Advertisement
ಅವಳು ಫೇಸ್‌ಬುಕ್ಕಲ್ಲಿ ಯಾರ ಫೋಟೋಗಳಿಗೆ ಲೈಕ್ ಒತ್ತುತ್ತಾಳೆ? ಯಾವುದಕ್ಕೆ ಕಮೆಂಟ್ ಹಾಕ್ತಾಳೆ? ಏನಂತ ಕಮೆಂಟ್ ಹಾಕ್ತಾಳೆ? ಯಾರ ಕಮೆಂಟ್‌ಗಳಿಗೆ ರಿಪ್ಲೆ„ ಮಾಡ್ತಾಳೆ? ಯಾರು ಫೇಸ್‌ಬುಕ್ಕಲ್ಲಿ ಲೈವ್ ಆಗಿದ್ದಾಗ ಅವಳೂ ಲಾಗಿನ್ ಆಗ್ತಾಳೆ? ಯಾರಿಗೆ ಮೆಸೇಜ್ ಮಾಡ್ತಾಳೆ? ಇವೆಲ್ಲಾ ಕೆಲಸಗಳನ್ನು ಮಾಡೋ ಸಾವಿರಾರು ಜನ ನಮ್ಮ ನಡುವಿದ್ದಾರೆ. ಇಂಥವರು “ನೀವು ಅವರಿಗೆ ಮೆಸೇಜ್ ಮಾಡ್ತೀರಾ, ನಂಗ್ಯಾಕೆ ಮಾಡೋದಿಲ್ಲ??!’, “ಇವರಿಗೆ ಮಾಡ್ತೀರಂತೆ?’, “ನಾನು ನಿಮ್ಗೆ ಲೈಕ್ ಅಗೋದಿಲ್ವಾ?’ ಅಂತೆಲ್ಲಾ ಏನೇನೋ ತೀರಾ ರೇಜಿಗೆ ಹುಟ್ಟಿಸುವಷ್ಟು, ಅಸಹ್ಯ ಅನ್ನಿಸುವಷ್ಟು ಥರಾವರಿ ಪ್ರಶ್ನೆಗಳನ್ನು ಕೇಳ್ತಾರೆ. ಅಂಥವರನ್ನೆಲ್ಲಾ ಒಂದೋ, ಎರಡೋ ಸಾರಿ ಬ್ಲಾಕ್ ಮಾಡಿದ್ರೂ ಪದೇಪದೆ ಬೇರೆ ಬೇರೆ ಅಕೌಂಟಲ್ಲಿ, ಗೊತ್ತೇ ಆಗದಂತೆ ನಮ್ಮ ಪ್ರೊಫೈಲ್‌ಗೆ ಇಣುಕಿ ಬಿಟ್ಟಿರುತ್ತಾರೆ. ಜೀವ ಹಿಂಡುತ್ತಿರುತ್ತಾರೆ.
Related Articles
Advertisement
ನಿಜಕ್ಕೂ ಕೆಲವು ಗಂಡಸರಿಗೆ ಬೇಕಾಗಿರೋದು ಏನು? ಮನಸ್ಸು ಅನ್ನೋದು ಅವರಿಗೆ ಇರೋದೇ ಇಲ್ವಾ? ಅಷ್ಟಕ್ಕೂ ಇಂಥವರಿಗೆಲ್ಲಾ ಮನೇಲಿ ಅಕ್ಕ ತಂಗಿ ಇರೋದಿಲ್ವಾ? ಹೋಗಲಿ ಗೆಳತಿನೂ ಇರೋದಿಲ್ವಾ? ಅವರ ತಂಗಿಗೋ, ಅಕ್ಕಂಗೋ, ಗೆಳತಿಗೋ ಈ ರೀತಿಯ ಕೆಟ್ಟ ಅನುಭವಗಲಾಗಿದ್ರೆ ಸುಮ್ನೆ ಇರ್ತಾ ಇದ್ರಾ? ಏನೇನೋ ಮಾಡೋವಾಗ ಅವರುಗಳ ಮನಸ್ಸಲ್ಲಿ ಪ್ರಶ್ನೆ ಬರೋದೇ ಇಲ್ವಾ? ನೀನೇ ಹೇಳು, ನಮೂY ಅವರಂತೆಯೇ ಮನಸ್ಸಿದೆ ಅಂತ ಅವರಿಗೆಲ್ಲಾ ಯಾಕೆ ಅರ್ಥವಾಗೋದಿಲ್ವೋ? ನಮ್ಗೆ ಭಾವನೆಗಳೇ ಇಲ್ವೇನೋ?
ನಮ್ಮ ಈ ಎಲ್ಲಾ ಸಂಕಟಗಳು ನಿನ್ನ ಗಣಿತದ ಯಾವ ಪ್ರಾಬ್ಲಿಮ್‌ಗಳಲ್ಲಿ, ಕೆಮಿಸ್ಟ್ರಿಯ ಯಾವ ರಿಯಾಕ್ಷನ್‌ಗಳಲ್ಲಿ, ಪಿಸಿಕ್ಸಿನ ಯಾವ ಈಕ್ವೇಷನ್‌ಗಳಲ್ಲಿ, ಬಯಾಲಜಿಯ ಯಾವ ಅಂಗಾಂಶಗಳಲ್ಲಿದೆ? ಸುಮ್ಮನೆ ಅದುಮಿಟ್ಟುಕೊಂಡು ಸಹಿಸಿಕೊಳ್ಳಬೇಕಾದ ಇವುಗಳಿಗೆಲ್ಲಾ ಯಾವ ಪ್ರೊಫೆಸರನ ಡಾಕ್ಟರೇಟ್ ಉತ್ತರ ಕೊಡಬಲ್ಲದು? ಇದನ್ನೆಲ್ಲಾ ಹಿಂಸೆಯ ಯಾವ ವರ್ಗಕ್ಕೆ ಸೇರಿಸೋಣ? ಎಂದು ಹಸಿಹಸಿ ಸತ್ಯಗಳನ್ನು ಪುಟ್ಟಿ ಅಕ್ಕ ಬಿಚ್ಚಿಡುತ್ತಿದ್ದರೆ ಅವಳ ಮಾತುಗಳಿಗೆ ಉತ್ತರಿಸಲು ನನ್ನಲ್ಲಿ ಪದಗಳೇ ಇರಲಿಲ್ಲ.– – –
ಗೆಳೆಯರೇ, ಇದನ್ನು ಗಮನಿಸಿ…
– ಹುಡುಗಿ ಸಲುಗೆ ಕೊಡ್ತಾಳೆ ನಿಜ. ಆದರೆ, ಅದು ಸ್ವೇಚ್ಛಾಚಾರವಲ್ಲ.
– ಆಕೆಗೆ ಸಾಧನೆಯ ಶಿಖರ ಏರೋದು ಗೊತ್ತು. ಅದಕ್ಕೆ ಆಕೆಯ ಶ್ರಮದ ಮೆಟ್ಟಿಲು ಸಾಕು. ನಮ್ಮ ಅನುಕಂಪದ ಏಣಿ ಬೇಡ.
– ಹೆಣ್ಣನ್ನು ಟೀಕಿಸುವ ಮುನ್ನ, ನಮ್ಮ ಅಕ್ಕ, ತಂಗಿ, ಗೆಳತಿಯರನ್ನು ಕಣ್ಮುಂದೆ ತಂದುಕೊಳ್ಳೋಣ.
– ಹೆಣ್ಣನ್ನು ಅವಳು ಹಾಗೆ, ಹೀಗೆ ಅಂತ ಸಾರ್ವಜನಿಕವಾಗಿ ಅಂದಾಜಿಸುವ ಪ್ರವೃತ್ತಿ ಬೇಡ.
– ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯವಾಗಿ ಹುಡುಗಿಯರ ಪ್ರೊಫೈಲ್ ಇಣುಕುವುದು, ಅವರ ಬಗ್ಗೆ ಇನ್ನಿಲ್ಲದಂತೆ ತಲೆಕೆಡಿಸಿಕೊಳ್ಳೋದು ಸಭ್ಯ ಲಕ್ಷಣವಲ್ಲ. – ನಾಗರಾಜ ಕೂವೆ