Advertisement

ಗಡಿ ವಿವಾದ ಉಲ್ಬಣವಾದರೂ ಕೇಂದ್ರವೇಕೆ ಮೌನ?: ಖಾದರ್‌

01:15 AM Dec 10, 2022 | Team Udayavani |

ಮಂಗಳೂರು: ಕರ್ನಾಟಕ-ಮಹಾರಾಷ್ಟ್ರದ ಗಡಿ ಭಾಗವಾದ ಬೆಳಗಾವಿಯಲ್ಲಿ ಕನ್ನಡಿಗರ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಮೌನ ವಹಿಸಿದ್ದಾರೆ ಹಾಗೂ ಎರಡೂ ರಾಜ್ಯಗಳಲ್ಲಿ ಬಿಗು ವಾತಾವರಣ ವಿದ್ದರೂ ಕೇಂದ್ರ ಸರಕಾರವೇಕೆ ಮೌನ ವಹಿಸಿದೆ ಎಂದು ಶಾಸಕ ಹಾಗೂ ವಿಧಾನಸಭೆಯ ವಿಪಕ್ಷ ಉಪ ನಾಯಕ ಯು.ಟಿ. ಖಾದರ್‌ ಪ್ರಶ್ನಿಸಿದ್ದಾರೆ.

Advertisement

ದ.ಕ. ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಹಾರಾಷ್ಟ್ರವು ಉಸ್ತು ವಾರಿ ಸಚಿವರನ್ನು ನೇಮಕ ಮಾಡುವ ಮೂಲಕ ಕನ್ನಡಿಗರನ್ನು ಕೆಣಕಿಸುವ ಪ್ರಯತ್ನ ಮಾಡುತ್ತಿದೆ. ರಾಜಕೀಯ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ ಎಂದರು.

ಡಬಲ್‌ ಎಂಜಿನ್‌ ಸರಕಾರ ಎಂದು ಹೇಳಿಕೊಳ್ಳುವ ಬಿಜೆಪಿ ಸರಕಾರಕ್ಕೆ ಎರಡೂ ರಾಜ್ಯಗಳ ಗಡಿ ವಿಚಾರ ಉಲ್ಬಣವಾಗುವಾಗ ಎಂಜಿನ್‌ ಆಫ್ ಅಗಿ ಬಿಡುತ್ತದೆ. ಒಂದು ದೇಶ ಒಂದು ಕಾನೂನು ಎಂದು ಹೇಳುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಈ ವಿಷಯದಲ್ಲಿ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು.

ಗುಜರಾತನ್ನು ಪ್ರತಿನಿಧಿಸುವವರೇ ದೇಶದ ಪ್ರಧಾನಿಯಾಗಿರುವಾಗ ಆ ರಾಜ್ಯದ ಫಲಿತಾಂಶವು ಭಾವನಾತ್ಮಕ ವಿಚಾರವಾಗಿ ಬದಲಾಗಿ ಬಿಜೆಪಿಗೆ ಗೆಲುವು ದೊರಕಿದೆ. ಆಪ್‌ ಹಾಗೂ ಇತರ ಪಕ್ಷದಿಂದ ಕಾಂಗ್ರೆಸ್‌ಗೆ ಹಿನ್ನಡೆ
ಆಗಿದೆ. ಆದರೆ ಕಾಂಗ್ರೆಸ್‌ಗೆ ಹಿಮಾಚಲ ಪ್ರದೇಶದಲ್ಲಿ ಸ್ಪಷ್ಟ ಬಹುಮತ ದೊರಕಿದೆ. ದೇಶದ ವಿವಿಧ ಕಡೆ ನಡೆದ ಉಪ ಚುನಾವಣೆಯಲ್ಲಿಯೂ ಕಾಂಗ್ರೆಸ್‌ ಗೆದ್ದಿದೆ ಎಂದರು.

ಸಿದ್ಧರಾಮಯ್ಯರನ್ನು ಅನ್ನ ರಾಮಯ್ಯ, ದಲಿತ ರಾಮಯ್ಯ ಎಂದು ಅಭಿಮಾನದಿಂದ ಕರೆಯು ತ್ತಾರೆ. ಹಾಗಾಗಿ ಅವರನ್ನು ಯಾರೇನೂ ಕರೆದರೂ ಚಿಂತಿಸಬೇಕಾಗಿಲ್ಲ. ಹೆಸರಿ ಗಿಂತಲೂ ವ್ಯಕ್ತಿತ್ವ ಮುಖ್ಯ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

ಮುಖಂಡರಾದ ಸದಾಶಿವ ಉಳ್ಳಾಲ್‌, ಚೇತನ್‌ ಬಂಗ್ರೆ, ಲಾರೆನ್ಸ್‌ ಡಿ’ಸೋಜಾ, ನಿತ್ಯಾನಂದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next