Advertisement

ಚರ್ಚಾ ವಿಷಯ ಅನುಷ್ಠಾನಕ್ಕೆ ಬರುತ್ತಿಲ್ಲ ಏಕೆ?

10:33 AM Jul 06, 2018 | Team Udayavani |

ಚಿತ್ತಾಪುರ: ಪುರಸಭೆ ಸಾಮಾನ್ಯ ಸಭೆಗಳಲ್ಲಿ ಚರ್ಚೆಯಾಗುವ ವಿಷಯಗಳು ಒಂದು ಅನುಷ್ಠಾನಕ್ಕೆ ಬರಲ್ಲ ಅಂದರೆ ಸಾಮಾನ್ಯ ಸಭೆ ಮಾಡುವುದಾದರು ಏಕೆ ಎಂದು ಸದಸ್ಯರಾದ ಶಿವಾಜಿ ಕಾಶಿ, ನಾಗರಾಜ ಭಂಕಲಗಿ, ಶಿವಕಾಂತ ಬೆಣ್ಣೂರಕರ್‌, ಸುರೇಶ ಬೆನಕನಳ್ಳಿ, ರಾಮದಾಸ ಚವ್ಹಾಣ, ಸೈಯದ್‌ ಜಫರುಲ್‌ ಹಸನ್‌ ಸೇರಿದಂತೆ ಇತರ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದರು.

Advertisement

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದ ನಾಗಾವಿ ಚೌಕ್‌, ಜನತಾ ಚೌಕ್‌ ರಸ್ತೆ ಬದಿಯಲ್ಲಿ ಸಾರ್ವಜನಿಕರು ಮಲ, ಮೂತ್ರ ವಿಸರ್ಜನೆ ಮಾಡುತ್ತಾರೆ. ಇದರಿಂದ ಅಲ್ಲಿನ ಪರಿಸರ ಕಲುಷಿತಗೊಂಡಿದೆ. ಇದನ್ನು ತಡೆಯಬೇಕು ಎಂದು ಕಳೆದ ಎರಡೂಮೂರು ಸಭೆಯಲ್ಲಿಯೇ ಚರ್ಚಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಒಟ್ಟಿಗೆ ಸದಸ್ಯರ ಮಾತಿಗೆ ಬೆಲೆ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಎಸ್‌.ಐ. ಪ್ರಕಾಶ ಮಾತನಾಡಿ, ಅದಕ್ಕೆ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸದಸ್ಯ ಸೈಯದ್‌ ಜಫರುಲ್‌ ಹಸನ್‌ ಮಾತನಾಡಿ, ಪಟ್ಟಣದಲ್ಲಿರುವ ಹಂದಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಹಂದಿಗಳನ್ನು ಸ್ಥಳಾಂತರಗೊಳಿಸುವಂತೆ ಪ್ರತಿಯೊಂದು ಸಾಮಾನ್ಯ ಸಭೆಯಲ್ಲಿ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಹೇಳಿದಾಗ, ಮುಖ್ಯಾಧಿಕಾರ ವೆಂಕಟೇಶ ತೆಲಂಗ, ಎಸ್‌ಐ ಪ್ರಕಾಶ ಮಾತನಾಡಿ, ಹಂದಿಗಳನ್ನು ಈಗಾಗಲೇ 8 ಬಾರಿ ಸ್ಥಳಾಂತರಗೊಳಿಸಲಾಗಿದೆ. ಆದರೂ ಮತ್ತೂಮ್ಮೆ ಹಂದಿ ಮಾಲೀಕರನ್ನು ಕಾರ್ಯಾಲಯಕ್ಕೆ ಕರೆಯಿಸಿ ಸ್ಥಳಾಂತರಗೊಳಿಸಲು ಸೂಚಿಸಲಾಗುವುದು ಎಂದು ಭರವಸೆ ನೀಡಿದರು.

ಸದಸ್ಯರಾದ ಶಿವಾಜಿ ಕಾಶಿ, ನಾಗರಾಜ ಭಂಕಲಗಿ ಮಾತನಾಡಿ, ಪ್ಲಾಸ್ಟಿಕ್‌ ನಿಷೇಧ ಜಾರಿಗೆ ತರಲು ಠರಾವು ಪಾಸ್‌ ಮಾಡಲಾಗಿದೆ. ಆದರೆ ಇಲ್ಲಿಯವರೆಗೂ ಅದು ಕಟ್ಟುನಿಟ್ಟಾಗಿ ಕಾರ್ಯರೂಪಕ್ಕೆ ಬಂದಿಲ್ಲ ಅಂದರೇ ಹೇಗೆ?
ಸುಪ್ರಿಂಕೋರ್ಟ್‌ ಮಾರ್ಗಸೂಚಿ ಕೂಡ ಇದೆ. ಆದರೆ ನೀವು ಅದಕ್ಕೂ ಕ್ಯಾರೆ ಅನ್ನುತ್ತಿಲ್ಲ. ಹೀಗಾದರೇ ನಾನು ನಿಮ್ಮ ವಿರುದ್ಧ ಕೋರ್ಟ್‌ ಮೆಟ್ಟಿಲು ಏರಬೇಕಾಗುತ್ತದೆ ಎಂದು ಹೇಳಿದರು.

ಅದಕ್ಕೆ ಮುಖ್ಯಾಧಿಕಾರಿ ವೆಂಕಟೇಶ ತೆಲಂಗ ಮಾತನಾಡಿ, ಒಂದು ವಾರದ ವರೆಗೆ ಸಮಯ ಕೊಡಿ ಅಂಗಡಿ ಮುಂಗ್ಗಟ್ಟುಗಳಲ್ಲಿರುವ ಪ್ಲಾಸ್ಟಿಕ್‌ಗಳನ್ನು ಜಪ್ತಿ ಮಾಡಿಕೊಂಡು ಪ್ಲಾಸ್ಟಿಕ್‌ ಮುಕ್ತ ಪಟ್ಟಣವನ್ನಾಗಿ ಮಾಡುತ್ತೇವೆ ಎಂದು
ಹೇಳಿದರು.

Advertisement

ಯುಜಿಡಿ ಅಧಿಕಾರಿ ಸೈಯದ್‌ ಜಹೀರುಲ್‌ ಹಕ್‌ ಮಾತನಾಡಿ, ಪಟ್ಟಣದಲ್ಲಿ ನಡೆಯುತ್ತಿದ್ದ ಒಳಚರಂಡಿ ಕಾಮಗಾರಿ ಶೇ.100ರಷ್ಟು ಮುಗಿದಿದೆ ಎಂದು ಹೇಳಿದಾಗ, ಪುರಸಭೆ ಉಪಾಧ್ಯಕ್ಷ ಮಹ್ಮದ್‌ ರಸೂಲ್‌ ಮುಸ್ತಫಾ, ಸದಸ್ಯರಾದ
ನಾಗರಾಜ ಭಂಕಲಗಿ, ಶಿವಕಾಂತ ಬೆಣ್ಣೂರಕರ್‌, ರಾಮದಾಸ ಚವ್ಹಾಣ, ದಶರಥ ದೊಡ್ಮನಿ, ಶಿವಾಜಿ ಕಾಶಿ ಮಾತನಾಡಿ, ಪಟ್ಟಣದಲ್ಲಿ ಯುಜಿಡಿ ಕೆಲಸ ಇನ್ನೂ ಶೇ. 25ರಷ್ಟು ಬಾಕಿ ಇದೆ. ಯುಜಿಡಿ ಕೆಲಸ ಯಾವಾಗಿನಿಂದ ಶುರುವಾಗಿದೆಯೋ ಅಂದಿನಿಂದಲೂ ಸಮಸ್ಯೆಗಳು ಉದ್ಭವಿಸಿವೆ. 

ಎಲ್ಲಿ ನೋಡಿದರೂ ಅಲ್ಲಿ ಯುಜಿಡಿ ಕೆಲಸ ಮಾಡಿದ್ದಾರೆ. ಕಳಪೆ ಸಿಮೆಂಟ್‌, ಮರಳು, ಇಟ್ಟಂಗಿ ಬಳಸಿದ್ದರಿಂದ ಚೇಂಬರ್‌ಗಳು ಕಿತ್ತು ಹೋಗಿವೆ. ಯುಜಿಡಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದೇ ತಾಲೂಕಿನ ಹೆಸರು ಕೆಡಿಸಿದ್ದಾರೆ. ಯುಜಿಡಿ ಅಧಿಕಾರಿಗಳು ಮಾತ್ರ ಪುರಸಭೆ ಸಾಮಾನ್ಯ ಸಭೆಯಲ್ಲಿ ಬಂದು ಯುಜಿಡಿ ಕೆಲಸ ಶೇ. 100ರಷ್ಟು ಮುಗಿದಿದೆ ಎಂದು ಹೇಳುತ್ತಾರೆ.

ಅವರನ್ನು ಪಟ್ಟಣದ 23 ವಾರ್ಡ್‌ಗಳಿಗೆ ಕರೆದುಕೊಂಡು ಹೋಗಿ ಅಲ್ಲಿನ ಸಮಸ್ಯೆಗಳನ್ನು ತೋರಿಸಲು ಸಮಯ ನೀಡಿ ಎಂದು ಪಟ್ಟಹಿಡಿದಾಗ, ಮುಖ್ಯಾಧಿಕಾರಿ ಸೋಮವಾರ ಬನ್ನಿ ಪ್ರತಿಯೊಂದು ವಾರ್ಡ್‌ಗಳಲ್ಲಿನ ಸಮಸ್ಯೆ ಆಲಿಸೋಣ ಎಂದು ಯುಜಿಡಿ ಅಧಿಕಾರಿಗಳಿಗೆ ಸೂಚಿಸಿದರು.

ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಹೋತಿನಮಡಿ, ಸದಸ್ಯರಾದ ಮಲ್ಲಿಕಾರ್ಜುನ ಪೂಜಾರಿ, ಶಿವಕಾಂತ ಬೆಣ್ಣೂರಕರ್‌, ವಿನೋದ ಗುತ್ತೇದಾರ, ಸಿದ್ರಾಮೇಶ್ವರ ಸಜ್ಜನಶೆಟ್ಟಿ, ನಾಗರಾಜ ಕಡಬೂರ, ಸುರೇಶ ಅಳ್ಳೋಳ್ಳಿ, ಅನ್ನಪೂರ್ಣ
ಕಲ್ಲಕ್‌, ವನಮಲಮ್ಮ ಪಾಲಪ್‌, ಜಗದೇವಿ ಪ್ರತಾಪ, ಮಹಾಲಕ್ಷ್ಮೀ ವೆಂಕಟೇಶ, ರಫತ್‌ ಫರದಾನ, ಶಾಂತಬಾಯಿ ಬಮ್ಮನಳ್ಳಿ ಅಧಿಕಾರಿಗಳಾದ ಮುತ್ತಣ್ಣ ಭಂಡಾರಿ, ಸೋಮು ರಾಠೊಡ, ಸಂತೋಷ, ಸ್ವರೂಪಾ ಹಾಗೂ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next