Advertisement

ಸಿಬಿಐ, ಇಡಿ ನಿರ್ದೇಶಕರ ಅಧಿಕಾರಾವಧಿ ಹೆಚ್ಚಳಕ್ಕೆ ಕಾರಣ?: ಮಾಹಿತಿಗೆ ನಕಾರ

08:10 PM Dec 28, 2021 | Team Udayavani |

ನವದೆಹಲಿ: ಕೇಂದ್ರ ಸರ್ಕಾರ ಹೊರಡಿಸಿರುವ ಎರಡು ಮಹತ್ವದ ಸುಗ್ರೀವಾಜ್ಞೆಗಳ ಹಿಂದಿನ ಕಾರಣವನ್ನು ತಿಳಿಸಲು ರಾಷ್ಟ್ರಪತಿಯವರ ಕಾರ್ಯದರ್ಶಿ ಉಷಾ ಶಶಿಧರನ್‌ ನಿರಾಕರಿಸಿದ್ದಾರೆ.

Advertisement

ಕೇಂದ್ರ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ (ಇಡಿ) ನಿರ್ದೇಶಕರ ಅಧಿಕಾರಾವಧಿ ತಲಾ ಮೂರು ವರ್ಷಗಳ ಕಾಲ ಹೆಚ್ಚಾಗಿದೆ. ಇದರ ಕಾರಣವನ್ನು ಬಹಿರಂಗಪಡಿಸುವಂತಿಲ್ಲ ಎಂದು ಸಂಪುಟಸಭೆಯಲ್ಲೇ ನಿರ್ಧರಿಸಲಾಗಿದೆ ಎಂದು ರಾಷ್ಟ್ರಪತಿಯವರ ಕಾರ್ಯದರ್ಶಿ ತಿಳಿಸಿದ್ದಾರೆ.

ಇದನ್ನೂ ಓದಿ:ಚೀನಾದಲ್ಲೂ ಕೋವಿಡ್‌ ಬಿಗಿ ಕ್ರಮ: ತತ್ತರಿಸಿದ ನಾಗರಿಕರು, ಆಕ್ರೋಶ

ನ.14ರಂದು ಕೇಂದ್ರ ಸರ್ಕಾರ, ಕೇಂದ್ರ ವಿಚಕ್ಷಣಾ ಆಯೋಗ (ತಿದ್ದುಪಡಿ), ದೆಹಲಿ ವಿಶೇಷ ಪೊಲೀಸ್‌ ವ್ಯವಸ್ಥೆ (ತಿದ್ದುಪಡಿ) ಎಂಬ ಎರಡು ಸುಗ್ರೀವಾಜ್ಞೆಗಳನ್ನು ಹೊರಡಿಸಿತ್ತು. ಇದು ಜಾರಿ ನಿರ್ದೇಶನಾಲಯದ ನಿರ್ದೇಶಕ ಸಂಜಯ್‌ ಮಿಶ್ರಾರನ್ನು ಅದೇ ಸ್ಥಾನದಲ್ಲಿ ಉಳಿಸಲು ಕೇಂದ್ರ ಮಾಡಿದ ತಂತ್ರ ಎಂದು ವಿರೋಧಪಕ್ಷಗಳು ಆರೋಪಿಸಿದ್ದವು. ಈ ಕುರಿತು ಸ್ಪಷ್ಟ ಮಾಹಿತಿ ಕೇಳಿ ಅಂಜಲಿ ಭಾರದ್ವಾಜ್‌ ಎನ್ನುವವರು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next