Advertisement
ಸೋಮವಾರ ಪಂಜಾಬ್ ಕಿಂಗ್ಸ್ ಕೂಡಾ ತನ್ನ ನಾಯಕನನ್ನು ನೇಮಿಸಿದೆ. ಕೆ.ಎಲ್.ರಾಹುಲ್ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಮತ್ತೋರ್ವ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರನ್ನು ಪಂಜಾಬ್ ಆಯ್ಕೆ ಮಾಡಿದೆ. ಹೀಗಾಗಿ ನಾಯಕನನ್ನು ಘೋಷಿಸದ ಪಟ್ಟಿಯಲ್ಲಿ ಆರ್ ಸಿಬಿ ಒಂದೇ ಉಳಿದಿದೆ.
Related Articles
Advertisement
ಕಳೆದ ಬಾರಿಯೂ ಆರ್ ಸಿಬಿ ಪರವಾಗಿ ಆಡಿದ್ದ ಗ್ಲೆನ್ ಮ್ಯಾಕ್ಸ್ ವೆಲ್ ಅವರ ಹೆಸರು ಮುಂಚೂಣಿಯಲ್ಲಿದೆ. ಆದರೆ ತನ್ನ ವಿವಾಹ ಸಮಾರಂಭದ ಕಾರಣದಿಂದ ಗ್ಲೆನ್ ಎಪ್ರಿಲ್ 6ರವರೆಗೆ ಲಭ್ಯವಾಗುವುದಿಲ್ಲ.
ಐಪಿಎಲ್ 2022 ನಾಯಕರು
ಚೆನ್ನೈ ಸೂಪರ್ ಕಿಂಗ್ಸ್ – ಎಂಎಸ್ ಧೋನಿ
ಡೆಲ್ಲಿ ಕ್ಯಾಪಿಟಲ್ಸ್ – ರಿಷಬ್ ಪಂತ್
ಗುಜರಾತ್ ಟೈಟಾನ್ಸ್ – ಹಾರ್ದಿಕ್ ಪಾಂಡ್ಯ
ಕೋಲ್ಕತ್ತಾ ನೈಟ್ ರೈಡರ್ಸ್ – ಶ್ರೇಯಸ್ ಅಯ್ಯರ್
ಲಕ್ನೋ ಸೂಪರ್ ಜೈಂಟ್ಸ್ – ಕೆಎಲ್ ರಾಹುಲ್
ಮುಂಬೈ ಇಂಡಿಯನ್ಸ್ – ರೋಹಿತ್ ಶರ್ಮಾ
ಪಂಜಾಬ್ ಕಿಂಗ್ಸ್ – ಮಯಾಂಕ್ ಅಗರ್ವಾಲ್
ರಾಜಸ್ಥಾನ್ ರಾಯಲ್ಸ್ – ಸಂಜು ಸ್ಯಾಮ್ಸನ್
ಸನ್‌ರೈಸರ್ಸ್ ಹೈದರಾಬಾದ್ – ಕೇನ್ ವಿಲಿಯಮ್ಸನ್