂಡ ಸ್ಥಳೀಯರು ಆದೂರು ಪೊಲೀಸರಿಗೆ ಮಾಹಿತಿ ನೀಡಿದರು. ಕಾಡಾನೆ ತಿವಿದ ಗುರುತುಗಳು ಮೃತದೇಹದಲ್ಲಿ ಪತ್ತೆಯಾಗಿವೆ. ಮಾತ್ರವಲ್ಲ ಅವರನ್ನು ಎಳೆದೊಯ್ದ ಗುರುತುಗಳೂ ಆ ಪರಿಸರದಲ್ಲಿ ಕಂಡು ಬಂದಿವೆ. ಕೆಲಸ ಬಿಟ್ಟು ವಾಪಸಾಗುತ್ತಿದ್ದಾಗ ಕುಮಾರನ್‌ ಮೇಲೆ ಆನೆ ದಾಳಿ ನಡೆಸಿರಬಹುದೆಂದು ಶಂಕಿಸಲಾಗಿದೆ.

ತಾಯಿ ಅನಾಥೆ
ಕುಮಾರನ್‌ ಬಾಲಕನಾಗಿದ್ದಾಗಲೇ ತಂದೆ ನಿಧನ ಹೊಂದಿದ್ದರು. ಸಹೋದರಿಯರಿಗೆ ವಿವಾಹವಾಗಿದೆ. ಬಳಿಕ ತಾಯಿಯನ್ನು ಸಲಹುವ ಹೊಣೆ ಅವಿವಾಹಿತನಾದ ಕುಮಾರನ್‌ ಮೇಲೆ ಬಿತ್ತು. ಈಗ ಮಗನ ಅಕಾಲಿಕ ಸಾವಿನಿಂದಾಗಿ ತಾಯಿ ಚರುಂಬಿ ಏಕಾಂಗಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next