ಸಕಲೇಶಪುರ: ತಾಲೂಕಿನ ಕಿರೇಹಳ್ಳಿ ಗ್ರಾಮದಲ್ಲಿ ಭಾನುವಾರ ಮುಂಜಾನೆ ಕಾಡಾನೆಗಳ ಹಿಂಡೊಂದು ರಸ್ತೆ ದಾಟಲು ಪರೇಡ್ ನಡೆಸಿರುವುದು ಕಂಡು ಬಂದಿದೆ.
ತಾಲೂಕಿನಲ್ಲಿ ಕಾಡಾನೆ ಸಮಸ್ಯೆ ಮಿತಿಮೀರಿದ್ದು ಕಾಡಾನೆಗಳ ಹಾವಳಿಯಿಂದ ಅಪಾರ ಪ್ರಮಾಣದ ಬೆಳೆ ನಷ್ಟವಾಗುತ್ತಿರುವುದಲ್ಲದೆ ಹಲವು ಸಾವು ನೋವುಗಳು ಸಹ ಸಂಭವಿಸಿದೆ.
ತಾಲೂಕಿನ ಹಲಸುಲಿಗೆ ಗ್ರಾಮದಿಂದ ಕಿರೇಹಳ್ಳಿ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಕಾಡಾನೆಗಳು ತನ್ನ ಮರಿಗಳೊಂದಿಗೆ ರಸ್ತೆ ದಾಟುತ್ತಿರುವುದನ್ನು ಕೆಲವರು ವಿಡಿಯೋ ಮಾಡಿರುವುದು ವೈರಲ್ ಆಗಿದೆ.
ಕಾಡಾನೆ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಹಲವು ಪ್ರತಿಭಟನೆಗಳು ನಡೆದರು ಪ್ರಯೋಜನವಾಗಿಲ್ಲ. ನಾಯಿಗಳ ಹಿಂಡಿನಂತೆ ತಿರುಗಾಡುತ್ತಿರುವ ಕಾಡಾನೆಗಳ ಸಮಸ್ಯೆ ಗೆ ಸೂಕ್ತ ಪರಿಹಾರ ಹುಡುಕಬೇಕೆಂದು ಭತ್ತದ ವ್ಯಾಪಾರಿ ಸುಬ್ರಹ್ಮಣ್ಯ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಭಾರತದ 156 ಕಾನೂನುಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಅನ್ವಯಿಸುತ್ತಿರಲಿಲ್ಲ: ಜೆಪಿ ನಡ್ಡಾ