Advertisement

‘ನೋಟು ಅಮಾನ್ಯ ದಿನ’ವನ್ನು ಆಚರಿಸುವಂತೆ ಪ್ರಧಾನಿಗೆ ಓವೈಸಿ ಸವಾಲು

09:55 PM Jan 02, 2023 | Team Udayavani |

ಹೈದರಾಬಾದ್: 2016ರ ನೋಟು ಅಮಾನ್ಯೀಕರಣದ ಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಎಐಎಂಐಎಂ ಅಧ್ಯಕ್ಷ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರು ಸೋಮವಾರ ಆಡಳಿತಾರೂಢ ಬಿಜೆಪಿಗೆ ‘ನೋಟು ಅಮಾನ್ಯ ದಿನ’ವನ್ನು ಆಚರಿಸುವಂತೆ ಸವಾಲು ಹಾಕಿದ್ದಾರೆ.

Advertisement

ನೋಟು ಅಮಾನ್ಯೀಕರಣ ಪ್ರಾಥಮಿಕವಾಗಿ ಕಪ್ಪು ಹಣದ ಹರಿವು ಮತ್ತು ಇತರವುಗಳನ್ನು ಪರಿಶೀಲಿಸಲು ತೆಗೆದುಕೊಳ್ಳಲಾಗಿದೆ ಎಂದು ಪದೇ ಪದೇ ಹೇಳಿಕೊಳ್ಳಲಾಗಿದೆ ಆದರೆ ನೋಟು ಅಮಾನ್ಯೀಕರಣವು ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರಿದೆ ಎಂದು ಓವೈಸಿ ಹೇಳಿದ್ದಾರೆ.

ಓವೈಸಿ ಪ್ರಕಾರ, ನೋಟು ರದ್ದತಿ ನಿರ್ಧಾರವು ತಪ್ಪಾಗಿದೆ ಏಕೆಂದರೆ ಇದು 2016-17 ರಲ್ಲಿ 8.3 ಶೇಕಡಾದಿಂದ 2019-2020 ರಲ್ಲಿ 4 ಶೇಕಡಾಕ್ಕೆ ಜಿಡಿಪಿ ಬೆಳವಣಿಗೆಯಲ್ಲಿ ಇಳಿಕೆಗೆ ಕಾರಣವಾಯಿತು. ನೋಟು ಅಮಾನ್ಯೀಕರಣ ಯಶಸ್ವಿಯಾಗಿದ್ದರೆ ಮತ್ತು ಅದು ಯಶಸ್ವಿಯಾಗಿದೆ ಎಂದು ಭಾವಿಸಿದರೆ ನೀವು ಏಕೆ ‘ನೋಟು ರದ್ದತಿ ದಿನ’ ಆಚರಿಸಬಾರದು ಎಂದು ನಾವು ಪ್ರಧಾನಿಯವರಿಗೆ ಹೇಳಲು ಬಯಸುತ್ತೇವೆ ಎಂದಿದ್ದಾರೆ.

ನೋಟು ಅಮಾನ್ಯೀಕರಣದಿಂದಾಗಿ ಮಹಿಳೆಯರು, ದಿನಗೂಲಿ ಕಾರ್ಮಿಕರು, ಕುಶಲಕರ್ಮಿಗಳು, ಚಾಲಕರು, ಎಲೆಕ್ಟ್ರಿಷಿಯನ್‌ಗಳು ಮತ್ತು ಮೇಸ್ತ್ರಿಗಳು ತೊಂದರೆಗೀಡಾಗಿದ್ದಾರೆ ಎಂಬುದು ಪ್ರಧಾನಿಗೆ ತಿಳಿದಿದೆ. ಬಿಜೆಪಿಯವರು ‘ನೋಟು ಬಂದಿ ದಿವಸ್’ ಅನ್ನು ಏಕೆ ಆಚರಿಸುವುದಿಲ್ಲ?, ”ಎಂದು ಹೈದರಾಬಾದ್ ಸಂಸದ ಪ್ರಶ್ನಿಸಿದರು.

1,000 ಮತ್ತು 500 ರೂ ನೋಟುಗಳನ್ನು ರದ್ದುಗೊಳಿಸುವ ಸರಕಾರದ ನಿರ್ಧಾರ ಪ್ರಕ್ರಿಯೆಯು ದೋಷಪೂರಿತವಾಗಿಲ್ಲ ಎಂದು ಇಂದು ಸುಪ್ರೀಂ ಕೋರ್ಟ್ 4:1 ರ ತೀರ್ಪಿನಲ್ಲಿ ಎತ್ತಿಹಿಡಿದ ನಂತರ ಈ ಅತ್ಯಂತ ವಿಮರ್ಶಾತ್ಮಕ ಟೀಕೆಗಳು ಬಂದಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next