Advertisement

“ಯಾಗ ಭೂಮಿ ಭಾರತದಿಂದ ದೇಶ ವಿಶ್ವಗುರು ಪಟ್ಟದತ್ತ’

01:00 AM Feb 20, 2019 | Harsha Rao |

ಕುಂಬಳೆ: ಪ್ರಕೃತಿಯಲ್ಲಿರುವ ಶಕ್ತಿಗಳು ಜೀವಕೋಟಿಗಳನ್ನು ಸಂರಕ್ಷಿಸುತ್ತವೆ ಎಂಬ ಕಲ್ಪನೆ ಭಾರತೀಯ ಪರಂಪರೆಯ ಹಿರಿಮೆಯಾಗಿದೆ. ಪ್ರಾಚೀನ ಕಾಲದಿಂದಲೂ ಭಾರತ ಯಾಗ ಭೂಮಿಯಾಗಿ ಲೋಕೋದ್ದಾರದ ಕೈಂಕರ್ಯದ ಮೂಲಕ ವಿಶ್ವಗುರುತ್ವಕ್ಕೆ ಪಾತ್ರವಾಗಿತ್ತು. ವೇದಗಳು ಜಗತ್ತಿನ ಸ್ತಂಭಗಳಾಗಿದ್ದು, ಕೊಂಡೆವೂರಿನಲ್ಲಿ ನಡೆಯುತ್ತಿರುವ ವೇದ ಅರ್ಚನೆ ವಿಶಿಷ್ಟವಾಗಿ ನೆಮ್ಮದಿ ನೀಡುತ್ತದೆ ಎಂದು ಜಿಲ್ಲೆಯ ಹಿರಿಯ ವೈದಿಕ ವಿದ್ವಾಂಸ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರು ನುಡಿದರು. 

Advertisement

ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಅತ್ಯಪೂರ್ವ ಅತಿರಾತ್ರ ಸೋಮಯಾಗದ ಪ್ರಥಮ ದಿನವಾದ ಫೆ. 18ರಂದು ಸಂಜೆ ನಡೆದ ಧರ್ಮ ಸಂದೇಶ ಸಭೆಯಲ್ಲಿ ಅವರು ಮಾತನಾಡಿದರು. 

ದೇಹದಲ್ಲಿ  ವಿವಿಧ ಅಂಗಗಳು ವಿವಿಧ ಕೆಲಸಗಳನ್ನು ನಿರ್ವಹಿಸುವಂತೆ ಸಮಾಜದ ಅಂಗಗಳಾದ ಹಿಂದೂ ಸಮಾಜದ ವಿವಿಧ ಜಾತಿ ಬಾಂಧವರು ಧರ್ಮ ಸಂರಕ್ಷಣೆಗಾಗಿ ಕೈಜೋಡಿಸುವ ಮಹಾನ್‌ ಚಿಂತನೆ ಅತಿರಾತ್ರ ಸೋಮಯಾಗದ ಹಿನ್ನೆಲೆಯ ಈ ಸಂದರ್ಭ ಜಾಗƒತ ಸಮಾಜಕ್ಕೆ ನಿರ್ದೇಶಿಸಲ್ಪಡಲಿ ಎಂದು ಅವರು ಕರೆನೀಡಿದರು.

ಸಮಾರಂಭದಲ್ಲಿ ವಿವಿಧ ಸಮಾಜದ ಪ್ರಮುಖರನ್ನು ಗೌರವಿಸಲಾಯಿತು. ಕೇಶವ ಆಚಾರ್ಯ ಉಳಿಯತ್ತಡ್ಕ (ವಿಶ್ವಬ್ರಾಹ್ಮಣ), ಮಧುಸೂದನ ಅಯ್ಯರ್‌(ಯಾದವ), ರವೀಂದ್ರ ಮನ್ನಿಪ್ಪಾಡಿ (ಕುಲಾಲ), ಉಜಾರು (ಕೊರಗ), ಪದ್ಮನಾಭ ನರಿಂಗಾನ (ಬಾಕುಡ), ನಾರಾಯಣ ಎಂ. (ಮೊಗೇರ), ಅನಂತ ಐಲ (ದೇವಾಡಿಗ), ತಿಮ್ಮಪ್ಪ ಭಂಡಾರಿ (ಭಂಡಾರಿ ಸಮಾಜ), ಕರುಣಾಕರ  ಬೆಳ್ಚಪ್ಪಾಡ (ಬೋವಿ), ರಾಮಕೃಷ್ಣ ಮಾಂಬಾಡಿ, ರಘು ಸಫಲ್ಯ (ಗಾಣಿಗ), ಕೃಷ್ಣನ್‌ ಮುಳ್ಳೇರಿಯ (ದೇವಾಂಗ), ಗೋಪಾಲ ನಿಡಿಂಬಿರಿ (ಮಡಿವಾಳ), ಮಹಾಲಿಂಗ ಜೋಗಿ ಸಜಕಿಲ (ಜೋಗಿ) ಅವರನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದ  ಗಣ್ಯರು ಅಭಿನಂದಿಸಿದರು.

ಮಾಣಿಲ ಶ್ರೀ ಧಾಮದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ, ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನಗೈದರು. 

Advertisement

ಕಟೀಲು ಶ್ರೀಕ್ಷೇತ್ರದ ಕಮಲಾದೇವಿ ಪ್ರಸಾದ ಆಸ್ರಣ್ಣ, ವಿದ್ವಾನ್‌.ಗುಂಡಿಬೆ„ಲು ಸುಬ್ರಹ್ಮಣ್ಯ ಅವಧಾನಿ, ಯಾಗ ಸಮಿತಿ ಕಾರ್ಯಾಧ್ಯಕ್ಷ ನ್ಯಾಯವಾದಿ ಮೋನಪ್ಪ ಭಂಡಾರಿ, ಡಾ| ನಾರಾಯಣ್‌ ಬೆಂಗಳೂರು, ಕಾರ್ಯದರ್ಶಿ ಡಾ| ಶ್ರೀಧರ ಭಟ್‌ ಉಪ್ಪಳ, ಪರವರನ್‌ ಅಚ್ಯುತನ್‌ ನಂಬೂದಿರಿ ಉಪಸ್ಥಿತರಿದ್ದು ಶುಭಹಾರೈಸಿದರು. ರಾಮಚಂದ್ರ  ಸಿ. ಉಪ್ಪಳ  ಸ್ವಾಗತಿಸಿದರು. ನ್ಯಾಯವಾದಿ ಗಂಗಾಧರ ಕೊಂಡೆವೂರು ಮತ್ತು ಪುರುಷೋತ್ತಮ ಭಂಡಾರಿ ನಿರೂಪಿಸಿದರು.

ಶ್ರೀ ಗಾಯತ್ರೀ ದೇವಿಯ ಸನ್ನಿಧಾನದಲ್ಲಿ ಬೆಳಗ್ಗೆ ಬಿಂಬಶುದ್ಧಿ, ಶಾಂತಿಹೋಮ, ಪ್ರಾಯಶ್ಚಿತ್ತ ಹೋಮ, ಗಣಯಾಗ, ದಕ್ಷಿಣಾಮೂರ್ತಿ ಯಾಗ ನಡೆಯಿತು. ಯತಿವರ್ಯರಿಗೆ ಪೂರ್ಣಕುಂಭ ಸ್ವಾಗತದ ಬಳಿಕ ಅನುಗ್ರಹ ಸಂದೇಶ, ಮಧ್ಯಾಹ್ನ ಪ್ರಸನ್ನ ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಿತು. ಸಂಜೆ ದುರ್ಗಾನಮಸ್ಕಾರ ಪೂಜೆ ನಡೆಯಿತು.

ಯಾಗಶಾಲೆಯಲ್ಲಿ  ಗಣಪತಿ ಪೂಜೆ,  ಸ್ವಸ್ತಿವಾಚನ, ಮಹಾಸಂಕಲ್ಪ, ಋತ್ವಿಗÌರಣ, ಮಧುಪರ್ಕ ಪೂಜೆ, ದೇವನಾಂದಿ, ಯಾಗಶಾಲಾ ಪ್ರವೇಶ, ಕೂಷ್ಮಾಂಡ ಸಾವಿತಾದಿ ಹೋಮ, ಸೋಮ ಪೂಜೆ, ಪ್ರವಗ್ಯì ಸಂಭರಣ, ದೀಕ್ಷಣಿಯಾ ಇಷ್ಟಿ ಅಪರಾಹ್ನ ದೀûಾ ಭೋಜನ, ನವನೀತ ದೀûಾ, ಅಪುÕದೀûಾ, ದಂಡದೀûಾ, ಮಂತ್ರದೀûಾ, ಪಯೋವ್ರತ, ಸನೀಹಾರ ಪ್ರೇ‚ಷಣ ನಡೆಯಿತು.

ಫೆ. 18ರಂದು ಹರತಾಳ ದಿನವಾಗಿದ್ದರೂ  ಕಾರ್ಯಕ್ರಮಕ್ಕೆ ಭಕ್ತರ ಕೊರತೆಯಾಗದೆ ನಿರಾತಂ‌ಕವಾಗಿ ಜರಗಿತು.

ಇಂದಿನ ಕಾರ್ಯಕ್ರಮ 
ಫೆ. 20 ರಂದು ಶ್ರೀ ಗಾಯತ್ರೀ ದೇವಿಯ ಸನ್ನಿಧಾನದಲ್ಲಿ ಬೆಳಗ್ಗೆ 5ರಿಂದ 8ರ ತನಕ ಪುಣ್ಯಾಹ, ಗಣಯಾಗ, ನವಗ್ರಹ ಹೋಮ, ಮƒತ್ಯುಂಜಯ ಹೋಮ, ಗಾಯತ್ರಿ ಹೋಮ. ಬೆಳಗ್ಗೆ 10.ಕ್ಕೆ ಯತಿವರ್ಯರಿಗೆ-ಪೂರ್ಣಕುಂಭ ಸ್ವಾಗತ. ಬೆಳಗ್ಗೆ 10.30ಕ್ಕೆ ಒಡಿಯೂರು ಶ್ರೀಗುರುದೇವಾನಂದ ಸ್ವಾಮೀಜಿ,ಕರಿಂಜೆ ಶ್ರೀಮುಕ್ತಾನಂದ ಸ್ವಾಮೀಜಿ, ಧರ್ಮಸಂದೇಶ ನೀಡುವರು. ಮಧ್ಯಾಹ್ನ ಪ್ರಸನ್ನ ಮಹಾಪೂಜೆ, ಅನ್ನ ಸಂತರ್ಪಣೆ. ಸಂಜೆ 4. ರಿಂದ ಶಕ್ತಿದಂಡಕಮಂಡಲ ಪೂಜೆ, ಬಿಂಬ ಶಯ್ನಾ ವಾಸ ನಡೆಯಲಿದೆ.

ಯಾಗಶಾಲೆಯಲ್ಲಿ ಸೂರ್ಯೋದಯಕ್ಕೆ ಸೋಮಪೂಜೆ, ಪ್ರಾಯಣೀಯೆ„ಷ್ಟಿ, ಸೋಮಕ್ರಯ, ಸೋಮರಾಜಾತಿಥ್ಯ, ಆತಿಥ್ಯೆàಷ್ಟಿ,  ಪ್ರವಗ್ಯì, ಉಪಸತ್‌, ಸುಬ್ರಹ್ಮಣ್ಯಾಹ್ವಾನ ಅಪರಾಹ್ನ ಪ್ರವಗ್ಯì, ಉಪಸತ್‌, ಸುಬ್ರಹ್ಮಣ್ಯಾಹ್ವಾನ, ಪಯೋವ್ರತಗಳು ನಡೆಯಲಿವೆ.

ಶ್ರೀ ಗಾಯತ್ರೀ ಸಭಾಮಂಟಪದಲ್ಲಿ ರಾತ್ರಿ 7.30ರಿಂದ ಧಾರ್ಮಿಕ ಸಭೆ ನಡೆಯಲಿದ್ದು,  ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ, ಆಶೀರ್ವಚನ ನೀಡುವರು. ಬ್ರಹ್ಮಶ್ರೀ ವಾಸುದೇವ ಆಸ್ರಣ್ಣ, ಆನುವಂಶಿಕ ಪ್ರಧಾನ ಅರ್ಚಕರು, ಶ್ರೀ ಕ್ಷೇತ್ರ ಕಟೀಲು ಹಾಗೂ ಬ್ರಹ್ಮಶ್ರೀ ಪಾಂಬೂಮೇಕಾಡ್‌ ಜಾತವೇದನ್‌ ನಂಬೂದಿರಿಪ್ಪಾಡ್‌, ಪ್ರಧಾನ ಅರ್ಚಕರು, ಪಾಂಬೂಮೇಕಾಡ್‌ ಶ್ರೀ ನಾಗರಾಜ ಕ್ಷೇತ್ರ. ತ್ರಶ್ಶೂರು ಅವರು ಉಪಸ್ಥಿತರಿರುವರು. ಸಂಸದ ನಳಿನ್‌ ಕುಮಾರ್‌ ಕಟೀಲು ಅಧ್ಯಕ್ಷತೆ ವಹಿಸುವರು. ಜಗದೀಶ್‌ ಶೆಟ್ಟರ್‌, ಮಾಜಿ ಮುಖ್ಯಮಂತ್ರಿಗಳು ಹಾಗೂ ಕರ್ನಾಟಕದ ಶಾಸಕರಾದ ಎಸ್‌. ಅಂಗಾರ, ಬಿ.ಎಂ.ಸುಕುಮಾರ ಶೆಟ್ಟಿ, ಹರೀಶ್‌ ಪೂಂಜ ಬೆಳ್ತಂಗಡಿ, ಮಾಜಿ ವಿಧಾನಪರಿಷತ್‌ ಸದಸ್ಯೆ ತಾರಾ ಅನುರಾಧ, ಪ್ರಮುಖರಾದ ವಿಶಾಲ್‌ ಹೆಗ್ಡೆ ನಿಟ್ಟೆ ಐಕಳ ಹರೀಶ್‌ ಶೆಟ್ಟಿ, ಉದ್ಯಮಿ, ಮುಂಬಯಿ, ಮಂಜುನಾಥ ಭಂಡಾರಿ, ರವಿ ಶೆಟ್ಟಿ, ಉದ್ಯಮಿ ಮುಂಬಯಿ. ರಘು ಎಲ್‌ ಶೆಟ್ಟಿ, ಉದ್ಯಮಿ, ಮುಂಬಯಿ. ಎಸ್‌. ಆರ್‌. ಸತೀಶ್ಚಂದ್ರ, ನಿತ್ಯಾನಂದ ಮುಂಡೋಡಿ, ಕರ್ನಿರೆ ವಿಶ್ವನಾಥ್‌ ಶೆಟ್ಟಿ, ಉದ್ಯಮಿ, ಮುಂಬಯಿ. ನ್ಯಾಯವಾದಿ ರವೀಂದ್ರನಾಥ್‌ ರೈ,ಬಿ. ವಸಂತ ಪೈ ಬದಿಯಡ್ಕ, ಬಿ.ಆರ್‌. ನಾಗೇಂದ್ರಪ್ರಸಾದ್‌, ಕಡಂದಲೆ ಸುರೇಶ್‌ ಭಂಡಾರಿ, ಉದ್ಯಮಿ, ಮುಂಬಯಿ, ಸಂಜೀವ ಶೆಟ್ಟಿ, ತಿಂಬರ, ಕೊರಗಪ್ಪ ಶೆಟ್ಟಿ ಸಣ್ಣಹಿತ್ಲು ಉಪಸ್ಥಿತರಿರುವರು.ಸಮಾರಂಭದಲ್ಲಿ ಸಮಾಜ ಸೇವಕ ಗೋಪಾಲ ಎಂ ಬಂದ್ಯೋಡ್‌ ಅವರನ್ನು ಸಮ್ಮಾನಿಸಲಾಗುವುದು.

“ಸ್ವಕುಲಧರ್ಮಾರಾದನೆ’ -ವಿವಿಧ 14 ಸಮುದಾಯಗಳ ಕುಲಕಸುಬಿನ ಉತ್ಪನ್ನಗಳ ಮೆರವಣಿಗೆ ಉಪ್ಪಳ ಪೇಟೆಯಿಂದ ಶ್ರೀ ಕ್ಷೇತ್ರಕ್ಕೆ ವಿವಿಧ ವಾದ್ಯಘೋಷಗಳೊಂದಿಗೆ ಆಗಮಿಸಿತು.

ಉಪ್ಪಳದಿಂದ ಶ್ರೀಕೊಂಡೆವೂರು ಸನ್ನಿಧಾನಕ್ಕೆ ಆಗಮಿಸಿದ ಮೆರವಣಿಗೆಯಲ್ಲಿ ಮೊದಲಿಗೆ ಸೋಮಲತೆಯನ್ನು ಅಲಂಕೃತ ಪಾಲಕಿಯಲ್ಲಿ ದೀವಟಿಗೆ, ಕೊಂಬು ವಾದ್ಯ ಸಹಿತ ರಾಜ ಮರ್ಯಾದೆಗಳೊಂದಿಗೆ ತರಲಾಯಿತು. ಜತೆಗೆ ಕೊರಗ ಸಮಾಜದವರಿಂದ ಕುಕ್ಕೆ, ಬುಟ್ಟಿ, ಹಣೆಯಲು ಬೇಕಾದ ಬೆತ್ತಗಳು, ಮೊಗೇರ ಸಮಾಜದವರು ಹೆಣೆದ ಚಾಪೆ ಇತ್ಯಾದಿ ಪರಿಕರಗಳು, ಭಂಡಾರಿ ಸಮಾಜದವರು ಶ್ವೇತಛತ್ರ ಸೇವೆ, ಯಾಗ ಸಂದರ್ಭದ ûೌರ ಸೇವೆ, ತೀಯಾ ಸಮಾಜದವರು ಸೀಯಾಳ, ಬಾಕುಡ ಸಮಾಜದವರು ವಿವಿಧ ಧಾನ್ಯಗಳು, ಕುಂಬಾರ ಬಾಂಧವರು ಅರುಣಕೇತಕ ಚಯನದೊಂದಿಗೆ ನಡೆಯಲಿರುವ ಯಾಗಕ್ಕೆ ಅಗತ್ಯವಿರುವ ಮಹಾವೀರ ಕುಡಿಕೆ ಸಹಿತ 1,200 ಮಣ್ಣಿನ ಪಾತ್ರೆಗಳು, ಜೋಗಿ   ಸಮಾಜದವರು ಯಾಗದ ಬಳಕೆಗಿರುವ ತಂಬೂರಿ, ಸಿಕ್ಕ ಸಹಿತ ವಿವಿಧ ಬಳ್ಳಿ ಪರಿಕರಗಳು, ವಿಶ್ವಬ್ರಾಹ್ಮಣ ಸಮಾಜದವರು ರಚಿಸಿದ ನಾಲ್ಕು ವೇದ ಪುರುಷರ ಆಕರ್ಷಕ ಮೂರ್ತಿಗಳು, ಯಾಗಕ್ಕೆ ಅಗತ್ಯವಿರುವ ಮರದ ಹಾಗೂ ಕಬ್ಬಿಣದ ಪರಿಕರಗಳು, ನೇಕಾರ ಸಮಾಜ ಬಾಂಧವರು ಬಟ್ಟೆಬರೆಗಳನ್ನು, ಗಾಣಿಗ ಸಮಾಜದವರು ತಿಲತೆ„ಲ, ಮಡಿವಾಳ ಸಮಾಜದವರು ದೀವಟಿಗೆ, ದೇವಾಡಿಗ ಸಮಾಜದವರು  ವಾದ್ಯಸೇವೆ, ಬೋವಿ ಸಮಾಜದವರು ಬಿಲ್ವಪತ್ರೆ, ಪಾಲಾಕ್ಷ, ಹತ್ತಿ ಮರದ ಕಂಬಗಳು, ಯಾದವ ಸಮಾಜದವರು ಯಾಗ ಬಳಕೆಯ ತುಪ್ಪವನ್ನು ಮೆರವಣಿಗೆಯಲ್ಲಿ ತಂದು ಸಮರ್ಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next