ಘಾಜಿಯಾಬಾದ್ (ಉ.ಪ್ರ.): ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಆಕೆಯ ಪ್ರಿಯಕರನನ್ನು ಕೊಂದು, ಆತನ ದೇಹವನ್ನು ತುಂಡು ತುಂಡಾಗಿ ಕಸದ ತೊಟ್ಟಿಗೆ ಎಸೆಯಲಾಗಿದೆ. ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ಈ ಘೋರ ಕೃತ್ಯ ನಡೆದಿದೆ.
ಮೀಲಾಲ್ ಪ್ರಜಾಪತಿ ಎಂಬಾತನ ಪತ್ನಿಯ ಜತೆಗೆ ಅಕ್ಷಯ ಕುಮಾರ್ ಎಂಬಾತನಿಗೆ ಸಂಬಂಧವಿತ್ತು. ಅದನ್ನು ಅರಿತ ಮೀಲಾಲ್ ಅಕ್ಷಯನನ್ನು ಉಪಾಯವಾಗಿ ಮನೆಗೆ ಕರೆಯಿಸಿಕೊಂಡಿದ್ದಾನೆ. ಕತ್ತು ಸೀಳಿ ಕೊಲೆ ಮಾಡಿದ ಬಳಿಕ ದೇಹವನ್ನು ಹಲವು ತುಂಡು ಮಾಡಿ ಕಸದ ತೊಟ್ಟಿಗೆ ಎಸೆದಿದ್ದಾನೆ.
ಈ ತುಂಡುಗಳನ್ನು ನೋಡಿದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರಿಕ್ಷಾ ಎಳೆಯುವ ವೃತ್ತಿ ಮಾಡುವ ಪ್ರಜಾಪತಿಗೆ ತನ್ನ ಪತ್ನಿಗೆ 2 ವರ್ಷಗಳಿಂದ ಇನ್ನೊಂದು ಸಂಬಂಧವಿರುವುದು ಗೊತ್ತಾಗಿತ್ತು. ಪೊಲೀಸರು ವ್ಯಕ್ತಿಯನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.