Advertisement

ಮೋದಿಯವರೇ ಪ್ರತಿಭಟನಾಕಾರರು ಇರುವ ಮಾರ್ಗವನ್ನೇ ಆರಿಸಿಕೊಂಡಿದ್ಯಾಕೆ?: ದಿನೇಶ್ ಗುಂಡೂರಾವ್

09:36 AM Jan 07, 2022 | Team Udayavani |

ಬೆಂಗಳೂರು: ಮೋದಿಯವರೆ, ಇನ್ನೆಷ್ಟು ದಿನ ನಿಮ್ಮ ಆರ್ ಎಸ್ಎಸ್ ಕೃಪಾಪೋಷಿತ ನಾಟಕ ಮಂಡಳಿಯ ಅತಿ ಮುಖ್ಯ ಪಾತ್ರಧಾರಿಯಾಗುತ್ತೀರಿ? ನೀವು 42,570 ಕೋಟಿ ಯೋಜನೆಯ ಶಂಕುಸ್ಥಾಪನೆ ನೆರವೇರಿಸಲು ಪಂಜಾಬ್‌ನ ಫಿರೋಜ್‌ಪುರಕ್ಕೆ ಹೋಗುವುದಿತ್ತು. ಆ ರಾಲಿಯಲ್ಲಿ 70 ಸಾವಿರ ಜನ ಸೇರುವ ನಿರೀಕ್ಷೆಯಿತ್ತು. ಆದರೆ ಸೇರಿದ್ದು 700 ಜನ ಮಾತ್ರ. ಆಗ ರೂಟ್ ಮ್ಯಾಪ್ ಬದಲಾಗಿದ್ಯಾಕೆ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

Advertisement

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮೋದಿಯವರೇ ನೀವು ಬಿಜೆಪಿಯವರು ಎನ್ನುವುದಕ್ಕಿಂತ, ನೀವು ಈ ದೇಶದ ಪ್ರಧಾನಿ ಎಂಬ ಅಭಿಮಾನ ಮತ್ತು ಗೌರವ ನಮ್ಮ ಪಕ್ಷಕ್ಕಿದೆ. ವಿವಿಐಪಿ ಗಳ ಭದ್ರತಾ ವ್ಯವಸ್ಥೆ ಎಸ್ಪಿಜಿ ಯವರದ್ದು. ಹುಸೈನಿವಾಲದ ಹುತಾತ್ಮರ ಸ್ಮಾರಕಕ್ಕೆ ನೀವು ಭೇಟಿ ನೀಡುವುದು ಎಸ್ಪಿಜಿ ಯವರ ಟಿಪಿಯಲ್ಲಿರುತ್ತದೆ. ಅದ್ಯಾಕೆ ನೀವು ಹೆಲಿಕಾಪ್ಟರ್ ಮಾರ್ಗ ಬಿಟ್ಟು ರಸ್ತೆಮಾರ್ಗ ಆರಿಸಿಕೊಂಡಿರಿ? ಪ್ರಿಯ ಮೋದಿಯವರೆ, ನಿಮ್ಮ ವಿರುದ್ಧ ಪಂಜಾಬ್‌ನ ರೈತರು ಸಿಡಿದಿರುವುದು ನಿಮಗೆ ಗೊತ್ತಿತ್ತು. ನಿಮ್ಮ ಆಗಮನ ಅಲ್ಲಿಯ ರೈತರನ್ನು ರೊಚ್ಚಿಗೆಬ್ಬಿಸಿತ್ತು. ಆದರೂ ಹುಸೈನಿವಾಲಕ್ಕೆ ವಾಯುಮಾರ್ಗದಲ್ಲಿ ತೆರಳಬೇಕಿದ್ದ ನೀವು ಹವಾಮಾನದ ಕಾರಣ ನೀಡಿ ಪ್ರತಿಭಟನಾಕಾರರು ಇರುವ ರಸ್ತೆ ಮಾರ್ಗವನ್ನೇ ಆರಿಸಿಕೊಂಡಿದ್ಯಾಕೆ? ಸಿಂಪಥಿ ಪಡೆಯುವ ನಾಟಕವೆ ಇದು‌ ಎಂದು ಪ್ರಶ್ನೆ ಮಾಡಿದ್ದಾರೆ.

ಮೋದಿಯವರೆ, ಪಂಜಾಬ್‌ನಲ್ಲಿ ನಡೆದ ಘಟನೆಯ ಬಗ್ಗೆ ನಿಮ್ಮ ಪಕ್ಷದ ನಾಯಕರು ಇದು ಕಾಂಗ್ರೆಸ್ ಪಕ್ಷದ ಪಿತೂರಿ ಎಂದು ಆರೋಪಿಸಿದ್ದಾರೆ. ಆದರೆ ಕಾಂಗ್ರೆಸ್ ಮಾನವೀಯತೆಯ ಮೇಲೆ ನಂಬಿಕೆ ಇಟ್ಟಿದೆ. ದಯವಿಟ್ಟು ನಿಮ್ಮ ಪಕ್ಷದವರಿಗೂ ಮಾನವೀಯತೆಯ ಪಾಠ ಕಲಿಸಿ. ಕೊಂದು ಉಳಿಸಿಕೊಳ್ಳುವ ಧರ್ಮ ಜಗತ್ತಿನಲ್ಲೇ ಇಲ್ಲ ಎಂಬುದು ಕಾಂಗ್ರೆಸ್‌ಗೂ ಅರಿವಿದೆ ಎಂದಿದ್ದಾರೆ.

ಇದನ್ನೂ ಓದಿ:ಮುಂಬೈನಲ್ಲಿ ಒಂದೇ ದಿನ 20 ಸಾವಿರ ಸೋಂಕು ಪ್ರಕರಣ: ಲಾಕ್ ಡೌನ್ ಬಹುತೇಕ ಖಚಿತ

ಐಬಿ, ರಾ, ಸಿಬಿಐ, ಮಿಲಿಟರಿ ಇಂಟಲಿಜೆನ್ಸ್, ಅಷ್ಟೇ ಯಾಕೆ ಎಸ್ ಎಸ್ಎ ಮುಖ್ಯಸ್ಥರು ಕೂಡ ಪ್ರಧಾನಿಗೆ ರಿಪೋರ್ಟ್ ಮಾಡಿಕೊಳ್ಳುತ್ತಾರೆ. ಪಂಜಾಬ್ ಘಟನೆಯ ಬಗ್ಗೆ ಅವರ್ಯಾರು ಪ್ರಧಾನಿಗೆ ಪೂರ್ವಭಾವಿ ಮಾಹಿತಿಯೇ ಕೊಡಲಿಲ್ಲವೆ? ಒಂದು ವೇಳೆ ಆ ಮಾಹಿತಿ ಪ್ರಧಾನಿಗೆ ಇಲ್ಲವೆಂದರೆ ಅದು ಪಂಜಾಬ್ ರಾಜ್ಯ ಸರ್ಕಾರದ ಭದ್ರತಾ ಲೋಪವೋ? ಅಥವಾ ಕೇಂದ್ರ ಸರ್ಕಾರದ ಲೋಪವೋ. ಭದ್ರತಾ ಲೋಪ ಯಾರದ್ದು ಎಂದು ದಿನೇಶ್ ಗುಂಡೂರಾವ್ ಪ್ರಶ್ನೆ ಮಾಡಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next