Advertisement

ಕಾನ್ಪುರದಲ್ಲಿ ಜಯ ಯಾರಿಗೆ?

11:05 AM May 04, 2019 | sudhir |

ಉತ್ತರ ಪ್ರದೇಶದ ಎಂಭತ್ತು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರಮುಖ ಕ್ಷೇತ್ರವೆಂದರೆ ಕಾನ್ಪುರ. 2014ರ ಚುನಾವಣೆಯಲ್ಲಿ ಬಿಜೆಪಿಯ ಹಿರಿಯ ನಾಯಕ ಡಾ.ಮುರಳೀ ಮನೋಹರ ಜೋಶಿ ಕಾಂಗ್ರೆಸ್‌ನ ಶ್ರೀಪ್ರಕಾಶ್‌ ಜೈಸ್ವಾಲ್‌ ವಿರುದ್ಧ ಗೆದ್ದಿದ್ದರು. ಬಿಜೆಪಿಯಲ್ಲಿ 75 ವರ್ಷ ಮೀರಿದ ನಾಯಕರಿಗೆ ಟಿಕೆಟ್‌ ನೀಡದೇ ಇರುವ ನಿಯಮ ಇರುವ ಹಿನ್ನೆಲೆಯಲ್ಲಿ ಜೋಶಿ ಅವರಿಗೆ ಅವಕಾಶ ನೀಡಲಾಗಿಲ್ಲ. ಅವರ ಸ್ಥಾನದಲ್ಲಿ ಉತ್ತರ ಪ್ರದೇಶ ಸರ್ಕಾರದಲ್ಲಿ ರೇಷ್ಮೆ ಮತ್ತು ಜವಳಿ ಖಾತೆ ಸಚಿವರಾಗಿರುವ ಸತ್ಯದೇವ್‌ ಪಚೌರಿ ಅವರಿಗೆ ಸ್ಪರ್ಧಿಸುವ ಅವಕಾಶ ನೀಡಲಾಗಿದೆ. ಕಾಂಗ್ರೆಸ್‌ನಿಂದ ಶ್ರೀಪ್ರಕಾಶ್‌ ಜೈಸ್ವಾಲ್‌ ಸಮಾಜವಾದಿ ಪಕ್ಷದಿಂದ ರಾಮ್‌ಕುಮಾರ್‌ ಕಣಕ್ಕೆ ಇಳಿದಿದ್ದಾರೆ.

Advertisement

ಈ ಕ್ಷೇತ್ರದಲ್ಲಿ ಚರ್ಮದ ಉದ್ಯಮಕ್ಕೆ ಉತ್ತಮ ಹೆಸರು ಇದೆ. ಅದ್ಧೂರಿಯಾಗಿ ನಡೆದಿದ್ದ ಕುಂಭ ಮೇಳಕ್ಕೆ ಪೂರಕವಾಗಿ ಚರ್ಮದ ಉದ್ದಿಮೆಗಳನ್ನು ಮುಚ್ಚುವಂತೆ ಉತ್ತರ ಪ್ರದೇಶ ಸರ್ಕಾರ ಆದೇಶ ನೀಡಿದ್ದು ಸ್ಥಳೀಯರಲ್ಲಿ ಕೋಪ ತರಿಸಿದೆ ಎಂದು ವಿಶ್ಲೇಷಿಸಲಾಗುತ್ತದೆ. ಈ ಉದ್ದಿಮೆಗಳು ನೂರಾರು ಕುಟುಂಬ ಗಳಿಗೆ ಆಧಾರವಾಗಿದ್ದವು. ಅದು ಮುಚ್ಚಿರುವುದರಿಂದ ಉದ್ಯೋಗದ ಸಮಸ್ಯೆ ಎದುರಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದೇ ಅಂಶವನ್ನು ಕಾಂಗ್ರೆಸ್‌ ಪರ ಪ್ರಚಾರ ನಡೆಸಿದ ಪ್ರಿಯಾಂಕಾ ವಾದ್ರಾ ಪ್ರಸ್ತಾಪ ಮಾಡಿದ್ದರು.

ವಾರ್ಷಿಕವಾಗಿ 12 ಸಾವಿರ ಕೋಟಿ ರೂ. ಮೌಲ್ಯದ ಚರ್ಮೋದ್ಯಮ ಕಾನ್ಪುರ ವ್ಯಾಪ್ತಿಯಲ್ಲಿದೆ. ನಿಯಂತ್ರಣವಿಲ್ಲದೆ ಕಾರ್ಖಾ ನೆಗಳು ಇದ್ದ ಕಾರಣ ನಗರ ಅತ್ಯಂತ ಹೆಚ್ಚಿನ ಮಾಲಿನ್ಯಯುಕ್ತ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.

ಕೇಂದ್ರದ ಗೃಹ ಖಾತೆ ಮಾಜಿ ಸಹಾಯಕ ಸಚಿವ ಶ್ರೀಪ್ರಕಾಶ್‌ ಜೈಸ್ವಾಲ್‌ ಹೇಳುವ ಪ್ರಕಾರ ಅವರ ಹೋರಾಟ ಏನಿದ್ದರೂ, ಬಿಜೆಪಿ ಜತೆಗೆ. ಎಸ್‌ಪಿ ಮತ್ತು ಬಿಎಸ್‌ಪಿ ಮೈತ್ರಿಯಿಂದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದರೂ, ಅದು ಪ್ರಭಾವ ಬೀರಲಾರದು. ಹಿಂದಿನ ಬಾರಿ ಮೋದಿ ಅಲೆ ಇತ್ತು. ಈ ಬಾರಿ ಅಂಥ ಪ್ರಭಾವಳಿ ಏನೇನೂ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಪ್ರಿಯಾಂಕಾ ವಾದ್ರಾ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡು ಪ್ರಚಾರ ನಡೆಸಿರುವುದು ಜೈಸ್ವಾಲ್‌ಗೆ ಧನಾತ್ಮಕವಾಗಿದೆ ಎಂದು ಹೇಳಲಾಗುತ್ತಿದೆ. ಈ ಕ್ಷೇತ್ರದಲ್ಲಿ ಕೆಲವೊಮ್ಮೆ ಕಾಂಗ್ರೆಸ್‌, ಮತ್ತೂಮ್ಮೆ ಬಿಜೆಪಿಯ ಅಭ್ಯರ್ಥಿಗಳು ಗೆದ್ದಿದ್ದಾರೆ. 1957ರಿಂದ 1977ರ ವರೆಗೆ ಸ್ವತಂತ್ರ ಅಭ್ಯರ್ಥಿ ಎಸ್‌.ಎಂ.ಬ್ಯಾನರ್ಜಿ ಗೆದ್ದಿದ್ದರು. 1991ರಿಂದ 1999ರ ವರೆಗೆ ಬಿಜೆಪಿ ಹುರಿಯಾಳು ಜಗತ್‌ ವೀರ್‌ ಸಿಂಗ್‌ ದ್ರೋಣ ಜಯಸಾಧಿಸಿದ್ದರು. 1999ರಿಂದ 2014ರ ಚುನಾವಣೆ ವರೆಗೆ ಕಾಂಗ್ರೆಸ್‌ ನಾಯಕ ಶ್ರೀಪ್ರಕಾಶ್‌ ಜೈಸ್ವಾಲ್‌ ಗೆದ್ದಿದ್ದರು. ಭಾರತದ ಮ್ಯಾಂಚೆಸ್ಟರ್‌ ಎಂಬ ಹೆಸರಿನಿಂದ ಕರೆಯಿಸಿಕೊಳ್ಳುತ್ತಿದ್ದ ಈ ಶಹರದಲ್ಲಿ ಬಹು ಸಮಯ ಉದ್ಯೋಗ, ಕಾರ್ಖಾನೆಗಳ ಸಮಸ್ಯೆ ಹೆಚ್ಚಿನ ಸಂದರ್ಭದಲ್ಲಿ ಚುನಾವಣಾ ವಿಚಾರವಾಗಿತ್ತು. ಅದನ್ನು ಮುಂದಿಟ್ಟುಕೊಂಡೇ ಎಸ್‌.ಎಂ.ಬ್ಯಾನರ್ಜಿ, ಸುಭಾಷಿಣಿ ಅಲಿ, ನರೇಶ್ಚಂದ್ರ ಚತುರ್ವೇದಿ ಲೋಕಸಭೆ ಪ್ರವೇಶಿಸಿದ್ದರು.

2014ರ ಚುನಾವಣೆಯಲ್ಲಿ ಕಾಂಗ್ರೆಸ್‌, ಬಿಜೆಪಿ, ಎಸ್‌ಪಿ, ಬಿಎಸ್‌ಪಿ ಪ್ರತ್ಯೇಕವಾಗಿ ಸ್ಪರ್ಧೆ ಮಾಡಿತ್ತು. ಈ ಬಾರಿ ಎಸ್‌ಪಿ-ಬಿಎಸ್‌ಪಿ ಒಟ್ಟಾಗಿ ಸ್ಪರ್ಧೆ ಮಾಡಿರುವುದು ಪ್ರಧಾನವಾಗಿರುವ ಅಂಶ. ಎಸ್‌ಸಿ ಸಮುದಾಯ ಶೇ. 11.72, ಎಸ್‌ಟಿ ಸಮುದಾಯ ಶೇ.0.12ರಷ್ಟಿದೆ ಈ ಕ್ಷೇತ್ರದಲ್ಲಿ. ಇದಲ್ಲದೆ ಬ್ರಾಹ್ಮಣ, ವೈಶ್ಯ, ಮುಸ್ಲಿಂ ಸಮುದಾಯದವರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಒಟ್ಟು ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಶಾಸಕರೇ ಗೆದ್ದಿದ್ದಾರೆ.

Advertisement

2014ರ ಚುನಾವಣೆ‌

– ಡಾ.ಮುರಳೀ ಮನೋಹರ ಜೋಶಿ (ಬಿಜೆಪಿ) : 4,74,712

– ಶ್ರೀಪ್ರಕಾಶ್‌ ಜೈಸ್ವಾಲ್‌ ( (ಕಾಂಗ್ರೆಸ್‌): 2,51, 766

Advertisement

Udayavani is now on Telegram. Click here to join our channel and stay updated with the latest news.

Next