Advertisement
ದೇವನಗುಲ ಗ್ರಾಮದ ಸತೀಶ್ ಆಚಾರ್, ಬೆಳ್ಳಾಚಾರ್, ನಟೇಶ್ ಆಚಾರ್ ಮೊದಲಾದ ರೈತರ ತೋಟಗಳಿಗೆ ಕಾಡಾನೆ ದಾಳಿ ನಡೆಸಿ ಕಾಫಿ, ಏಲಕ್ಕಿ. ಬಾಳೆ. ಮೆಣಸು, ಅಡಿಕೆ ಮೊದಲಾದ ಗಿಡಗಳನ್ನು ತುಳಿದು ನಷ್ಟ ಮಾಡಿವೆ.
ಕೊಟ್ಟಿಗೆಹಾರ ಸುತ್ತಮುತ್ತ ಕಾಡಾನೆ ಹಾವಳಿ ನಿರಂತರವಾಗಿದ್ದು ಕಾಡಾನೆಗಳನ್ನು ಊರಿನತ್ತ ಮುಖ ಮಾಡದಂತೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕಾಡಿನಲ್ಲಿ ಆನೆಗಳಿಗೆ ಆಹಾರದ ಕೊರತೆಯಾಗಿದ್ದು ಅರಣ್ಯ ಇಲಾಖೆ ಕಾಡುಗಳಲ್ಲಿ ಆನೆಗಳು ತಿನ್ನುವಂತಹ ಬಿದಿರು ಮೊದಲಾದ ಗಿಡಗಳನ್ನು ಬೆಳೆದಿದ್ದರೆ ಆನೆಗಳು ಊರಿನತ್ತ ಮುಖ ಮಾಡುತ್ತಿರಲಿಲ್ಲ ಅರಣ್ಯ ಇಲಾಖೆ ಪ್ರಾಣಿಗಳು ತಿನ್ನುವ ಗಿಡಗಳನ್ನು ಬೆಳೆಸದೇ ಇರುವುದರಿಂದ ಪ್ರಾಣಿಗಳಿಗೆ ಆಹಾರದ ಕೊರತೆಯಾಗಿ ಊರಿನತ್ತ ಮುಖ ಮಾಡುತ್ತಿವೆ. ಇದನ್ನೂ ಓದಿ: ಕ್ಷುಲ್ಲಕ ವಿಚಾರಕ್ಕೆ ಮೂವರು ಮಕ್ಕಳಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಗೆ ಯತ್ನಿಸಿದ ತಾಯಿ