Advertisement

T20 ; ನೋ ಬಾಲ್ ಗೆ ರಿಂಕು ಸಿಂಗ್ ಹೊಡೆದ ಸಿಕ್ಸರ್ ಪರಿಗಣಿಸಲಿಲ್ಲ ಏಕೆ?

04:54 PM Nov 24, 2023 | Team Udayavani |

ವಿಶಾಖಪಟ್ಟಣ: ಪ್ರವಾಸಿ ಆಸ್ಟ್ರೇಲಿಯ ವಿರುದ್ಧ ನಡೆದ ಟಿ 20 ಪಂದ್ಯದಲ್ಲಿ ಭಾರತ ರೋಚಕ ಜಯ ಸಾಧಿಸಿತು. ಈ ವೇಳೆ 209 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿ ಕೊನೆಯ ಎಸೆತದಲ್ಲಿ ರಿಂಕು ಸಿಂಗ್ ಹೀರೋ ಆಗಿ ಹೊರಹೊಮ್ಮಿದರು. ಆದರೆ ಅವರು ಕೊನೆಯ ಎಸೆತದಲ್ಲಿ ನೋ ಬಾಲ್ ಗೆ ಬಾರಿಸಿದ ಸಿಕ್ಸರ್ ಅನ್ನು ಪರಿಗಣಿಸದೇ ಇರುವುದು ಚರ್ಚೆಗೆ ಗ್ರಾಸವಾಗಿದೆ ಮತ್ತು ಹಲವರಲ್ಲಿ ಗೊಂದಲಕ್ಕೆ ಕಾರಣವಾಗಿದೆ.

Advertisement

ಸೀನ್ ಅಬಾಟ್ ಎಸೆದ ಕೊನೆಯ ಬಾಲ್ ಗೆ ಕೇವಲ ಒಂದು ರನ್ ಅಗತ್ಯವಿತ್ತು. ಈ ವೇಳೆ ರಿಂಕು ಸಿಂಗ್ ಚೆಂಡನ್ನು ಸಿಕ್ಸರ್ ಗೆ ಅಟ್ಟಿದ್ದರು. ಆದಾಗ್ಯೂ, ಆರು ರನ್‌ಗಳನ್ನು ಎಣಿಕೆ ಮಾಡಲಾಗಿಲ್ಲ ಏಕೆಂದರೆ ಕ್ಷಣದಲ್ಲೇ ಮೂರನೇ ಅಂಪೈರ್ ಬೌಲರ್ ಅತಿಕ್ರಮಿಸಿದ್ದನ್ನು ದೃಢಪಡಿಸಿ ನೋ-ಬಾಲ್ ನೀಡಿ ಯಾಗಿತ್ತು. ನೋ ಬಾಲ್ ನ ಒಂದು ರನ್ ನಿಂದಾಗಿ ಭಾರತ ಗೆಲುವು ಸಾಧಿಸಿತ್ತು.

ಐಸಿಸಿ ನಿಯಮವೇನು?
ಐಸಿಸಿ ಪುರುಷರ ಟಿ 20 ಆಟದ ನಿಯಮ 16.5.1 ರ ಪ್ರಕಾರ: “16.1, 16.2 ಅಥವಾ 16.3.1 ಷರತ್ತುಗಳಲ್ಲಿ ವ್ಯಾಖ್ಯಾನಿಸಲಾಗಿದ್ದು, ಫಲಿತಾಂಶವನ್ನು ತಲುಪಿದ ತತ್ ಕ್ಷಣ, ಪಂದ್ಯವು ಅಂತ್ಯಗೊಳ್ಳುತ್ತದೆ. ಷರತ್ತು 41.17.2 (ಪೆನಾಲ್ಟಿ ರನ್‌ಗಳು) ಹೊರತುಪಡಿಸಿ ನಂತರ ಬರುವ ಯಾವುದನ್ನೂ ಅದರ ಭಾಗವಾಗಿ ಪರಿಗಣಿಸಲಾಗುವುದಿಲ್ಲ.

ಬ್ಯಾಟ್ಸ್ ಮ್ಯಾನ್  ಪಂದ್ಯವನ್ನು ಗೆಲ್ಲಲು ಸಾಕಷ್ಟು ರನ್‌ಗಳನ್ನು ಪೂರ್ಣಗೊಳಿಸುವ ಮೊದಲು ಬೌಂಡರಿ ಗಳಿಸಿದರೆ, ಸಂಪೂರ್ಣ ಬೌಂಡರಿ ಭತ್ಯೆಯನ್ನು ತಂಡದ ಮೊತ್ತಕ್ಕೆ ಮತ್ತು ಬ್ಯಾಟ್‌ನಿಂದ ಹೊಡೆದ ಸಂದರ್ಭದಲ್ಲಿ ಸ್ಟ್ರೈಕರ್‌ನ ಸ್ಕೋರ್‌ಗೆ ಸಲ್ಲುತ್ತದೆ.

ಆಸೀಸ್ ನೀಡಿದ 208 ರನ್ ಗುರಿ ಬೆನ್ನಟ್ಟಿದ ಭಾರತ 19.5 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತ್ತು. ಕುತೂಹಲ ಕಾರಿ ಕೊನೆಯ ಓವರ್ ನಲ್ಲೇ ಮೂರು ವಿಕೆಟ್ ಗಳನ್ನೂ ಕಳೆದುಕೊಂಡಿತ್ತು.ಕೊನೆಯ ಎಸೆತ ನೋ ಬಾಲ್ ಆಗಿ ಜಯ ಸಾಧಿಸಿತ್ತು. ರಿಂಕು ಸಿಂಗ್ ಔಟಾಗದೆ 14 ಎಸೆತಗಳಲ್ಲಿ 22 ರನ್ ಗಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next