Advertisement

ಜಿಲ್ಲೆಯಲ್ಲಿ ಶೇ.22.10 ಮಂದಿ ಮತದಾನದಿಂದ ದೂರ ಉಳಿದಿದ್ದೇಕೆ ?

11:19 PM Apr 19, 2019 | Team Udayavani |

ಮಹಾನಗರ: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಗುರುವಾರ ನಡೆದ ಮತದಾನದ ಪ್ರಮಾಣವು ಇಲ್ಲಿವರೆಗೆ ಆಗಿರುವ ದಾಖಲೆ ಮತದಾನವಾಗಿದ್ದು, ಆ ಮೂಲಕ ಜಿಲ್ಲೆಯ ಮತದಾರರು ಮತ್ತೂಮ್ಮೆ ರಾಜ್ಯ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Advertisement

ಆದರೆ, ಬುದ್ಧಿವಂತರ ಜಿಲ್ಲೆ ಎಂದು ಕರೆಸಿಕೊಂಡಿರುವ ದ.ಕ. ಜಿಲ್ಲೆಯಲ್ಲಿಯೂ ಮಂಗಳೂರು ಸಹಿತ ನಗರ ಪ್ರದೇಶ ವ್ಯಾಪ್ತಿಯಲ್ಲಿ ಶೇ.30ರಷ್ಟು ಮಂದಿ ಮತದಾನವನ್ನು ಮಾಡಿಲ್ಲ. ಆ ಮೂಲಕ, ಜಿಲ್ಲೆಯಲ್ಲಿ ಒಟ್ಟಾರೆ ಶೇ.22ರಷ್ಟು ಮಂದಿ ಮತದಾನವನ್ನು ಮಾಡದೆ ದೂರ ಉಳಿದಿರುವುದು ಗಮನಾರ್ಹ ಸಂಗತಿ.

ಏಕೆಂದರೆ, ಕಳೆದ ಲೋಕಸಭೆ ಅಂದರೆ, 2014ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಶೇ.77.19 ಮತದಾನವಾಗಿದ್ದು, ಅದು ರಾಜ್ಯದಲ್ಲೇ ಅತಿ ಹೆಚ್ಚು ಮತದಾನವಾದ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

ಆದರೆ, ಈ ಹಿಂದಿನ ಮತದಾನದ ಪ್ರಮಾಣಕ್ಕೆ ಹೋಲಿಸಿದರೆ, ಈ ಬಾರಿ ಜಾಸ್ತಿಯಾಗಿರುವುದು. 71 ಶೇಕಡಾವಾರು ಮಾತ್ರ ಜಾಸ್ತಿ ಮಾಡುವುದಕ್ಕೆ ಜಿಲ್ಲಾಡಳಿತಕ್ಕೆ, ಮತದಾನ ಜಾಗೃತಿ ಮೂಡಿಸುವ ಸ್ವೀಪ್‌ ಸಮಿತಿಗೆ ಸಾಧ್ಯವಾಗಿದೆ. ಅಂದರೆ, ಸಾಕಷ್ಟು ಮತದಾರರ ಜಾಗೃತಿ, ಸಾಮಾಜಿಕ ಜಾಲತಾಣಗಳಲ್ಲಿನ ಸಕ್ರಿಯತೆ ನಡುವೆಯೂ ಈ ಬಾರಿ ಮತ್ತಷ್ಟು ಮತದಾರರನ್ನು ಮತಗಟ್ಟೆಗೆ ಕರೆ ತರುವುದಕ್ಕೆ ಸಾಧ್ಯವಾಗದಿರುವುದಕ್ಕೂ ನಾನಾ ಕಾರಣಗಳಿವೆ.

ಅವರೆಲ್ಲ, ಮತದಾನ ಮಾಡುವುದಕ್ಕೆ ಇಷ್ಟವಿಲ್ಲದೆ ಮನೆಯಲ್ಲಿಯೇ ಕಾಲ ಕಳೆದವರು ಅಲ್ಲ; ಹೆಚ್ಚಿನವರು ತುರ್ತು ಕಾರಣಗಳಿಗೆ ಅನಿವಾರ್ಯವಾಗಿ ಮತದಾನ ಮಾಡುವುದರಿಂದ ವಂಚಿತರಾದವರೇ ಈ ಶೇ.22ರಷ್ಟು ಮಂದಿಯಲ್ಲಿ ಹೆಚ್ಚಿನವರು. ಇನ್ನುಳಿದವರು, ವಿದೇಶಗಳಲ್ಲಿ ನೆಲೆಸಿರುವುದು, ಮೃತ ಪಟ್ಟಿದ್ದರು ಕೂಡ ಮತದಾರರ ಪಟ್ಟಿಯಿಂದ ಅಂಥವರ ಹೆಸರು ಕೈಬಿಡದಿರುವುದು ಕೂಡ ಶೇಕಡಾವಾರು ಮತದಾನ ಪ್ರಮಾಣ ಏರುಪೇರಿಗೆ ಕಾರಣ.

Advertisement

ಗುರಿ ಸಾಧನೆಯಾಗದಿರಲು ಕಾರಣ
ಮತದಾನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ವೀಪ್‌ ಹಲವು ಕಾರ್ಯಕ್ರಮಗಳನ್ನು ಆಯೋಜಿ ಸಿದರೂ ಶೇ. 90ರ ಗುರಿ ಸಾಧನೆ ಸಾಧ್ಯವಾಗಿಲ್ಲ. ಗ್ರಾಮೀಣ ಭಾಗಗಳಿಗೆ ಹೋಲಿಸಿದರೆ, ನಗರ ಪ್ರದೇಶದಲ್ಲಿ ಮತದಾನದ ಪ್ರಮಾಣ ಕಡಿಮೆ ಇದೆ. ಮಂಗಳೂರು, ಮಂಗಳೂರು ನಗರ ಉತ್ತರ, ಮಂಗಳೂರು ನಗರ ದಕ್ಷಿಣದಲ್ಲಿ ಕ್ರಮವಾಗಿ ಶೇ.75.49, ಶೇ.75.31, ಶೇ.70.21 ಮತದಾನವಾಗಿದ್ದು, ಗ್ರಾಮೀಣ ಭಾಗಗಳಿಗಿಂತ ಇದು ಕಡಿಮೆಯೇ.

ವಾಹನ ಚಾಲಕರ ಪ್ರಯಾಣ
ಟೂರಿಸ್ಟ್‌ ವಾಹನ, ಲಾರಿ ಅಥವಾ ಇನ್ಯಾ ವುದೋ ವಾಹನದ ಚಾಲಕರು ತಮ್ಮ ಊರಿನಿಂದ ಕಾರ್ಯ ನಿಮಿತ್ತ ಬೇರೆ ಊರುಗಳಿಗೆ ತೆರಳಿರುವ ಕಾರಣದಿಂದ ಮತದಾನ ಮಾಡಲು ಸಾಧ್ಯವಾಗದೆ ಇರುವುದು.

ರಜಾ ಮಾಜಾ, ಖಾಸಗಿ ಕಾರ್ಯಕ್ರಮ
ಇನ್ನೂ ಕೆಲವು ಮಂದಿ ರಜಾ ಹಿನ್ನೆಲೆಯಲ್ಲಿ ಪ್ರವಾಸ ಅಥವಾ ಇನ್ಯಾವುದೋ ಕಾರಣಕ್ಕೆ ಬೇರೆ ಕಡೆಗೆ ತೆರಳಿರಬಹುದು. ಅಲ್ಲದೆ ಮುಂಬಯಿ ಸಹಿತ ಇತರ ಭಾಗಗಳಲ್ಲಿ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಅನಿವಾರ್ಯವಾದ್ದರಿಂದ.

ಕೆಲವೆಡೆ ಮೃತಪಟ್ಟವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆಯದೇ ಇರುವು ದರಿಂದ ಮತದಾರರ ಪ್ರಮಾಣ ಅಂಕಿಅಂಶಗಳಲ್ಲಿ ಏರುಪೇರಾಗುವ ಸಾಧ್ಯತೆ ಇದೆ.ಮತದಾನ ಪ್ರತಿಯೊಬ್ಬರ ಹಕ್ಕು ಚಲಾಯಿಸಿ ವಿಧಾನಸಭೆ, ಲೋಕಸಭೆ, ಸ್ಥಳೀಯ ಚುನಾ ವಣೆಗಳಲ್ಲಿ ಭಾಗವಹಿಸುವುದು ಪ್ರತಿಯೊಬ್ಬರ ಕರ್ತವ್ಯ. ನಾವು ಮತದಾನ ಮಾಡುವುದರಿಂದ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಬಹುದು. ಅದರಿಂದ ಉತ್ತಮ ದೇಶ ಕಟ್ಟಲು ಸಾಧ್ಯ.

ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳು
ಅಚ್ಚರಿ ಅಂದರೆ ಈ ಬಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ದಾಖಲಾಗಿದ್ದ ಕೆಲವು ರೋಗಿಗಳು ತಮ್ಮ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಿ ಮಾದರಿಯಾಗಿದ್ದಾರೆ. ಆದರೆ, ಇನ್ನೂ ತೀರ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳು ಮತದಾನ ಮಾಡಲು ಸಾಧ್ಯವಾಗದೆ ಇರುವುದು.

ವಿದೇಶಕ್ಕೆ ತೆರಳಿರುವುದು
ಮತದಾನ ಮಾಡಲೇಂದೆ ಜಗತ್ತಿನ ವಿವಿಧ ಮೂಲೆಗಳಿಂದ ನೂರಾರು ಮಂದಿ ಜಿಲ್ಲೆಗೆ ಆಗಮಿಸಿದ್ದು, ಮತದಾನ ಮಾಡುವುದು ಜವಾಬ್ದಾರಿ ಎಂಬುದು ಎಲ್ಲರಿಗೂ ಅರಿವಾಗಿದೆ. ಆದರೆ ಕೆಲವು ಮಂದಿ ರಜೆ, ಟಿಕೆಟ್‌ ಸಮಸ್ಯೆ ಯಿಂದಾಗಿ ಬಾರದ ಕಾರಣ ಮತದಾನದ ಪ್ರಮಾಣ ಕಡಿಮೆಯಾಗಿರುವ ಸಾಧ್ಯತೆ ಇದೆ. ಹೊರ ದೇಶಗಳಿಗೆ ಹೋದಾಗ ಅಲ್ಲಿನ ನಿಮಯಗಳನ್ನು ಪಾಲಿ ಸುವುದು ಕಡ್ಡಾಯವಾಗಿರುವುದರಿಂದ ಸಮಸ್ಯೆ ಯಾಗಿ ಬಾರಲು ಸಾಧ್ಯವಾಗದೆ ಇರುವವರು ಇರಬಹುದು.

 -  ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next