Advertisement

‘ಇಡಿ ಕುಟುಂಬ ದುಃಖಿತವಾಗಿದೆ’ : ರಾಣಿ ಎಲಿಜಬೆತ್ ಹೇಳಿದ್ದೇನು ..?

03:41 PM Mar 10, 2021 | Team Udayavani |

ಲಂಡನ್ : ಜನಾಂಗೀಯ ತಾರತಮ್ಯಕ್ಕೆ ಸಂಬಂಧಿಸಿದ ಪ್ರಿನ್ಸ್  ಹ್ಯಾರಿ ಪತ್ನಿ ಮೇಘನ್ ಮಾರ್ಕೆಲ್ ಮಾಡಿರುವ ಆರೋಪಕ್ಕೆ ರಾಣಿ ಎಲಿಜಬೆತ್ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಮೇಘನ್  ಆರೋಪದ ಬಗ್ಗೆ ಕಳಕಳಿ ಹಾಗೂ ಕಾಳಜಿ ಇದೆ. ಸಮಸ್ಯೆಯನ್ನು ಕುಟುಂಬ ಖಾಸಗಿಯಾಗಿ ಬಗೆಹರಿಸಲಿದೆ ಎಂದು ಅವರು ಹೇಳಿದ್ದಾರೆ.

ಹ್ಯಾರಿ ಹಾಗೂ ಮೇಘನ್ ಗೆ ಕಳೆದ ಕೆಲವು ವರ್ಷಗಳು ಸವಾಲಿನಿಂದ ಕೂಡಿದ್ದವು ಎನ್ನುವ ವಿಚಾರ ತಿಳಿದು ಇಡಿ ಕುಟುಂಬ ದುಃಖಿತವಾಗಿದೆ ಎಂದು ಎಲಿಜಬೆತ್ ಪ್ರತಿಕ್ರಿಯಿಸಿದ್ದಾರೆ.

ಓದಿ : ನೇಣುಬಿಗಿದ ಸ್ಥಿತಿಯಲ್ಲಿ ಯುವತಿ ಶವ ಪತ್ತೆ ; ಕೊಲೆ ಶಂಕೆ!

ಸದ್ಯ ಕೇಳಿಬಂದಿರುವ ಆರೋಪಗಳು ಜನಾಂಗೀಯ ತಾರತಮ್ಯಕ್ಕೆ ಸಂಬಂಧ ಪಟ್ಟಿದ್ದು, ಈ ಸಮಸ್ಯೆಗಳನ್ನು ಕುಂಟುಂಬವು ಖಾಸಗಿಯಾಗಿ ಬಗೆಹರಿಸಿಕೊಳ್ಳುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

ಅಮೆರಿಕದ ‘ಟಾಕ್‌ ಶೋ’ ನಿರೂಪಕಿ ಓಪ್ರಾ ವಿನ್‌ ಫ್ರೇ ಗೆ ನೀಡಿರುವ ಸಂದರ್ಶನದಲ್ಲಿ ಮೇಘನ್‌ ಮಾರ್ಕೆಲ್‌ ನೀಡಿದ ಹೇಳಿಕೆ ಬಳಿಕ ಬಂಕಿಂಗ್‌ಹ್ಯಾಮ್ ಅರಮನೆ ಒತ್ತಡವನ್ನು ಅನುಭವಿಸಿತ್ತು. ಈ  ಸಂದರ್ಶನವು ಆದಿತ್ಯವಾರ ಪ್ರಸಾರವಾಗಿತ್ತು.

ಮೇಘನ್‌ ಸಂದರ್ಶನದಲ್ಲಿ ಏನು ಹೇಳಿದ್ದರು..?

‘ನನ್ನ ಮಗ ಆರ್ಚಿ ನನ್ನ ಗರ್ಭದಲ್ಲಿದ್ದಾಗ ರಾಜ ಮನೆತನ ಆತಂಕದಲ್ಲಿತ್ತು. ಮಗುವೇನಾದರೂ ಹುಟ್ಟಿದರೆ ಅದರ ಚರ್ಮ ಎಷ್ಟು ಗಾಢವಾಗಿರಬಹುದು ಎಂಬೆಲ್ಲ ಚರ್ಚೆಗಳ ರಾಜಮನೆತನದಲ್ಲಿ ನಡೆಯುತ್ತಿತ್ತು. ನಾನು ಮಾತ್ರ ರಕ್ಷಣೆಗೆ ಒಳಪಟ್ಟಿರಲಿಲ್ಲ. ಆದರೆ, ಕುಟುಂಬದ ಇತರ ಸದಸ್ಯರನ್ನು ರಕ್ಷಿಸಿಕೊಳ್ಳಲು ಅವರು ಸುಳ್ಳು ಹೇಳಲು ಸಿದ್ಧರಿದ್ದರು. ನನ್ನನ್ನು ಮತ್ತು ನನ್ನ ಗಂಡನನ್ನು ರಕ್ಷಿಸಲು ಸತ್ಯವನ್ನು ಹೇಳಲು ಅವರು ಸಿದ್ಧರಿರಲಿಲ್ಲ’ಎಂದು ಆದಿತ್ಯವಾರ ಪ್ರಸಾರವಾದ ಸಂದರ್ಶನದಲ್ಲಿ ಮೇಘನ್‌ ಮಾರ್ಕೆಲ್‌ ಹೇಳಿಕೊಂಡಿದ್ದರು.

ರಾಜ ಮನೆತನದಲ್ಲಿದ್ದ ಸಂದರ್ಭದಲ್ಲಿ ಯಾವುದೇ ಬೆಂಬಲ ಇಲ್ಲದ ಕಾರಣದಿಂದಾಗಿ ಆತ್ಮಹತ್ಯೆಯ ಯೋಚನೆಯೂ ಬಂದಿತ್ತು ಎಂದು ಅವರು ಹೇಳಿದ್ದರು.

ಓದಿ : ಕೇರಳದಲ್ಲೂ ಕಾಂಗ್ರೆಸ್ ಗೆ ಆಘಾತ, ಪಕ್ಷ ತೊರೆದ ಪಿ.ಸಿ ಚಾಕೋ: ಏನಿದು ಜಟಾಪಟಿ

Advertisement

Udayavani is now on Telegram. Click here to join our channel and stay updated with the latest news.

Next