Advertisement

ಬೆಂಕಿಗೂ ಹೆದರಲ್ಲ, ಜನರಿಗೂ ಬೆದರಲ್ಲ :ನಾಗರಹೊಳೆ ರಸ್ತೆಯಲ್ಲಿ 2 ಗಂಟೆ ಜನರನ್ನು ಕಾಡಿದ ಸಲಗ

08:57 PM Dec 06, 2021 | Team Udayavani |

ಹುಣಸೂರು :  ನಾಗರಹೊಳೆ ಉದ್ಯಾನದಂಚಿನ ಗುರುಪುರದ ಟಿಬೆಟ್ ಕ್ಯಾಂಪಿನಲ್ಲಿ ಸಲಗದ ಹಾವಳಿ ಮುಂದುವರೆದಿದ್ದು, ಹಗಲು ವೇಳೆಯೇ ದಾಳಿ ನಡೆಸಿದ್ದು, ಸಾಕಷ್ಟು ಹಾನಿ ಉಂಟುಮಾಡಿದ ಸಲಗವನ್ನು ಗ್ರಾಮಸ್ಥರು ಕಾಡಿಸಿ ಕಾಡಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಕೂಗಾಟಕ್ಕೆ ಬೆದರಿದ ಸಲಗ :
ಮೇವಿಗಾಗಿ ಉದ್ಯಾನವನ್ನು ದಾಟಿಬಂದ ಈ ಪುಂಡಾನೆಯು ವಾಪಸ್ ತೆರಳದೆ ಮದ್ಯಾಹ್ನ ಗುರುಪುರ ಸಿ ಮತ್ತು ಜೆಡ್ ವಿಲೇಜ್‌ಗೆ ನುಗ್ಗಿದ ಸಲಗವನ್ನು ಕಂಡ ಜನರು ಕೂಗಾಟ ನಡೆಸಿದ್ದರಿಂದ ಗಾಬರಿಯಾಗಿ ಎದುರಿಗೆ ಸಿಕ್ಕ ಜಮೀನಿಗೆ ಅಳವಡಿಸಿದ್ದ ಕಲ್ಲುಕಂಬ, ತಂತಿಬೇಲಿಯನ್ನು ತುಳಿದು ನಾಶಪಡಿಸಿದೆ.

ಘೀಳಿಟ್ಟ ಸಲಗ:
ನಾಗರಹೊಳೆ ಮುಖ್ಯರಸ್ತೆಯಲ್ಲಿದ್ದ ಸಲಗವು ಜನರ ಕೂಗಾಟ-ರಂಪಾಟದಿAದ ಬೇಸತ್ತು ಹಲವು ಬಾರಿ ಘೀಳಿಡುತ್ತಾ ಜನರನ್ನೇ ಅಟ್ಟಾಡಿಸಿಕೊಂಡು ಬಂತು. ಕೋಪಗೊಂಡಿದ್ದ ಸಲಗವು ನಾಗಪುರ ಶಾಲೆಯ ಮುಂಭಾಗದಲ್ಲಿನ ವಿದ್ಯುತ್ ಕಂಬವನ್ನೇ ಗುದ್ದಿ ಮುರಿದು ಹಾಕಿತು. ಈ ವೇಳೆ ವಿದ್ಯುತ್ ಕಿಡಿಗಳು ಹೊರಹೊಮ್ಮಿತ್ತಾದರೂ ಯಾವುದೇ ಅಪಾಯ ಸಂಭವಿಸಿಲ್ಲ.

ಬೆಳೆ ನಾಶ:
ಸುಮಾರು ಎರಡು ಗಂಟೆಗಳ ಕಾಲ ರಸ್ತೆಯಲ್ಲಿದ್ದ ಸಾರ್ವಜನಿಕರನ್ನು ಅಟ್ಟಾಡಿಸಿತು. ಅಲ್ಲದೆ ನಾಗಪುರ ಮತ್ತು ಟಿಬೆಟ್ ಕ್ಯಾಂಪ್‌ನ ಶುಂಠಿ ಜಮೀನಿಗೆ ದಾಂಗುಡಿಯಿಟ್ಟು ರೈತರ ಬೆಳೆಯನ್ನು ತಿಂದು ತುಳಿದು ನಾಶಪಡಿಸಿದೆ. ಟಿಬೇಟ್ ಕ್ಯಾಂಪಿನ ಬಳಿ ವ್ಯಕ್ತಿಯೊರ್ವ ಉರಿಯುವ ಪಂಜು ಹಿಡಿದು ಆನೆಯನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸಿದರಾದರೂ ಬೆಂಕಿಗೂ ಹೆದರದೆ ಕಲ್ಲುಕಂಬ-ತAತಿ ಬೇಲಿಯನ್ನು ತುಳಿದು ಹಾಳು ಮಾಡಿತು.

ವಿಷಯ ತಿಳಿದು ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಸಾರ್ವಜನಿಕರ ನೆರವಿನಿಂದ ಕಾಡಿಗಟ್ಟುವಲ್ಲಿ ಯಶಸ್ವಿಯಾದರು.

Advertisement

ಪುಂಡಾನೆಯ ಪುಂಡಾಟ:
ಈ ಪುಂಡಾನೆಯು ವರ್ಷದ ಹಿಂದಷ್ಟೆ ಮುದಗನೂರು ಬಳಿಯ ಜಮೀನಿನಲ್ಲಿದ್ದ ಟ್ರ್ಯಾಕ್ಟರ್, ಟ್ರೇಲರ್‌ಗಳನ್ನು ಗುದ್ದಿ ಕೆಡವಿ ಹಾಳು ಜಖಂಗೊಳಿಸಿತ್ತು. ಅಲ್ಲದೆ ತಿಂಗಳ ಹಿಂದಷ್ಟೆ ಮತ್ತೊಂದು ಪುಂಡಾನೆ ಟಿಬೇಟ್ ಕ್ಯಾಂಪಿನಲ್ಲಿ ಮನೆಗೆ ನುಗ್ಗಿ ಸಾಕಷ್ಟು ಹಾನಿ ಮಾಡಿದ್ದಲ್ಲದೆ ಭರತವಾಡಿ ಗ್ರಾಮದಮನೆ, ವೀರನಹೊಸಳ್ಳಿ ಅರಣ್ಯ ವಸತಿಗೃಹ ಸೇರಿದಂತೆ ನಾಗಪುರ, ಪೆಂಜಳ್ಳಿ ಗಿರಿಜನಹಾಡಿಯಲ್ಲಿ ಅಪಾರ ಪ್ರಮಾಣದ ಶುಂಠಿ, ಜೋಳ ಮತ್ತು ಬಾಳೆಬೆಳೆ ಸೇರಿದಂತೆ ಇತರ ಬೆಳೆಗಳನ್ನು ನಾಶಪಡಿಸಿತ್ತು ಹಾಗೂ ಇತ್ತೀಚೆಗಷ್ಟೆ ಮದಗಜವೊಂದು ಹುಣಸೂರು-ನಾಗರಹೊಳೆ ಮುಖ್ಯರಸ್ತೆಯ ನಾಗಾಪುರ ಬಳಿ ರೈಲ್ವೆ ಕಂಬಿ ತಡೆಗೋಡೆ ಹತ್ತಿ ಕಾಡು ಸೇರಿಕೊಂಡಿದ್ದನ್ನು ಸ್ಮರಿಸಬಹುದು.

ಒಂಟಿ ಸಲಗದ ಹಾವಳಿ ತಪ್ಪಿಸಿ:
ಈ ಭಾಗದಲ್ಲಿ ಒಂಟಿ ಸಲಗಗಳ ಹಾವಳಿ ವಿಪರೀತವಾಗಿದ್ದು, ರೈತರು ಹೈರಾಣಾಗಿದ್ದಾರೆ. ರಾತ್ರಿವೇಳೆ ಓಡಾಡಲು ಭಯಪಡುವಂತಾಗಿದ್ದು, ಇನ್ನಾದರೂ ಅರಣ್ಯದಂಚಿನಲ್ಲಿ ರೈಲ್ವೆ ಹಳಿ ಬೇಲಿ ಪೂರ್ಣಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next