Advertisement

ಹಾವುಗಳಿಗೇಕೆ ಎರಡು ನಾಲಗೆ?  

10:06 AM Jun 01, 2017 | |

ಬಹಳ ಹಿಂದೆ ಕಶ್ಯಪ ಮುನಿಗಳಿಗೆ ಇಬ್ಬರು ಹೆಂಡತಿಯರಿದ್ದರು. ಅವರೇ ಕದ್ರು ಮತ್ತು ವಿನುತ. ಕದ್ರುಗೆ ಸರ್ಪಗಳು ಮಕ್ಕಳು. ವಿನುತಗೆ ಅರುಣ ಮತ್ತು ಗರುಡ ಎಂಬ ಇಬ್ಬರು ಮಕ್ಕಳು. ಹೀಗಿರಲು ಒಂದು ದಿನ ಅವರಿಬ್ಬರೂ ಸಮುದ್ರಮಂಥನದಲ್ಲಿ ಬಿಳಿಗುದುರೆ ಹುಟ್ಟುವುದನ್ನು ಕಾಣುತ್ತಾರೆ.

Advertisement

ಆಗ ಅವರಿಬ್ಬರಲ್ಲೂ ಒಂದು ಪಂಥ ಏರ್ಪಡುತ್ತದೆ. ಅದೇನೆಂದರೆ ವಿನುತ ಆ ಕುದುರೆ ಪೂರ್ತಿ ಬಿಳಿಯಾಗಿದೆ ಎನ್ನುತ್ತಾಳೆ. ಆದರೆ ಕದ್ರು ಅದರ ಬಾಲ ಮಾತ್ರ ಕಪ್ಪಗಾಗಿದೆ ಎನ್ನುತ್ತಾಳೆ. ಪಂಥದಲ್ಲಿ ಸೋತವರು, ಗೆದ್ದವರ ದಾಸಿಯಾಗಬೇಕು ಎಂದು ನಿರ್ಣಯವಾಗುತ್ತದೆ.

ಕದ್ರು ಪಂಥದಲ್ಲಿ ತಾನೇ ಗೆಲ್ಲಬೇಕು ಎಂದು ತನ್ನ ಮಕ್ಕಳಾದ ಹಾವುಗಳನ್ನು ಕರೆದು ಕುದುರೆಯ ಬಾಲದಲ್ಲಿ ಸೇರಿಕೊಳ್ಳುವಂತೆ ಸೂಚಿಸುತ್ತಾಳೆ.

ಆಗ ಕುದುರೆಯ ಬಾಲ ಕಪ್ಪಗೆ ಕಾಣುತ್ತದೆ. ಪಂಥದಲ್ಲಿ ಸೋತ ವಿನುತ ಕದ್ರುವಿನ ದಾಸಿಯಾಗುತ್ತಾಳೆ.ಕದ್ರು, ವಿನುತಳನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳುತ್ತಾಳೆ. ಇದರಿಂದ ಅವಳ ಮಗನಾದ ಗರುಡನಿಗೆ ಬೇಸರವಾಗುತ್ತದೆ. ಆತ ಸರ್ಪಗಳ ಬಳಿ ಬಂದು ತನ್ನ ತಾಯಿಯ ಬಂಧ ಮುಕ್ತಿಯ ಬಗ್ಗೆ ಮಾತಾಡುತ್ತಾನೆ. ಆಗ ಸರ್ಪಗಳು ತಮಗೆ ಸ್ವರ್ಗದಿಂದ ಅಮೃತ ತಂದು ಕೊಟ್ಟರೆ ಬಂಧ ಮುಕ್ತಿ ನೀಡುವುದಾಗಿ ತಿಳಿಸುತ್ತವೆ.

ಅದರಂತೆಯೇ ಗರುಡ ಸ್ವರ್ಗಕ್ಕೆ ಹೋಗಿ ಇಂದ್ರನನ್ನು ಭೇಟಿ ಮಾಡುತ್ತಾನೆ. ಇಂದ್ರ ಅಮೃತ ನೀಡಲು ಹಿಂಜರಿಯುತ್ತಾನೆ. ಆಗ ಗರುಡ ತನ್ನ ತಾಯಿಯ ಬಂಧಮುಕ್ತಿಯಾದ ಕೂಡಲೇ ಅಮೃತವನ್ನು ವಾಪಸ್‌ ತರುವುದಾಗಿ ತಿಳಿಸಿದ್ದರಿಂದ ಇಂದ್ರ ಒಪ್ಪಿ ಅಮೃತ ನೀಡುತ್ತಾನೆ.

Advertisement

ಅಮೃತವನ್ನು ಕಂಡ ಸರ್ಪಗಳು ಸಂತೋಷಗೊಂಡು ವಿನುತಾಳನ್ನು ಬಂಧನದಿಂದ ಮುಕ್ತಗೊಳಿಸುತ್ತವೆ. ತಕ್ಷಣ ಗರುಡ, ಅಮೃತವನ್ನು ಅಲ್ಲಿಂದ ಕೊಂಡೊಯುತ್ತಾನೆ. ಸರ್ಪಗಳು ನಿರಾಸೆಯಿಂದ ಆ ಅಮೃತವನ್ನಿಟ್ಟಿದ್ದ ಧರ್ಬೆಯನ್ನೇ ನೆಕ್ಕುತ್ತವೆ. ನೆಕ್ಕಿ- ನೆಕ್ಕಿ ಅವುಗಳ ನಾಲಗೆ ಎರಡಾಗಿ ಸೀಳಿ ಹೋಗುತ್ತದೆ. ಅದಕ್ಕೇ ಹಾವಿನ ನಾಲಗೆ ಸೀಳಿರುವುದು. ಆಮೇಲಿಂದ ಗರುಡನಿಗೂ- ಸರ್ಪಗಳಿಗೂ ವೈರತ್ವ ಉಂಟಾಗುತ್ತದೆ.

-ಹನುಮಂತ ಮ.ದೇಶಕುಲಕರ್ಣಿ, ಧಾರವಾಡ 

Advertisement

Udayavani is now on Telegram. Click here to join our channel and stay updated with the latest news.

Next