Advertisement

ಎಚ್ಚರ…ನಿರ್ಲಕ್ಷ್ಯ ಬೇಡ; ಏನಿದು ಒಮಿಕ್ರಾನ್‌ ರೂಪಾಂತರಿ?ಕೋವಿಡ್ ನ ಹೊಸ ತಳಿ

12:00 PM Nov 27, 2021 | Team Udayavani |

ವಾಷಿಂಗ್ಟನ್: ದಕ್ಷಿಣ ಆಫ್ರಿಕಾದ ಅತಿ ಜನನಿಬಿಡ ಪ್ರಾಂತ್ಯವಾದ ಗುಟೆಂಗ್ ನಲ್ಲಿ ಪತ್ತೆಯಾಗಿರುವ ಕೋವಿಡ್ ವೈರಸ್ ನ ಹೊಸ ರೂಪಾಂತರ ತಳಿಗೆ (ಬಿ.1.1.529) ಒಮಿಕ್ರಾನ್ ಎಂದು ವಿಶ್ವಸಂಸ್ಥೆ ಹೆಸರಿಟ್ಟಿದೆ.

Advertisement

ಏನಿದು ಒಮಿಕ್ರಾನ್‌ ರೂಪಾಂತರಿ?

ದಕ್ಷಿಣ ಆಫ್ರಿಕಾದ ಅತಿ ಜನನಿಬಿಡ ಪ್ರಾಂತ್ಯವಾದ ಗುಟೆಂಗ್‌ ನಲ್ಲಿ ಈ ವೈರಾಣುವಿರುವ ಹೊಸ ಪ್ರಕರಣಗಳು ಪತ್ತೆಯಾಗಿವೆ. ಅತ್ತ, ಹಾಂಕಾಂಗ್‌, ಬೋಟ್ಸಾವಾನಾದಲ್ಲಿ ದಾಖಲಾಗಿರುವ ಕೆಲವು ಪ್ರಕರಣಗಳಲ್ಲಿ ಇದೇ ಮಾದರಿಯ ವೈರಾಣು ಪತ್ತೆಯಾಗಿದೆ. ಇದಕ್ಕೆ ಬೋಟ್ಸಾವಾನಾ ರೂಪಾಂತರಿ ಅಥವಾ ಒಮಿಕ್ರಾನ್‌ ರೂಪಾಂತರಿ ಎಂದು ಹೆಸರಿಡಲಾಗಿದೆ.

ಹೆಚ್ಚು ಶಕ್ತಿಶಾಲಿ

ಸಾಮಾನ್ಯವಾಗಿ ಕೊರೊನಾ ವೈರಾಣುವಿನ ಮೇಲೆ ಪ್ರೊಟೀನ್‌ನಿಂದ ಕೂಡಿದ ಮುಳ್ಳಿನಂಥ ಆಕಾರವಿರುತ್ತದೆ. ಬಿ.1.1.529 ರೂಪಾಂತರಿ ವೈರಾಣುವಿನಲ್ಲಿ ಈ ಪ್ರೋಟೀನ್‌, ಕನಿಷ್ಟ 30 ಬಾರಿಯಾದರೂ ರೂಪಾಂತರ ಹೊಂದಿದೆದೆ. ಹಾಗಾಗಿ, ಇದು ಈವರೆಗಿನ ಎಲ್ಲಾ ರೂಪಾಂತರಿ ಗಳಿಗಿಂತ ಹೆಚ್ಚು ವೇಗವಾಗಿ, ಹೆಚ್ಚು ಪರಿಣಾಮಕಾರಿಯಾಗಿ ಹರಡ ಬಲ್ಲದು ಎನ್ನಲಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಬುಧವಾರ- ಗುರುವಾರಗಳಂದು ದಾಖಲಾಗಿ ರುವ 1,100 ಹೊಸ ಕೊರೊನಾ ಪ್ರಕರಣಗಳಲ್ಲಿ ಶೇ. 90ರಷ್ಟು ಹೊಸ ರೂಪಾಂತರಿ ಪತ್ತೆಯಾಗಿ ರುವುದು ಇದರ ತ್ವರಿತ ಹರಡುವಿಕೆಗೆ ಸಾಕ್ಷಿಯಾಗಿದೆ.

Advertisement

ಸಮಾಧಾನಕರ ಸಂಗತಿ!

ಕೊರೊನಾಕ್ಕೆ ಈವರೆಗೆ ಅಭಿವೃದ್ಧಿಪಡಿಸಲಾಗಿರುವ ಎಲ್ಲಾ ಲಸಿಕೆಗಳು ಈ ಹೊಸ ರೂಪಾಂತರಿ ವೈರಾಣುವನ್ನು ಹತ್ತಿಕ್ಕುವಲ್ಲಿ ಶಕ್ತವಾಗಿವೆ ಎಂದು ವಿಜ್ಞಾನಿಗಳು  ತಿಳಿಸಿದ್ದಾರೆ. ಇನ್ನು, ಈ ವೈರಾಣುವಿನಿಂದ ಈವರೆಗೆ ಕಂಡಿರದ ಅತಿ ಭೀಕರ ಕೊರೊನಾ ರೋಗ ಉಂಟಾಗುತ್ತದೆ ಎಂಬುದಂತೂ ಸುಳ್ಳು ಎಂದೂ ವಿಜ್ಞಾನಿಗಳು ತಿಳಿಸಿದ್ದಾರೆ. ಇವೆರಡೂ ವಿಚಾರಗಳು, ಹೊಸ ರೂಪಾಂತರಿಯ ಭೀತಿಯ ನಡುವೆಯೂ ಈ ವಿಚಾರ ಸಮಾಧಾನ ಹಾಗೂ ಆತ್ಮವಿಶ್ವಾಸ ತರುವಂಥದ್ದಾಗಿವೆ.

ಕಟ್ಟೆಚ್ಚರ ವಹಿಸಿ: ಕೇಂದ್ರದ ಸೂಚನೆ

ಕೊರೊನಾ ಹೊಸ ರೂಪಾಂತರಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರ ಕಟ್ಟೆಚ್ಚರದ ಸೂಚನೆ ರವಾನಿಸಿದೆ. “ವಿದೇಶಗಳಿಂದ, ಅದರಲ್ಲೂ ವಿಶೇಷವಾಗಿ ದಕ್ಷಿಣ ಆಫ್ರಿಕಾದಿಂದ ಬರುವ ಪ್ರಯಾಣಿಕರಿಗೆ ಕಡ್ಡಾಯ ಕೊರೊನಾ ಪರೀಕ್ಷೆ ನಡೆಸಬೇಕು. ಜೊತೆಗೆ, ಸಾರ್ವಜನಿಕರಿಗೆ ನಡೆಸಲಾಗುತ್ತಿರುವ ಪರೀಕ್ಷೆಗಳನ್ನು ಇನ್ನೂ ಹೆಚ್ಚಿ ಮಟ್ಟದಲ್ಲಿ ನಡೆಸಬೇಕು’ ಎಂದು ಕೇಂದ್ರ ಆರೋಗ್ಯ ಇಲಾಖೆ ಸೂಚಿಸಿದೆ. ಜೊತೆಗೆ, ಯಾವ ದೇಶಗಳ ಪ್ರಜೆಗಳಿಗೆ ಕೊರೊನಾ ಪರೀಕ್ಷೆಗಳನ್ನು ಕಡ್ಡಾಯಗೊಳಿಸಬೇಕೆಂದು ಸೂಚಿಸುವ ಪಟ್ಟಿಯನ್ನು ಕೇಂದ್ರ ಸರ್ಕಾರ ಪರಿಷ್ಕರಿಸಿದೆ. ಯು.ಕೆ. ಸೇರಿದಂತೆ ಎಲ್ಲಾ ಐರೋಪ್ಯ ರಾಷ್ಟ್ರಗಳು, ದಕ್ಷಿಣ ಆಫ್ರಿಕಾ, ಬ್ರೆಜಿಲ್‌, ಬಾಂಗ್ಲಾದೇಶ, ಬೋಟ್ಸಾವಾನಾ, ಚೀನಾ, ಮಾರಿಷಸ್‌, ನ್ಯೂಜಿಲೆಂಡ್‌, ಜಿಂಬಾಬ್ವೆ, ಸಿಂಗಾಪುರ ದೇಶಗಳ ಜೊತೆಗೆ ಈಗ ಹೊಸದಾಗಿ ಹಾಂಕಾಂಗ್‌, ಇಸ್ರೇಲ್‌ ರಾಷ್ಟ್ರಗಳನ್ನು ಸೇರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next