ಮಡಿಕೇರಿ: ಮಾಕುಟ್ಟ ಬ್ರಹ್ಮಗಿರಿ ವನ್ಯಜೀವಿ ಅರಣ್ಯ ವ್ಯಾಪ್ತಿಯಲ್ಲಿ ಗಾಯಗೊಂಡು ಳಿಡುತ್ತಿದ್ದ ಕಾಡಾನೆಗೆ ಅರಣ್ಯ ಇಲಾಖೆ ಚಿಕಿತ್ಸೆ ನೀಡಿದೆ. ಚೇತರಿಸಿಕೊಂಡಿರುವ ಕಾಡಾನೆ ಇದೀಗ ಮತ್ತೆ ಕಾಡು ಸೇರಿಕೊಂಡಿದೆ.
ಒಂಟಿ ಸಲಗ ಘೀಳಿಡುತ್ತಿದ್ದ ಪ್ರದೇಶಕ್ಕೆ ಭೇಟಿ ನೀಡಿದ ಅರಣ್ಯ ಅಧಿಕಾರಿಗಳ ತಂಡ ಡಿಎಫ್ಒ ಎ.ಟಿ.ಪೂವಯ್ಯ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿತು. ವನ್ಯಜೀವಿ ವೈದ್ಯರಾದ ಡಾ| ಚಿಟ್ಟಿಯಪ್ಪ, ಡಾ| ಪ್ರಶಾಂತ್, ಶಾರ್ಪ್ ಶೂಟರ್ ರಂಜನ್ ಹಾಗೂ ಮಾಕುಟ್ಟ ವಲಯದ ಅರಣ್ಯ ಸಿಬಂದಿ ಮತ್ತಿಗೋಡಿನಿಂದ ಸಾಕಾನೆಗಳ ನೆರವು ಪಡೆದು ಗಾಯಾಳು ಸಲಗಕ್ಕೆ ಸೂಕ್ತ ಚಿಕಿತ್ಸೆ ನೀಡಿದರು. ಚಿಕಿತ್ಸೆಯ ಅನಂತರ ಚೇತರಿಸಿಕೊಂಡ ಕಾಡಾನೆ ಕಾಡಿಗೆ ಮರಳಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.