Advertisement

ಜೂನ್‌ನಲ್ಲಿ ಹಣದುಬ್ಬರ ಪ್ರಮಾಣ ಇಳಿಕೆ

08:16 PM Jul 14, 2022 | Team Udayavani |

ನವದೆಹಲಿ: ಸಗಟು ಮಾರುಕಟ್ಟೆ ಆಧಾರಿತ ಹಣದುಬ್ಬರ ಪ್ರಮಾಣ ಜೂನ್‌ನಲ್ಲಿ ಶೇ.15.18ಕ್ಕೆ ಇಳಿಕೆಯಾಗಿದೆ. ಮೂರು ತಿಂಗಳಿಗೆ ಹೋಲಿಕೆ ಮಾಡಿದರೆ ಇದು ಗರಿಷ್ಠ ಇಳಿಕೆಯಾಗಿದೆ.

Advertisement

ಖನಿಜ ವಸ್ತುಗಳ ಬೆಲೆಗಳಲ್ಲಿ ಇಳಿಕೆಯಾಗಿರುವುದರಿಂದ ಈ ಬೆಳವಣಿಗೆಯಾಗಿದೆ. ಆದರೆ, ಆಹಾರ ವಸ್ತುಗಳ ಬೆಲೆಗಳು ತಗ್ಗಿಲ್ಲ. ಕಳೆದ ತಿಂಗಳು ಕೂಡ ಸತತ 15ನೇ ಬಾರಿಗೆ ಸಗಟು ಮಾರಾಟ ದರ ಆಧಾರಿತ ಎರಡಂಕಿಗಳಲ್ಲಿಯೇ ಮುಂದುವರಿದಿತ್ತು.

2021ರ ಜೂನ್‌ನಲ್ಲಿ ಶೇ.12.07 ಹಣದುಬ್ಬರ ದರವಿತ್ತು.  ತೈಲ, ಇಂಧನ ಕ್ಷೇತ್ರದಲ್ಲಿ ಶೇ.40.38 ಹಣದುಬ್ಬರ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next