Advertisement

ಪಾಕ್ ಜೈಲಿನಲ್ಲಿ ಮೃತಪಟ್ಟಿದ್ದ ಸರಬ್ಜಿತ್ ಸಿಂಗ್ ಅವರ ಪತ್ನಿ ರಸ್ತೆ ಅಪಘಾತದಲ್ಲಿ ಸಾವು

11:07 AM Sep 13, 2022 | Team Udayavani |

ಅಮೃತಸರ : 2013ರಲ್ಲಿ ಪಾಕಿಸ್ತಾನದ ಜೈಲಿನಲ್ಲಿ ಸಾವನ್ನಪ್ಪಿದ್ದ ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ ಅವರ ಪತ್ನಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

Advertisement

ಸಿಂಗ್ ಅವರ ಪತ್ನಿ ಸುಖಪ್ರೀತ್ ಕೌರ್ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರೆಯಾಗಿ ಪ್ರಯಾಣಿಸುತ್ತಿದ್ದ ವೇಳೆ ಇಲ್ಲಿನ ಫತೇಪುರ್ ಬಳಿ ಅಪಘಾತ ಸಂಭವಿಸಿ ಗಂಭೀರ ಗಾಯಗೊಂಡಿದ್ದರು ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಸುಖ್ ಪ್ರೀತ್ ಕೌರ್ ಅವರ ಅಂತ್ಯಕ್ರಿಯೆ ಇಂದು (ಮಂಗಳವಾರ) ಭಿಖಿವಿಂಡ್‌ನಲ್ಲಿ ನಡೆಯಲಿದೆ. ಮೃತರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಕಳೆದ ಜೂನ್‌ನಲ್ಲಿ, ತನ್ನ ಸಹೋದರನನ್ನು ಪಾಕ್ ಜೈಲಿನಿಂದ ಬಿಡುಗಡೆ ಮಾಡುವ ಪ್ರಯತ್ನದಲ್ಲಿ ವಿವಿಧ ವೇದಿಕೆಗಳಲ್ಲಿ ಧ್ವನಿ ಎತ್ತಿದ್ದ ಸರಬ್ಜಿತ್ ಸಿಂಗ್ ಸಹೋದರಿ ದಲ್ಬೀರ್ ಕೌರ್ ಎದೆನೋವಿನಿಂದ ಸಾವನ್ನಪ್ಪಿದ್ದರು.

ಇದನ್ನೂ ಓದಿ : ಸಿಆರ್‌ಝಡ್‌: ಜಿಲ್ಲಾಡಳಿತದ ಆದೇಶ ಹೈಕೋರ್ಟ್‌ನಿಂದ ರದ್ದು :ಮಾನವ ಶ್ರಮದ ಮರಳುಗಾರಿಕೆಗೆ ಅವಕಾಶ

Advertisement

ಭಯೋತ್ಪಾದನೆ ಮತ್ತು ಬೇಹುಗಾರಿಕೆಯ ಆರೋಪದಲ್ಲಿ ಪಾಕ್ ಜೈಲಿನಲ್ಲಿದ್ದ ಸರಬ್ಜಿತ್ ಸಿಂಗ್ (49) ಏಪ್ರಿಲ್ 2013 ರಲ್ಲಿ ಲಾಹೋರ್ ಜೈಲಿನಲ್ಲಿ ಕೈದಿಗಳ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದರು.

ಭಯೋತ್ಪಾದನೆ ಮತ್ತು ಬೇಹುಗಾರಿಕೆಯ ಆರೋಪದಲ್ಲಿ ಪಾಕಿಸ್ತಾನಿ ನ್ಯಾಯಾಲಯವು ಸರಬ್ಜಿತ್ ಸಿಂಗ್ ಅವರಗೆ 1991 ರಲ್ಲಿ ಮರಣದಂಡನೆಗೆ ಗುರಿಪಡಿಸಿತ್ತು. ಆದರೆ ಸರ್ಕಾರ 2008 ರವರೆಗೆ ಅನಿರ್ದಿಷ್ಟ ಅವಧಿಗೆ ಅವರ ಮರಣದಂಡನೆಯನ್ನು ತಡೆಹಿಡಿದಿತ್ತು. ಈ ವೇಳೆ ಅಲ್ಲಿನ ಕೈದಿಗಳ ದಾಳಿಗೆ ತುತ್ತಾಗಿ ಸಾವನ್ನಪ್ಪಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next