Advertisement

ಕಾಂಗ್ರೆಸ್ ಟ್ವೀಟ್ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ವಿಚಲಿತಗೊಳಿಸಿದ್ದೇಕೆ ?

03:59 PM Aug 10, 2022 | Team Udayavani |

ಬೆಂಗಳೂರು : ಅಮಿತ್ ಶಾ ಬಂದು ಹೋದ ನಂತರ ಬಿಜೆಪಿಯಲ್ಲಿ ಮೋಡ ಕವಿದ ವಾತಾವರಣವಿದೆ.40% ಸರ್ಕಾರದಲ್ಲಿ ‘3ನೇ ಸಿಎಂ’ ಸೀಟು ಹತ್ತುವ ಸನ್ನಿಹಿತವಾಗಿದೆ ಎಂದು ಕಾಂಗ್ರೆಸ್ ಮಾಡಿರುವ ಟ್ವೀಟ್ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ತೀವ್ರ ವಿಚಲಿತಗೊಳಿಸಿದೆ.

Advertisement

ಕಾಂಗ್ರೆಸ್ ಮಾಡಿರುವ ಈ‌ ಮೂರು ಟ್ವೀಟ್ ಗೆ ಬೊಮ್ಮಾಯಿ ಅವರು ಈ ಮಟ್ಟದಲ್ಲಿ‌ ಕಳವಳಗೊಳ್ಳುವ ಅಗತ್ಯವಿತ್ತೇ ? ಅಷ್ಟಕ್ಕೂ ಅವರು ಆತಂಕಗೊಳ್ಳುವಂಥ ವಿದ್ಯಮಾನಗಳು ಬಿಜೆಪಿಯಲ್ಲಿ ನಡೆಯುತ್ತಿವೆಯೇ ? ಎಂಬ ಪ್ರಶ್ನೆಗಳಿಗೆ ಉತ್ತರ ಕೆದಕುವುದಕ್ಕೆ ಅವರೇ ಈಗ ದಾರಿ ಮಾಡಿಕೊಟ್ಟಂತಾಗಿದೆ.

ಕಾಂಗ್ರೆಸ್  ಮಾಡಿದ ಟ್ವೀಟ್  ಎಲ್ಲ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಬೇಸರಗೊಂಡ ಅವರು ತಮ್ಮ ಆಪ್ತ ಸಚಿವರೆಲ್ಲರಿಗೂ ದೂರವಾಣಿ‌ ಕರೆ ಮಾಡಿ ಕಾಂಗ್ರೆಸ್ ಆರೋಪಕ್ಕೆ ಕೌಂಟರ್ ಮಾಡುವಂತೆ ಸೂಚಿಸಿದ್ದಾರೆಂಬುದು ಮೂಲಗಳು ಹೇಳುತ್ತಿವೆ.

ಹೀಗಾಗಿ ಸಚಿವರಾದ ಆರ್.ಅಶೋಕ, ಸಿ.ಸಿ.ಪಾಟೀಲ್, ಡಾ.ಸುಧಾಕರ್, ಸುನೀಲ್ ಕುಮಾರ್, ಬೈರತಿ ಬಸವರಾಜ್ ಸೇರಿದಂತೆ ಒಬ್ಬರಾದ ಮೇಲೆ ಒಬ್ಬರು ಕಾಂಗ್ರೆಸ್ ವಿರುದ್ಧ ತಿರುಗಿ ಬಿದ್ದರು. ಸಾಲದಕ್ಕೆ ಅವಧಿ ಪೂರೈಕೆ ಹೊಸ್ತಿಲಲ್ಲಿ ಇರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕೂಡಾ ಬೊಮ್ಮಾಯಿ ಪರ‌ ಬ್ಯಾಟ್ ಬೀಸಿದರು. ಇಷ್ಟಾದ ಮೇಲೂ‌ ಬೊಮ್ಮಾಯಿ ನಾಯಕತ್ವ ಅಭಾದಿತವೇ ? ಎಂಬ ಪ್ರಶ್ನೆ ಇನ್ನೂ ನಿಗೂಢವಾಗಿಯೇ ಉಳಿದಿದೆ.

ಕಾಂಗ್ರೆಸ್ ಆರೋಪ ಏನು ? :

Advertisement

ಬೊಮ್ಮಾಯಿ ಅವರ ಗೊಂಬೆಯಾಟ ಮುಗಿಯುವ ಹಂತಕ್ಕೆ ಬಂದಿದೆ.ಅಮಿತ್ ಶಾ ಅವರ ಭೇಟಿಯ ಬಗ್ಗೆ ಸರ್ಕಾರದ ಯಾವೊಬ್ಬ ಸಚಿವರು ಮಾತಾಡುತ್ತಿಲ್ಲ. ಯಾರಲ್ಲೂ ಸಂಭ್ರಮ ಇಲ್ಲದಿರುವುದೇ ಇದಕ್ಕೆ ನಿದರ್ಶನ ಎಂದು ಟ್ವೀಟ್ ಮೂಲಕ‌ ಸಿಎಂ ಬಗ್ಗೆ ಕಾಂಗ್ರೆಸ್ ವ್ಯಂಗ್ಯವಾಡಿತ್ತು.

ಬಿಜೆಪಿಯಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆ ಇದೆ, ಸಂಘಟನಾತ್ಮಕವಾಗಿ ಬದಲಾವಣೆಯಾಗುತ್ತದೆ ಎಂಬ ಬಿಸಿ ಬಿಸಿ ಚರ್ಚೆ ಮಧ್ಯೆಯೇ ಕಾಂಗ್ರೆಸ್ ಈ ರೀತಿಯ ವ್ಯಂಗ್ಯಬರಿತ ಟ್ವೀಟ್ ಮಾಡಿ, ಬೊಮ್ಮಾಯಿ ಅವರನ್ನು “ಕೈಗೊಂಬೆ ಸಿಎಂ” ಎಂದು ಟೀಕಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next