Advertisement

ಪತಿಯ ಚಿತಾಭಸ್ಮ ವಿಸರ್ಜನೆ ಮಾಡಿ ಹಿಂತಿರುಗುವಾಗ ಅಪಘಾತ: ಪತ್ನಿ,ಮಗ ಸೇರಿ ನಾಲ್ವರು ಮೃತ್ಯು

01:03 PM May 22, 2023 | Team Udayavani |

 ಜೈಪುರ: ಪತಿಯ ಚಿತಾಭಸ್ಮವನ್ನು ವಿಸರ್ಜನೆ ಮಾಡಿ ವಾಪಸ್‌ ಆಗುತ್ತಿದ್ದ ವೇಳೆ ರಸ್ತೆ ಅಪಘಾತ ಸಂಭವಿಸಿ, ಮೃತರ ಪತ್ನಿ, ಮಗ ಸೇರಿದಂತೆ ನಾಲ್ವರು ದಾರುಣ ಅಂತ್ಯವಾದ ಘಟನೆ ಜೈಪುರ ಸಮೀಪದ ಕೋಟ್‌ಖಾವ್ಡಾದಲ್ಲಿ ನಡೆದಿರುವುದು ವರದಿಯಾಗಿದೆ.

Advertisement

ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮದನ್ ಗವಾರಿಯಾ ಇತ್ತೀಚೆಗೆ ನಿಧನರಾಗಿದ್ದಾರೆ. ಹರಿದ್ವಾರದಲ್ಲಿ ಪತಿಯ ಚಿತಾಭಸ್ಮವನ್ನು ಗಂಗಾ ನದಿಯಲ್ಲಿ ಮುಳುಗಿಸಿ ಹಿಂತಿರುಗುತ್ತಿದ್ದ ಪತ್ನಿ, ಮಗ ಹಾಗೂ ಕುಟುಂಬದ ಇತರೆ ಸದಸ್ಯರಿಗೆ ಭೀಕರ ರಸ್ತೆ ಅಪಘಾತವೊಂದು ಎದುರಾದ ಪರಿಣಾಮ ಈ ದುರಂತ ಘಟನೆ ನಡೆದಿದೆ.

ಇದನ್ನೂ ಓದಿ: Watch Maleesha: ಜನಪ್ರಿಯ ಬ್ಯೂಟಿ ಬ್ರ್ಯಾಂಡ್‌ ಜಾಹೀರಾತಿನಲ್ಲಿ ಮಿಂಚಿದ “ಸ್ಲಮ್‌ ಹುಡುಗಿ”

ಕೋಟ್‌ಖಾವ್ಡಾಕ್ಕೆ ವಾಪಾಸ್‌ ಆಗುತ್ತಿದ್ದ ವೇಳೆ ತಮ್ಮ ಸಂಬಂಧಿಕರಿಗಾಗಿ ಕೆಲ ಕಾಲ ವಾಹನದಲ್ಲಿ ಕಾದು ಕುಳಿತ್ತಿದ್ದಾರೆ. ಈ ವೇಳೆ ಯವಸ್ವರೂಪಿಯಾಗಿ ಬಂದ ಜೀಪ್‌ ವೊಂದು ವಾಹನದ ಮೇಲೆ ಹರಿದಿದೆ. ಪರಿಣಾಮ ಸ್ಥಳದಲ್ಲೇ ಮದನ್ ಗವಾರಿಯಾ ಅವರ ಪತ್ನಿ ಸುನೀತಾ, ಮಗ ಗೋಲು, ಸೀತಾರಾಮ್‌ ಹಾಗೂ ಇವರ ಪತ್ನಿ ಅನಿತಾ ಮೃತಪಟ್ಟಿದ್ದಾರೆ. ಒಟ್ಟು ಏಳು ಮಂದಿ ವಾಹನದಲ್ಲಿದ್ದರು ಎನ್ನಲಾಗಿದ್ದು, ಗಾಯಗೊಂಡ ಇತರರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವರದಿ ತಿಳಿಸಿದೆ.

ಜೀಪ್‌ ನ ಚಾಲಕ ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದು, ಜೀಪ್‌ ನ ಹಿಂಭಾಗದಲ್ಲಿ ಮದ್ಯದ ಬಾಟಲ್‌ ಗಳು ಪತ್ತೆಯಾಗಿದೆ. ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ವರದಿ ತಿಳಿಸಿದೆ.

Advertisement

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಘಟನೆಗೆ ಸಂತಾಪ ಸೂಚಿಸಿ,ಮೃತರ ಕುಟುಂಬಕ್ಕೆ ಪರಿಹಾರವನ್ನು ನೀಡುವುದಾಗಿ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next