Advertisement
ಸ್ಪರ್ಧಾತ್ಮಕ ಪರೀಕ್ಷೆಯ ಭಯ, ಹೊಸತಾಗಿ ಹಾಕಿದ ಯೋಜನೆಯನ್ನು ಕಾರ್ಯರೂಪ ಗೊಳಿಸಲು ಭಯ. ಗುರಿ ತಲುಬೇಕೆಂಬ ಹಂಬಲವಿದ್ದರೂ ಭಯ ಮಾತ್ರ ಬಿಡಲ್ಲ. ಹಾಗಾದರೆ ಭಯ ಉದ್ಭವವಾಗಲು ಕಾರಣಗಳೇನು ಮತ್ತು ಅದರಿಂದ ಪಾರಾಗಲು ಸೂಕ್ತ ಪರಿಹಾರವೇನು ಎಂಬುವುದನ್ನು ತಿಳಿದುಕೊಳ್ಳೋಣ.
ಒಪ್ಪಿಕೊಳ್ಳುವಿಕೆ. ಕೇವಲ ನಮಗೆ ಮಾತ್ರವಲ್ಲ ಪ್ರತಿಯೊಬ್ಬರಿಗೂ ತಮ್ಮದೇ ಅದ ಭಯಗಳಿವೆ ಅನ್ನೋದನ್ನು ನಾವು ಒಪ್ಪಿಕೊಳ್ಳಬೇಕಾಗುತ್ತೆ. ಅದಲ್ಲದೆ ಭಯಪಡುವುದರಿಂದ ಯಾವುದೇ ಲಾಭವಿಲ್ಲ. ಸೋಲು ಗೆಲುವು, ಸುಖ ದುಃಖಗಳು ಒಂದೇ ನಾಣ್ಯದ ಎರಡು ಮುಖಗಳು ಎಂಬುವುದನ್ನು ನಾವು ಅರ್ಥಮಾಡಿಕೊಂಡು ಮುಂದೆ ಸಾಗಿದರೆ ಒಳ್ಳೆಯದು.
Related Articles
ಓದುವುದು. ನಮ್ಮಲ್ಲಿ ಅನುಭವಗಳು ಕಡಿಮೆ ಆದ್ದರಿಂದ ಸಾಧಕರ, ಮಹಾನ್ ವ್ಯಕ್ತಿಗಳ ಆತ್ಮ ಕಥೆಗಳು, ಪುಸ್ತಕಗಳನ್ನು ಓದಿದರೆ ನಮಗೆ ಹೊಸ ದಾರಿಯೊಂದಿಗೆ ಜೀವನಕ್ಕೆ ಸ್ಪೂರ್ತಿಯು ಸಿಗುತ್ತದೆ. ಭಯ ಕಡಿಮೆ ಆಗುತ್ತದೆ.
Advertisement
ಲಿಖೀತ ರೂಪದಲ್ಲಿ ಗುರಿ, ಧ್ಯೇಯ. ನಮ್ಮ ಗುರಿಯನ್ನು ಕನಸನ್ನು ಲಿಖೀತ ರೂಪದಲ್ಲಿ ಬರೆಯುದು ಅತ್ಯಂತ ಉಪಯುಕ್ತ. ಲಿಖೀತ ರೂಪದಲ್ಲಿರುವುದು ನಮ್ಮನ್ನು ವಾಸ್ತವತೆಗೆ ಕೊಂಡೊಯ್ಯುತ್ತದೆ.
ನಿರಂತರ ಅಭ್ಯಾಸ, ಮಾರ್ಗದರ್ಶನ. ನಮ್ಮ ಕನಸನ್ನು ನನಸಾಗಿಸಲು ನಿರಂತರ ಪ್ರಯತ್ನ ಸರಿಯಾದ ರೀತಿಯಲ್ಲಿ ತಿಳಿದವರಿಂದ ಮಾರ್ಗದರ್ಶನ ಪಡೆದುಕೊಂಡಲ್ಲಿ ಸೋಲಿನ ಪ್ರಮಾಣ ಕಡಿಮೆಯಾಗಿ ಭಯ ನಿವಾರಣೆ ಆಗುತ್ತದೆ.
ಇವುಗಳೊಂದಿಗೆ ಪ್ರಾಮಾಣಿಕ ಪ್ರಯತ್ನ ಹಾಗೂ ಪರಿಶ್ರಮದಿಂದ ಜೀವನ ಸಾಗಿಸಿದರೆ ಭಯ ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ. ಭಯ ಎಂದಿಗೂ ಧೀರ್ಘಕಾಲಿಕ ಸಮಸ್ಯೆ ಅಲ್ಲ. ಹಾಗಾಗಿ ಧೈರ್ಯದಿಂದ ಮುಂದೆ ಸಾಗಿ.
-ಚೈತನ್ಯ ಆಚಾರ್ಯ, ಕೊಂಡಾಡಿ