ನವದೆಹಲಿ: ಏಷ್ಯಾ-ಪೆಸಿಫಿಕ್ ರಾಷ್ಟ್ರಗಳಲ್ಲಿ ಒಮಿಕ್ರಾನ್ ಹರಡುವ ಸಾಧ್ಯತೆ ಹೆಚ್ಚಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಎಚ್ಚರಿಕೆ ನೀಡಿದ್ದು, ಇದೆ ವೇಳೆ ಈ ವರ್ಷದ ಆರಂಭದಲ್ಲಿ ಜಗತ್ತನ್ನು ಕಾಡಿದ ಡೆಲ್ಟಾ ವೈರಸ್ ಗಿಂತ ಹೆಚ್ಚು ಅಪಾಯಕಾರಿ ಎಂಬುದಕ್ಕೆ ಇದುವರೆಗೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದೆ.
ಏಷ್ಯಾ-ಪೆಸಿಫಿಕ್ ದೇಶಗಳಿಗೆ ಆರೋಗ್ಯ ರಕ್ಷಣೆಯ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ತಮ್ಮ ಜನರಿಗೆ ಸಂಪೂರ್ಣವಾಗಿ ಲಸಿಕೆ ಹಾಕಿ ಕೋವಿಡ್ ಪ್ರಕರಣಗಳ ಉಲ್ಬಣದ ತಡೆಗೆ ತಯಾರಿ ನಡೆಸುವಂತೆ ಎಚ್ಚರಿಸಿದೆ
ಪ್ರಯಾಣದ ನಿರ್ಬಂಧಗಳ ಹೊರತಾಗಿಯೂ ಓಮಿಕ್ರಾನ್ ರೂಪಾಂತರವು ಜಾಗತಿಕವಾಗಿ ಹರಡುತ್ತಿದ್ದು, ಭಾರತ, ಶ್ರೀಲಂಕಾದಲ್ಲೂ ವೈರಸ್ ಪತ್ತೆಯಾಗಿದೆ.
ಹೆಚ್ಚಿನ ಅಪಾಯದ ದಕ್ಷಿಣ ಆಫ್ರಿಕನ್ ದೇಶಗಳಿಂದ ಪ್ರಯಾಣಿಸಲು ತನ್ನ ಗಡಿಗಳನ್ನು ಮುಚ್ಚಿದ್ದರೂ ಸಹ, ಅಮೆರಿಕಾದಲ್ಲಿ ಸ್ಥಳೀಯವಾಗಿ ಒಮಿ ಕ್ರಾನ್ ಕಂಡುಬಂದ ನಂತರ, ಹೊಸ ರೂಪಾಂತರಿ ವೈರಸ್ ಸಮುದಾಯ ಪ್ರಸರಣವಾದ ಇತ್ತೀಚಿನ ದೇಶ ಆಸ್ಟ್ರೇಲಿಯಾವಾಗಿದೆ.
ಜಪಾನ್, ಮಲೇಷ್ಯಾ, ಸಿಂಗಾಪುರ್ ಮತ್ತು ದಕ್ಷಿಣ ಕೊರಿಯಾದಲ್ಲಿ ಪ್ರಕರಣಗಳು ವರದಿಯಾಗುವುದರೊಂದಿಗೆ ಓಮಿಕ್ರಾನ್ ಈ ವಾರ ಏಷ್ಯಾದಲ್ಲಿ ಹಿಡಿತ ಸಾಧಿಸಲು ಪ್ರಾರಂಭಿಸಿದೆ. ಹೊಸ ರೂಪಾಂತರಿಯನ್ನು ದೂರವಿಡಲು ಅನೇಕ ಸರ್ಕಾರಗಳು ಪ್ರಯಾಣ ನಿಯಮಗಳನ್ನು ಬಿಗಿಗೊಳಿಸಿವೆಯಾದರೂ ಸೋಂಕು ಕಂಡು ಬರುತ್ತಿದೆ.
ಸುಮಾರು 650 ಮಿಲಿಯನ್ ಜನರಿರುವ ಏಷ್ಯಾ-ಪೆಸಿಫಿಕ್‌ಗೆ ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಎಚ್ಚರಿಕೆಯಲ್ಲಿ ಗಡಿಯಾಚೆಗಿನ ಪ್ರಯಾಣ ನಿಯಂತ್ರಣಗಳು ಮಾತ್ರ ಸೋಂಕು ನಿಯಂತ್ರಣಕ್ಕೆ ಕಡಿವಾಣ ಹಾಕಬಹುದು ಎಂದು ಒತ್ತಿಹೇಳಿದೆ.