Advertisement

Inflation: 4 ತಿಂಗಳ ಕನಿಷ್ಠಕ್ಕೆ ಸಗಟು ಹಣದುಬ್ಬರ: ಆಗಸ್ಟ್‌ನಲ್ಲಿ ಶೇ.1.31

09:27 PM Sep 17, 2024 | Team Udayavani |

ನವದೆಹಲಿ: ಸಗಟು ದರ ಸೂಚ್ಯಂಕ ಹಣದುಬ್ಬರ ಪ್ರಮಾಣ ಆಗಸ್ಟ್‌ನಲ್ಲಿ ಕನಿಷ್ಠ 4 ತಿಂಗಳ ಕನಿಷ್ಠಕ್ಕೆ ಕುಸಿದಿದೆ.

Advertisement

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ದತ್ತಾಂಶಗಳ ಪ್ರಕಾರ ತರಕಾರಿ ಮತ್ತು ತೈಲ ಬೆಲೆ ಇಳಿಕೆ ಹಿನ್ನೆಲೆಯಲ್ಲಿ ಹಣದುಬ್ಬರ ಪ್ರಮಾಣ ಶೇ.1.31ಕ್ಕೆ ತಲುಪಿದೆ. ಆದರೆ, ಈರುಳ್ಳಿ ಮತ್ತು ಆಲೂಗಡ್ಡೆ ದರ ಏರಿಕೆ ಹಂತದಲ್ಲಿಯೇ ಇದೆ. ಈ ವರ್ಷದ ಮೇನಲ್ಲಿ ಹಣದುಬ್ಬರ ಪ್ರಮಾಣ ಶೇ.3.43 ಇತ್ತು.

ಜುಲೈನಲ್ಲಿ ಶೇ. 2.04 ಆಗಿತ್ತು. ಇದೇ ವೇಳೆ, ಆಗಸ್ಟ್‌ನಲ್ಲಿ ದೇಶದ ರಫ್ತು ಪ್ರಮಾಣ ಶೇ.9.3 (2.88 ಲಕ್ಷ ಕೋಟಿ ರೂ.) ಇಳಿಕೆಯಾಗಿದೆ. ಆದರೆ ಆಮದು ಪ್ರಮಾಣ ಶೇ.3.3 (5.21 ಲಕ್ಷ ಕೋಟಿ ರೂ.) ಏರಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next