ಮೂಡಿಗೆರೆ: ಗುತ್ತಿಹಳ್ಳಿ ಗ್ರಾಮಕ್ಕೆ ಕಾಡಾನೆಯೊಂದು ದಾಳಿ ನಡೆಸಿ ರೈತ ಕಷ್ಟಪಟ್ಟು ಬೆಳೆಸಿದ ಬೆಳೆಗಳನ್ನು ನಾಶಪಡಿಸಿದ ಘಟನೆ ಮೂಡಿಗೆರೆ ತಾಲೂಕಿನ ಗುತ್ತಿಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಗುತ್ತಿ ಹಳ್ಳಿ ಗ್ರಾಮದ ಪ್ರವೀಣ್ ಎಂಬುವರಿಗೆ ಸೇರಿದ್ದ ತೋಟ ಇದಾಗಿದ್ದು ಬುಧವಾರ ಕಾಡಾನೆ ತೋಟಕ್ಕೆ ದಾಳಿ ಮಾಡಿ ರೈತ ಕಷ್ಟ ಪಟ್ಟು ಸಾಲ ಮಾಡಿ ಬೆಳೆಸಿದ್ದ ಕಾಫಿ, ಅಡಕೆ ಬೆಳೆಗಳನ್ನು ನಾಶ ಮಾಡಿದೆ. ಘಟನೆಯಿಂದ ಕಂಗಾಲಾದ ರೈತ ಸೂಕ್ತ ಪರಿಹಾರ ನೀಡುವಂತೆ ಒತ್ತಾಯ ಮಾಡಿದ್ದಾನೆ, ಅಲ್ಲದೆ ಗ್ರಾಮಕ್ಕೆ ದಾಳಿ ಮಾಡಿದ ಕಾಡಾನೆಯನ್ನು ಕೂಡಲೇ ಸ್ಥಳಾಂತರ ಮಾಡಬೇಕೆಂದು ಗ್ರಾಮದ ಜನ ಅರಣ್ಯ ಇಲಾಖೆಗೆ ಒತ್ತಾಯ ಮಾಡಿದ್ದಾರೆ.
ಇದನ್ನೂ ಓದಿ: ಸಿಎಂ ಘೋಷಣೆ ಕುತೂಹಲ : ಡಿಕೆಶಿ ತವರು ಜಿಲ್ಲೆಯಲ್ಲಿ ಹೈ ಅಲರ್ಟ್