Advertisement

ಬೆಲೆ ನಿಯಂತ್ರಣಕ್ಕೆ ತೆರಿಗೆ ವಿಧಿಸಿದ್ದೇವೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

10:56 PM May 09, 2021 | Team Udayavani |

ಕೋಲ್ಕತಾ/ನವದೆಹಲಿ: ಬೆಲೆಯನ್ನು ನಿಯಂತ್ರಣದಲ್ಲಿ ಇರಿಸುವ ಉದ್ದೇಶದಿಂದಲೇ ಲಸಿಕೆಗಳಿಗೆ ಶೇ.5, ಆಕ್ಸಿಜನ್‌ ಕಾನ್ಸಂಟ್ರೇಷನ್‌ಗಳಿಗೆ, ಔಷಧಗಳಿಗೆ ಶೇ.12 ತೆರಿಗೆ ವಿಧಿಸಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

Advertisement

ಕೊರೊನಾ ಔಷಧಗಳಿಗೆ, ಆಕ್ಸಿಜನ್‌ ಕಾನ್ಸಂಟ್ರೇಷನ್‌ಗಳಿಗೆ ತೆರಿಗೆ ವಿನಾಯಿತಿ ನೀಡಬೇಕು ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು. ಅದಕ್ಕೆ ಉತ್ತರವಾಗಿ ಕೇಂದ್ರ ವಿತ್ತ ಸಚಿವರು 16 ಟ್ವೀಟ್‌ಗಳ ಮೂಲಕ ತೆರಿಗೆ ವಿಧಿಸಿದ ಉದ್ದೇಶವನ್ನು ವಿವರಿಸಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಜಿಎಸ್‌ಟಿಯಿಂದ ವಿನಾಯಿತಿ ನೀಡಿದರೆ, ಸ್ಥಳೀಯವಾಗಿ ಇರುವ ಉತ್ಪಾದಕರಿಗೆ ಅನಾನುಕೂಲವಾಗುತ್ತದೆ. ಜತೆಗೆ ಗ್ರಾಹಕರಿಗೆ ಕೂಡ ಹೆಚ್ಚಿನ ದರ ಪಾವತಿ ಮಾಡುವಂತಾಗುತ್ತದೆ ಎಂದು ವಿವರಿಸಿದ್ದಾರೆ.

ಕೊರೊನಾಕ್ಕೆ ನೀಡಲಾಗುತ್ತಿರುವ ಔಷಧಗಳಿಗೆ ಆಮದು ತೆರಿಗೆ ವಿನಾಯಿತಿ ನೀಡಲಾಗಿದೆ ಎಂದಿದ್ದಾರೆ. ಇನ್ನು ಅವುಗಳ ಮೇಲೆ ವಿಧಿಸಲಾಗುತ್ತಿರುವ ಶೇ.70ರಷ್ಟು ಏಕೀಕೃತ ಜಿಎಸ್‌ಟಿ ರಾಜ್ಯಗಳಿಗೇ ಸಂದಾಯವಾಗುತ್ತದೆ ಎಂದಿದ್ದಾರೆ ವಿತ್ತ ಸಚಿವೆ.

ಇದನ್ನೂ ಓದಿ :ಅನಾರೋಗ್ಯದಿಂದ ದೆಹಲಿಯ ಉದ್ಯಾನವನದಲ್ಲಿದ್ದ 7 ವರ್ಷದ ಸಿಂಹ ಸಾವು

Advertisement

Udayavani is now on Telegram. Click here to join our channel and stay updated with the latest news.

Next