ಎಲ್ಲರೂ ನಿಮ್ಮ ಬೆನ್ನ ಹಿಂದೆ ಬೀಳ್ಳೋದು ಗ್ಯಾರೆಂಟಿ. ಅಂತಹ ಒಂದು ಮ್ಯಾಜಿಕನ್ನ ಈವಾರ ಹೇಳಿ ಕೊಡ್ತೀನಿ. ಒಂದು ಟ್ರೇನಲ್ಲಿ ಆರು ಕವರುಗಳನ್ನು ಇಟ್ಟಿದೆ (ಮೇಲಿನ ಚಿತ್ರ ನೋಡಿ). ಜಾದೂಗಾರ ಐದು ಜನ ಪ್ರೇಕ್ಷಕರನ್ನು ಕರೆದು, ಈ ಆರು ಕವರುಗಳ ಪೈಕಿ ಒಂದರಲ್ಲಿ ನೋಟನ್ನು ಇಟ್ಟಿದೆ. ಯಾರಿಗೆ ಅದೃಷ್ಟ
ಇದೆಯೋ ಅವರಿಗೆ ನೋಟು ಸಿಗುತ್ತದೆ ಎಂದು ಹೇಳಿ ತಮಗಿಷ್ಟವಾದ ಒಂದೊಂದು ಕವರನ್ನು ತೆಗೆದುಕೊಳ್ಳಲು ಹೇಳುತ್ತಾನೆ. ಉಳಿದ ಕವರನ್ನು ತಾನು ತೆಗೆದುಕೊಳ್ಳುತ್ತಾನೆ. ಪ್ರೇಕ್ಷಕರು ಕವರನ್ನು ತೆಗೆದು ನೋಡಿದಾಗ ಅದರಲ್ಲಿ ಖಾಲಿ ಕಾಗದ ಇರುತ್ತದೆ. ಆದರೆ, ಜಾದೂಗಾರನ ಕವರಲ್ಲಿ ಗರಿಗರಿಯಾದ ಎರಡು ಸಾವಿರದ ನೋಟು ಇರುತ್ತದೆ!
Advertisement
ಇದನ್ನು ಹೇಗೆ ಮಾಡೋದು ಅಂದ್ರೆ ನಿಮ್ಮ ಎಡಗೈಯ ಬೆರಳುಗಳ ಸಹಾಯದಿಂದ ಟ್ರೇಯ ಕೆಳಭಾಗದಲ್ಲಿ ನೋಟನ್ನು ಅಡಗಿಸಿ ಇಟ್ಟುಕೊಳ್ಳಿ. ಇಲ್ಲಿರುವ ಚಿತ್ರವನ್ನು ಗಮನಿಸಿದಲ್ಲಿ ಇದು ನಿಮಗೆ ಅರ್ಥವಾಗುತ್ತದೆ. ಎಲ್ಲರೂ ಕವರುಗಳನ್ನು ತೆಗೆದುಕೊಂಡ ಬಳಿಕ ಉಳಿದ ಕವರನ್ನು ತೆಗೆಯುವಾಗ ಬಲಗೈಯನ್ನುಉಪಯೋಗಿಸಿ ಅದರ ಹೆಬ್ಬೆರಳು ಕವರಿನ ಮೇಲೆ ಇರುವಂತೆಯೂ ಉಳಿದ ಬೆರಳುಗಳು ಟ್ರೇಯ ಕೆಳಭಾಗದಲ್ಲಿ ಇರುವಂತೆಯೂ ಹಿಡಿದು ಕವರು ಮತ್ತು ನೋಟನ್ನು ಒಟ್ಟಿಗೆ ಟ್ರೇಯಿಂದ ಹೊರಗೆ ಜಾರಿಸಿ ತೆಗೆಯಿರಿ. ಇದನ್ನು ಮಾಡುವಾಗ ಟ್ರೇಯನ್ನು ಪ್ರೇಕ್ಷಕರ ಕಡೆ ಸ್ವಲ್ಪ ಬಾಗಿಸಿ ಹಿಡಿಯಿರಿ. ನೋಟು ಕವರಿನ ಹಿಂದೆ ಇದ್ದು ಪ್ರೇಕ್ಷಕರಿಗೆ ಕಾಣದಂತೆ ಎಚ್ಚರ ವಹಿಸಿ. ಈಗ ಕವರನ್ನು ನಿಮ್ಮ ಎಡಗೈಗೆ ವರ್ಗಾಯಿಸಿ.
ಬಲಗೈಯಿಂದ ಕವರಿನ ಬಾಯಿಯನ್ನು ತೆರೆದು ತೋರು ಬೆರಳು ಮತ್ತು ನಡುಬೆರಳನ್ನು ಕವರಿನಲ್ಲಿ ಹಾಕಿ.
ಕವರಿನಲ್ಲಿ ಹಾಕಿದ ಬೆರೆಳುಗಳನ್ನು ತೆಗೆಯುವಾಗ ಹಿಂಬದಿಯ ನೋಟನ್ನೂ ಎಳೆಯಿರಿ. ಆಗ ನೋಟು
ಕವರಿನಿಂದ ಹೊರಬಂದಂತೆ ಕಾಣಿಸುತ್ತದೆ.