Advertisement

US Poll: ಯಾರು ಶ್ವೇತಭವನ ಪ್ರವೇಶಿಸಲಿದ್ದಾರೆ? ಚುನಾವಣ ನಾಸ್ಟ್ರೋಡಮಸ್‌ ಭವಿಷ್ಯದಲ್ಲೇನಿದೆ…

03:09 PM Sep 06, 2024 | Team Udayavani |

ವಾಷಿಂಗ್ಟನ್: ಚುನಾವಣ ಭವಿಷ್ಯಕಾರ ಅಲ್ಲಾನ್‌ ಲಿಚ್‌ ಮನ್…ಅಮೆರಿಕ ಅಧ್ಯಕ್ಷೀಯ ಚುನಾವಣೆಗಳ ನಾಸ್ಟ್ರಡಾಮಸ್‌ ಎಂದೇ ಕರೆಯಲ್ಪಡುವ ಲಿಚ್‌, ಈ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್‌ ಪಕ್ಷದ ಕಮಲಾ ಹ್ಯಾರಿಸ್‌ ಶ್ವೇತಭವನ ಪ್ರವೇಶಿಸಲಿದ್ದಾರೆ ಎಂದು ಭವಿಷ್ಯ ನುಡಿದಿರುವುದಾಗಿ ಎನ್‌ ಡಿಟಿವಿ ವರದಿ ಮಾಡಿದೆ.

Advertisement

ಜಗತ್ತಿನ ದೊಡ್ಡಣ್ಣ ಅಮೆರಿಕದ 10 ಅಧ್ಯಕ್ಷೀಯ ಚುನಾವಣೆಗಳ ಫಲಿತಾಂಶದ ಕುರಿತು ಲಿಚ್‌ ಮನ್‌ ನುಡಿದ 9 ಭವಿಷ್ಯ ನಿಜವಾಗಿದೆ. ಈ ವರ್ಷದ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್‌ ಅವರು ರಿಪಬ್ಲಿಕನ್‌ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಅವರನ್ನು ಪರಾಜಯಗೊಳಿಸಲಿದ್ದಾರೆ ಎಂದು ಭವಿಷ್ಯ ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷಗಾದಿಯನ್ನು ಯಾರು ಏರಲಿದ್ದಾರೆ ಎಂಬ ಬಗ್ಗೆ ಲಿಚ್‌ ಮನ್‌ 13 ಪ್ರಮುಖ ಅಂಶಗಳ ಆಧಾರದ ಮೇಲೆ ಭವಿಷ್ಯ ನುಡಿದಿರುವುದಾಗಿ ವರದಿ ತಿಳಿಸಿದೆ. ಪಕ್ಷದ ಕುರಿತ ಅಭಿಪ್ರಾಯ, ಸ್ಪರ್ಧಿಗಳು, ಆಡಳಿತ ವಿರೋಧಿ ಅಲೆ, ಕಡಿಮೆ ಅವಧಿಯ ಆರ್ಥಿಕತೆ, ದೀರ್ಘಾವಧಿ ಆರ್ಥಿಕತೆ, ವಿದೇಶ ಯಶಸ್ಸು, ಗಲಭೆ, ನಿರ್ಗಮಿತ ಅಧ್ಯಕ್ಷರು ಹೀಗೆ 13 ಅಂಶಗಳ ಪ್ರಶ್ನೆಗಳ ಆಧಾರದ ಮೇಲೆ ಅಧ್ಯಕ್ಷೀಯ ಚುನಾವಣೆಯ ಭವಿಷ್ಯ ಹೇಳಲಾಗಿದೆ ಎಂದು ವರದಿ ತಿಳಿಸಿದೆ.

ಶ್ವೇತಭವನದ ಆಡಳಿತಾರೂಢ ಡೆಮಾಕ್ರಟಿಕ್‌ ಪಕ್ಷದ ವಿರುದ್ಧ 6ಕ್ಕೂ ಅಧಿಕ ಅಂಶಗಳು ವಿರುದ್ಧವಾಗಿವೆ. ಏತನ್ಮಧ್ಯೆ ಕಮಲಾ ಹ್ಯಾರಿಸ್‌ ಪ್ರಮುಖ ಅಂಶಗಳಲ್ಲಿ 8 ಅಂಕ ಪಡೆದಿದ್ದು, ಡೊನಾಲ್ಡ್‌ ಟ್ರಂಪ್‌ ಕೇವಲ ಮೂರು ಅಂಕ ತೆಗೆದುಕೊಂಡಿರುವುದಾಗಿ ವರದಿ ವಿವರಿಸಿದೆ.

Advertisement

ಜೋ ಬೈಡನ್‌ ವಿರುದ್ಧ ಆಡಳಿತ ವಿರೋಧಿ ಅಲೆ ಹೆಚ್ಚಾಗಿದ್ದು, ಈ ಬಾರಿ ಚುನಾವಣೆಯಲ್ಲಿ ಬೈಡನ್‌ ಸೋಲು ಖಚಿತ. ಆದರೆ ಪಕ್ಷದ ಎಲ್ಲಾ ಮುಖಂಡರು ಕಮಲಾ ಹ್ಯಾರಿಸ್‌ ಗೆ ಬೆಂಬಲವಾಗಿ ನಿಂತಿದ್ದಾರೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲನ್ನು ತಡೆಯಲು ಡೆಮಾಕ್ರಟಿಕ್‌ ಪಕ್ಷ ಶ್ರಮವಹಿಸುತ್ತಿದೆ.

ವಿದೇಶ ನೀತಿ

1984ರಿಂದ ಸತತವಾಗಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶದ ಕುರಿತು ಭವಿಷ್ಯ ನುಡಿದಿದ್ದ ಲಿಚ್‌ ಮನ್‌ , ವಿದೇಶಿ ನೀತಿ ವಿಫಲವಾಗಿದ್ದು, ಯಶಸ್ಸು ಅನಿರ್ಧರಿತವಾಗಿದೆ.

ಮಧ್ಯಪ್ರಾಚ್ಯ ಮತ್ತು ಉಕ್ರೇನ್‌ ನಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ನಮಗೆ ಸಮರ್ಪಕವಾಗಿ ಮಾಹಿತಿ ಇಲ್ಲ.  ಆದರೆ  ಅಮೆರಿಕದ ಮುಂದಿನ ಅಧ್ಯಕ್ಷರಾಗಿ ಕಮಲ ಹ್ಯಾರಿಸ್‌  ಆಯ್ಕೆಯಾಗಲಿದೆ ಎಂದು ಲಿಚ್‌ ಭವಿಷ್ಯ ನುಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next