Advertisement

ಕಬ್ಬಿಣ ಏಕೆ ತುಕ್ಕು ಹಿಡಿಯುತ್ತದೆ?

03:45 AM Mar 09, 2017 | Harsha Rao |

ಮನೆಗಳ ಸುತ್ತಮುತ್ತಲೋ, ಶಾಲೆಗೆ ಹೋಗುವ ದಾರಿಯಲ್ಲೋ, ಅನಾದಿಕಾಲದಿಂದಲೂ ಗುಜರಿ ಬಿದ್ದಿರುವ ರಿûಾ ಅಥವಾ ಹಳೆಯ ಅಂಬಾಸಡರ್‌ ಕಾರುಗಳನ್ನು ನೋಡಿರುತ್ತೀರಿ. ರಜಾ ದಿನಗಳಲ್ಲಿ ಅವುಗಳ ಪಕ್ಕದಲ್ಲಿ ಆಟವನ್ನೂ ಆಡಿರುತ್ತೀರಿ. ಒಂದೊಮ್ಮೆ ತನ್ನ ಆಕರ್ಷಕ ಬಣ್ಣದಿಂದ ಗಮನ ಸೆಳೆಯುತ್ತಿದ್ದ ಇವು ಕೆಂಬಣ್ಣಕ್ಕೆ ತಿರುಗಿದ್ದೇಕೆಂದು ಆಶ್ಚರ್ಯ ಪಟ್ಟಿದ್ದೀರಾ?

Advertisement

ಒಂದು ಚೂರು ಕಬ್ಬಿಣವನ್ನು, ತೇವ ಇರುವ ಕಡೆ ಕೆಲವು ದಿನ ಬಿಡಿ. ಕಬ್ಬಿಣದ ಮೇಲ್ಮೆ„ ಮೇಲೆ ಕೆಂಪು ಮಿಶ್ರಿತ ಕಂದು ಲೇಪನ ಉಂಟಾಗುತ್ತದೆ. ಇದನ್ನೇ ತುಕ್ಕು(ರಸ್ಟ್‌) ಎಂದು ಕರೆಯುತ್ತಾರೆ.

ರಾಸಾಯನಿಕವಾಗಿ ಹೇಳುವುದಾದರೆ ತುಕ್ಕು, ಕಬ್ಬಿಣದ ಆಕ್ಸೆ„ಡ್‌. ಶುದ್ಧ ಕಬ್ಬಿಣ, ನೀರಿನಲ್ಲಿ ಕರಗಿರುವ ಆಮ್ಲಜನಕದೊಂದಿಗೆ ಸಂಯೋಗವಾಗಿ ದಹಿಸುತ್ತದೆ(ಉರಿಯುತ್ತದೆ). ಆಗ ಕಬ್ಬಿಣದ ಆಕ್ಸೆ„ಡ್‌ ಉತ್ಪತ್ತಿಯಾಗುತ್ತದೆ. ಗಾಳಿಯಲ್ಲಿ ಕೇವಾಂಶವಿಲ್ಲದಿದ್ದರೆ ಅಥವಾ ನೀರೇ ಇಲ್ಲದಿದ್ದರೆ ತುಕ್ಕು ಹಿಡಿಯುವುದು ಸಾಧ್ಯವಿಲ್ಲ.

ಕಬ್ಬಿಣದ ಮೇಲ್ಮೆ„ ಮೇಲೆ ಒಂದೇ ಒಂದು ಹನಿ ನೀರು ಬಿದ್ದು, ನಿಂತರೆ ಸಾಕು, ತುಕ್ಕು ಹಿಡಿಯುವ ಪ್ರತಿಕ್ರಿಯೆ ಆರಂಭವಾದಂತೆಯೇ. ಕೂಡಲೆ ನೀರಿನ  ಹನಿ ಶುದ್ಧವಾಗಿದ್ದರೂ ಸ್ವಲ್ಪ ಸಮಯದ ನಂತರ ನೀರಿನಲ್ಲಿರುವ ಆಮ್ಲಜನಕದೊಂದಿಗೆ ಕಬ್ಬಿಣ ಪ್ರತಿಕ್ರಿಯಿಸಲು ಆರಂಭಿಸುತ್ತದೆ. ನೀರಿನ ಹನಿಯಲ್ಲಿ ಉತ್ಪತ್ತಿಯಾದ ಕಬ್ಬಿಣದ ಆಕ್ಸೆ„ಡ್‌ ಅದಕ್ಕೆ ಕೆಂಪು ಮಿಶ್ರಿತ ಕಂದು ಬಣ್ಣದ ಕೊಡುತ್ತದೆ. ನೀರಿನ ಹನಿ ಆವಿಯಾದ ಮೇಲೂ ತುಕ್ಕು ಹಿಡಿದ ಬಣ್ಣ ಹಾಗೆಯೇ ಉಳಿದುಬಿಡುತ್ತದೆ. ಆಗ ಕಬ್ಬಿಣಕ್ಕೆ ತುಕ್ಕು ಹಿಡಿದಿದೆ ಎನ್ನುತ್ತೇವೆ.

ಒಮ್ಮೆ ಆರಂಭವಾದರೆ ತುಕ್ಕು, ಒಣ ಹವೆಯಲ್ಲೂ ಮುಂದುವರಿಯುತ್ತದೆ. ಉತ್ಪತ್ತಿಯಾಗಿರುವ ಕಬ್ಬಿಣದ ಆಕ್ಸೆ„ಡ್‌(ತುಕ್ಕು) ಗಾಳಿಯಲ್ಲಿ ಎಷ್ಟೇ ಕಡಿಮೆ ಪ್ರಮಾಣದಲ್ಲಿದ್ದರೂ ತೇವಾಂಶವನ್ನು ಆಕರ್ಷಿಸುತ್ತದೆ. ತುಕ್ಕು ಹಿಡಿಯದಂತೆ ತಡೆಯುವುದು ಸುಲಭ. ತುಕ್ಕು ಹಿಡಿದದ್ದನ್ನು ಹರಡದಂತೆ ತಡೆಯುವುದು ಕಷ್ಟ. 

Advertisement

ಕಬ್ಬಿಣದ ಉಪಕರಣಗಳನ್ನು ದೀರ್ಘ‌ಕಾಲ ಉಪಯೋಗಿಸಬೇಕಾಗುತ್ತದೆ. ಆದ್ದರಿಂದ ತುಕ್ಕು ಹಿಡಿಯದಂತೆ ತಡೆಯುವುದು ಬಹಳ ಮುಖ್ಯ. ಇತ್ತೀಚೆಗೆ ವಿಶೇಷ ಪೇಯಿಂಟ್‌ಗಳು ಮತ್ತು ಪ್ಲಾಸ್ಟಿಕ್‌ ಹೊದಿಕೆಯನ್ನು ಅಳವಡಿಸುವುದು ಬಳಕೆಗೆ ಬಂದಿದೆ. ಅಷ್ಟೇ ಅಲ್ಲ ತುಕ್ಕನ್ನು ತಡೆಗಟ್ಟಲು ಇನ್ನೂ ಅನೇಕ ಮಾರ್ಗಗಳೂ ಈಗ ಚಾಲ್ತಿಗೆ ಬಂದಿವೆ.

– ಸಂಪಟೂರು ವಿಶ್ವನಾಥ್‌

Advertisement

Udayavani is now on Telegram. Click here to join our channel and stay updated with the latest news.

Next