Advertisement

ಸುಬ್ರಹ್ಮಣ್ಯ: ಹೊಳೆ ಬದಿ ಕಾಡಾನೆ ಪ್ರತ್ಯಕ್ಷ; ಸಾರ್ವಜನಿಕರಲ್ಲಿ ಆತಂಕ

11:54 PM Mar 24, 2023 | Team Udayavani |

ಸುಬ್ರಹ್ಮಣ್ಯ: ಇಲ್ಲಿಗೆ ಸಮೀಪದ ಆದಿಸುಬ್ರಹ್ಮಣ್ಯದ ಕಲ್ಲಗುಡ್ಡೆ ಎಂಬಲ್ಲಿ ಹೊಳೆ ಬದಿಯಲ್ಲಿ ಕಾಡಾನೆ ಕಂಡುಬಂದ ಘಟನೆ ಶುಕ್ರವಾರ ನಡೆದಿದೆ. ಕಾಡಾನೆ ನೀರು ಕುಡಿಯಲು ಆಗಮಿಸಿದೆ ಎನ್ನಲಾಗಿದ್ದು ಬಳಿಕ ಅರಣ್ಯದತ್ತ ತೆರಳಿದೆ ಎಂದು ತಿಳಿದುಬಂದಿದೆ.

Advertisement

ಐತ್ತೂರು: ರಸ್ತೆಗೆ ಬಂದ ಕಾಡಾನೆ
ಸುಬ್ರಹ್ಮಣ್ಯ: ಕಡಬ ತಾಲೂಕಿನ ಐತ್ತೂರು – ಕೊಣಾಜೆ ಸಂಪರ್ಕ ರಸ್ತೆಯಲ್ಲಿ ಶುಕ್ರವಾರ ಸಂಜೆ ಕಾಡಾನೆ ಕಾಣಸಿಕ್ಕಿದ್ದು, ವೀಡಿಯೋ ವೈರಲ್‌ ಆಗಿದೆ.

ಐತ್ತೂರು- ಕಡ್ಯ ಕೊಣಾಜೆ ಸಂಪರ್ಕ ರಸ್ತೆಯ ಕೊಣಾಜೆ ಸಮೀಪ ರಾಮನಗರ ಕ್ರಾಸ್‌ ಎಂಬಲ್ಲಿ ಕಾಡಾನೆ ರಬ್ಬರ್‌ತೋಟದಿಂದ ಆಗಮಿಸಿ ರಸ್ತೆ ದಾಟಿ ಇನ್ನೊಂದು ಭಾಗದ ರಬ್ಬರ್‌ ತೋಟದತ್ತ ಳಿಡುತ್ತ ಸಾಗಿದೆ. ಕೆಲಸದಿಂದ ಮನೆಗೆ ರಸ್ತೆಯಲ್ಲಿ ತೆರಳುತ್ತಿದ್ದವರಿಗೆ ಕಾಡಾನೆ ಕಾಣಸಿಕ್ಕಿದೆ ಎಂದು ತಿಳಿದುಬಂದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next