Advertisement

ಭಾರತೀಯ ಜ್ಯೋತಿಷ್ಯ ಶಾಸ್ತ್ರಕ್ಕೆ ವಿಶ್ಯಾದ್ಯಂತ ಗೌರವ, ಮಾನ್ಯತೆ

01:56 PM Apr 18, 2021 | Team Udayavani |

ಮೈಸೂರು: ಮಾಯಾಕಾರ ಗುರುಕುಲಸಂಸ್ಥೆಯು 2012ರಲ್ಲಿ ಪ್ರಾರಂಭವಾಗಿದ್ದು,ಅತ್ಯಂತ ಕಡಿಮೆ ಅವಧಿಯಲ್ಲಿ ಮೂರು ಉಚಿತಜ್ಯೋತಿಷ್ಯ ವಾಸು,¤ ವೇದ ಮತ್ತು ಆಗಮ ಶಾಸ್ತ್ರಗಳಕಾರ್ಯಾಗಾರವನ್ನು ನಡೆಸಿ ಜ್ಯೋತಿಷ್ಯ ಶಾಸ್ತ್ರದಮಹತ್ವವನ್ನು ನಾಡಿನಾದ್ಯಂತ ಸಾರುತ್ತಿರುವುದುಪ್ರಶಂಸನೀಯ ಎಂದು ವಸತಿ ಸಚಿವ ವಿ.ಸೋಮಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಮೈಸೂರು ಮಾಯಾಕಾರ ಗುರುಕುಲ ಹಾಗೂಬೆಂಗಳೂರಿನ ಕರ್ನಾಟಕ ಸಂಸ್ಕೃತವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ಜ್ಯೋತಿಷ್ಯರಹಾಗೂ ಜ್ಯೋತಿಷ್ಯ ಬೋಧನಾ ಸಂಸ್ಥೆಗಳಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಶನಿವಾರಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಆವರಣದಕಾವೇರಿ ಸಭಾಂಗಣದಲ್ಲಿ ನಡೆದ 2021ರರಾಷ್ಟ್ರೀಯ ಮಟ್ಟದ ಜ್ಯೋತಿಷ್ಯ ಸಮ್ಮೇಳನಕಾರ್ಯಕ್ರಮವನ್ನು ಉದ್ಘಾಟಿಸಿ ಅವರುಮಾತನಾಡಿದರು.

ನಾಗರಿಕತೆ ಪ್ರಾರಂಭದಿಂದಲೂ ಭವಿಷ್ಯದ ಬಗ್ಗೆತಿಳಿದುಕೊಳ್ಳಲು ಮನುಷ್ಯನ ಪ್ರಯತ್ನನಿರಂತರವಾಗಿದೆ. ಮಾನವ ಸಮಾಜದಇತಿಹಾಸದತ್ತ ಗಮನಿಸಿದರೆ ಆರಾಧನೆ, ಸಿದ್ಧಿಯೋಗ ಹೀಗೆ ಹಲವು ಪ್ರಯತ್ನಗಳ ಫ‌ಲವಾಗಿಜ್ಯೋತಿಷ್ಯಶಾಸ್ತ್ರ ಹುಟ್ಟಿಕೊಂಡಿದ್ದು, ಮನುಷ್ಯನಭೂತಕಾಲ, ವರ್ತಮಾನಕಾಲ ಮತ್ತು ಭವಿಷ್ಯದಬಗ್ಗೆ ತಿಳಿಯುವುದೇ ಜ್ಯೋತಿಷ್ಯ ಶಾಸ್ತ್ರವಾಗಿದೆಎಂದು ತಿಳಿಸಿದರು.

ಜ್ಯೋತಿಷ್ಯ ಶಾಸ್ತ್ರದಲ್ಲಿ ಜನರಿಗೆ ನಂಬಿಕೆಬರುವಂತೆ ಜ್ಯೋತಿಷಿಗಳು ವರ್ತಿಸಿದಾಗ, ಅವರಅಧ್ಯಯನವು ವೈಜ್ಞಾನಿಕ ನೆಲೆಗಟ್ಟಿನಿಂದಕೂಡಿದಾಗ ಮೂಢನಂಬಿಕೆ ಎಂಬ ಪಟ್ಟ ಕಳಚಿಬೀಳುತ್ತದೆ. ಜ್ಯೋತಿಷ್ಯಶಾಸ್ತ್ರಕ್ಕೆ ಲೆಕ್ಕಾಚಾರವುಮುಖ್ಯ, ಇದರಿಂದಲೇ ಇತಿಹಾಸದಲ್ಲಿ ಘಟಿಸಿದಅಥವಾ ಘಟಿಸಬಹುದಾದ ಘಟನೆಗಳ ಕುರಿತುಅಂದಾಜಿಸಬಹುದಾಗಿದೆ ಎಂದರು.ಜ್ಯೋತಿಷ್ಯ ಶಾಸ್ತ್ರದ ಪ್ರಯೋಜನ ಕೆಲವರಿಗೆಮಾತ್ರ ಸೀಮಿತವಾಗದೇ ಪ್ರತಿಯೊಬ್ಬ ಜನಸಾಮಾನ್ಯರಿಗೂ ಆತ್ಮ ವಿಶ್ವಾಸ ತುಂಬವಮಾರ್ಗದಲ್ಲಿ ಜನರ ನಿರಂತರವಿಶ್ವಾಸಗಳಿಸುವಂತಾಗಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ಸಂಸ್ಕೃತವಿಶ್ವವಿದ್ಯಾಲಯದ ಉಪಕುಲಸಚಿವರು ಹಾಗೂನಿರ್ದೇಶಕ ಡಾ. ಪ್ರಕಾಶ. ಆರ್‌.ಪಾಗೋಜಿಅವರು ಸ್ಮರಣ ಸಂಚಿಕೆ ಬಿಡುಗಡೆಮಾಡಿದರು.ಕಾರ್ಯಕ್ರಮದಲ್ಲಿ ಮೈಸೂರಿನ ಸುತ್ತೂರುಶಿವರಾತ್ರೀಶ್ವರ ಪಂಚಾಂಗ ಕರ್ತರಾದ ಡಾ.ಕೆ.ಜಿ.ಪುಟ್ಟಹೊನ್ನಯ್ಯ, ಮಾಯಾಕಾರ ಗುರುಕುಲಸಂಸ್ಥೆಯ ಸಂಸ್ಥಾಪಕ ಡಾ. ಮೂಗೂರು ಮಧುದೀಕ್ಷಿತ್‌ ವಾಣಿಜ್ಯೋದ್ಯಮಿಗಳಾದ ಎಚ್‌.ಎಸ್‌.ರಮೇಶ್‌ ಹಂದನಹಳ್ಳಿ ಹಾಗೂ ಮೈಸೂರಿನರಿಷಬ್‌ ವೆಂಚರ್ಸ್‌ ಎಸ್‌.ಪಿ.ಮಧು ಸೇರಿದಂತೆಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.