Advertisement

inflation ಮೈನಸ್‌ನಲ್ಲೇ ಉಳಿದ ಸಗಟು ಹಣದುಬ್ಬರ

12:08 AM Aug 15, 2023 | |

ಹೊಸದಿಲ್ಲಿ: ಸತತ 4ನೇ ತಿಂಗಳು ಕೂಡ ಸಗಟು ದರ ಸೂಚ್ಯಂಕ ಹಣದುಬ್ಬರ ಮೈನಸ್‌ನಲ್ಲೇ ಮುಂದುವರಿದಿದ್ದು, ಜುಲೈ ತಿಂಗಳಲ್ಲಿ ಇದು ಶೇ.-1.36 ಆಗಿತ್ತು ಎಂದು ಸರಕಾರದ ಅಂಕಿಅಂಶ ಹೇಳಿದೆ.

Advertisement

ಜೂನ್‌ ತಿಂಗಳಲ್ಲಿ ಇದು ಶೇ.-4.12 ಆಗಿತ್ತು. ಕಳೆದ ವರ್ಷದ ಜುಲೈಯಲ್ಲಿ ಇದು ಶೇ.14.07 ಆಗಿತ್ತು. ಈ ನಡುವೆ ಭಾರತದ ರಫ್ತು ಪ್ರಮಾಣ ಜುಲೈಯಲ್ಲಿ ಶೇ.15.88ರಷ್ಟು ಕುಸಿತಗೊಂಡಿದ್ದು, 32.25 ಶತಕೋಟಿ ಡಾಲರ್‌ಗೆ ತಲುಪಿದೆ. ಜಾಗತಿಕವಾಗಿ ಬೇಡಿಕೆ ತಗ್ಗಿರುವುದು, ಪೆಟ್ರೋಲಿಯಂ, ಆಭರಣಗಳ ಶಿಪ್‌ಮೆಂಟ್‌ ಕಡಿಮೆಯಾಗಿರುವುದು ಇದಕ್ಕೆ ಕಾರಣ. ಇದೇ ವೇಳೆ ಆಮದು ಪ್ರಮಾಣವೂ ಶೇ.17ರಷ್ಟು ಇಳಿಕೆಯಾಗಿ 52.92 ಶತಕೋಟಿ ಡಾಲರ್‌ಗೆ ತಲುಪಿದೆ.

Advertisement

Udayavani is now on Telegram. Click here to join our channel and stay updated with the latest news.

Next