Advertisement

ಪತ್ನಿ ಅಂಗಡಿಗೆ ಕಳುಹಿಸಿದ್ದರಿಂದ 1ಕೋಟಿ ರೂ.ಗೂ ಅಧಿಕ ಲಾಟರಿ ಗೆದ್ದು ಬಂದ ಪತಿ.!

08:13 PM Oct 02, 2022 | Team Udayavani |

ವಾಷಿಂಗ್ಟನ್: ಜೀವನದಲ್ಲಿ ಅದೃಷ್ಟ ಯಾವ ಕ್ಷಣದಲ್ಲಿ ಖುಲಾಯಿಸುತ್ತದೆ ಎನ್ನುವುದನ್ನು ಹೇಳಲು ಸಾಧ್ಯವಿಲ್ಲ.ರಾತ್ರಿ ಕಳೆದು ಹಗಲು ಆಗುವ ಒಳಗೆ ಲಾಟರಿ ಹೊಡೆದು ಕೋಟ್ಯಧಿಪತಿ ಆಗುವುದನ್ನೂ ನೋಡಿದ್ದೇವೆ. ಇಲ್ಲೊಬ್ಬ ವ್ಯಕ್ತಿಯ ಕಥೆಯೂ ಹೀಗೆಯೇ ಆಗಿದೆ.

Advertisement

ಅಮೆರಿಕಾದ ಮಿಚಿಗನ್‌ ನಿವಾಸಿಯಾಗಿರುವ ಪ್ರೆಸ್ಟನ್ ಮಾಕಿ ಅಂದು ತಮ್ಮ ನಿತ್ಯದ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದರು. ಅದೇ ವೇಳೆ ಅವರ ಮೊಬೈಲ್‌ ಗೆ ಹೆಂಡತಿ ಬರುವಾಗ ಅಂಗಡಿಯಿಂದ ಕೆಲ ವಸ್ತುಗಳನ್ನು ತನ್ನಿ ಎಂದು ಮೆಸೇಜ್‌ ಮಾಡುತ್ತಾರೆ. ಸರಿಯೆಂದು ಶಾಪ್‌ ಗೆ ಹೋದ ಪ್ರೆಸ್ಟನ್ ಮಾಕಿ ಅವರ ಜೀವನವನ್ನೇ ಬದಲಾಯಿಸಿದ ಘಟನೆಯೊಂದು ನಡೆದಿದೆ.

ದೊಡ್ಡ ಶಾಪ್‌ ನಲ್ಲಿ ಪ್ರೆಸ್ಟನ್ ಮಾಕಿ 5 ಲಾಟರಿ ಟಿಕೆಟ್‌ ನ್ನು ಖರೀದಿಸುತ್ತಾರೆ. ಟಿಕೆಟ್‌ ಖರೀದಿಸಿ ಮನೆಗೆ ತೆರಳಿದ್ದ ಪ್ರೆಸ್ಟನ್ ಮಾಕಿ ಮರುದಿನ ಬೆಳಗ್ಗೆ ಲಾಟರಿ ಟಿಕೆಟ್‌ ನಂಬರ್‌ ನ್ನು ಮೊಬೈಲ್‌ ಆ್ಯಪ್‌ ನಲ್ಲಿ ಸ್ಕ್ಯಾನ್‌ ಮಾಡಿ ನೋಡುತ್ತಾರೆ. ನೋಡಿದಾಗ ಅವರ 05-12-16-17-29 ನಂಬರ್‌ ವುಳ್ಳ ಎಲ್ಲಾ ಲಾಟರಿಯಲ್ಲೂ ಅವರು ಜಾಕ್‌ ಪಾಟ್‌ ಬಹುಮಾನವನ್ನು ಗೆದ್ದಿರುತ್ತಾರೆ. ಅವರು ಬರೋಬ್ಬರಿ $190,736 (ಒಂದು ಕೋಟಿಯ ಐವತೈದು ಲಕ್ಷದ ಎಪ್ಪತ್ತವೊಂದು ಸಾವಿರದ ಮೂನ್ನೂರ ಎಂಬತ್ತೊಂದು ರೂ.) ಗೆದ್ದುಕೊಂಡಿದ್ದಾರೆ.

ನಾನು ಸಾಮಾನ್ಯವಾಗಿ $200,000 ಕ್ಕಿಂತ ಹೆಚ್ಚಿಲ್ಲದಿದ್ದರೆ ಲಾಟರಿಯನ್ನು ಖರೀದಿಸುವುದಿಲ್ಲ. ಈ ಲಾಟರಿಯ ಹಣ ದೊಡ್ಡ ಮೊತ್ತಕ್ಕೆ ಹತ್ತಿರವಾಗಿದ್ದರಿಂದ ಅದನ್ನು ಖರೀದಿಸಿದೆ ಎಂದರು.

ಬಂದಿರುವ ಹಣದಿಂದ ಸ್ವಲ್ಪ ಹಣವನ್ನು ಹೂಡಿಕೆ ಮಾಡುತ್ತೇನೆ, ಇನ್ನು ಸ್ವಲ್ಪ ಹಣವನ್ನು ಕುಟುಂಬದೊಂದಿಗೆ ಹಂಚಿಕೊಳ್ಳುತ್ತೇನೆ ಎನ್ನುತ್ತಾರೆ ಪ್ರೆಸ್ಟನ್ ಮಾಕಿ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next