Advertisement

ಜೆಡಿಎಸ್‌ ಭವಿಷ್ಯದ ಬಗ್ಗೆ ಮಾತಾಡಲು ಸಿಂಗ್‌ ಯಾರು?

04:31 PM Sep 03, 2021 | Team Udayavani |

ಹಾಸನ: ಜೆಡಿಎಸ್‌ ಭವಿಷ್ಯದ ಬಗ್ಗೆ ಮಾತನಾಡಲು ಅರುಣ್‌ಸಿಂಗ್‌ ಯಾರು ? 2023ರ ವಿಧಾನಸಭಾ ಚುನಾವಣೆವರೆಗೆ ರಾಜ್ಯ ಬಿಜೆಪಿಯ ಉಸ್ತುವಾರಿಯಾಗಿ ಅರಣ್‌ಸಿಂಗ್‌ ಇರಲಿ. ಮುಳುಗುವ ಹಡಗು ಬಿಜೆಪಿಯೋ, ಜೆಡಿಎಸ್‌ಯೋ ಎಂಬುದು ಗೊತ್ತಾಗುತ್ತದೆ ಎಂದು ಜೆಡಿಎಸ್‌ ಮುಖಂಡ, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರು ತಿರುಗೇಟು ನೀಡಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿಗೆ ಅರಣ್‌ಸಿಂಗ್‌ ಅವರೇ ಉಸ್ತುವಾರಿಗಳಾಗಿ ಮುಂದುವರಿಯಬೇಕು ಎಂಬುದು ನಮ್ಮ ಕೋರಿಕೆ. ಏಕೆಂದರೆ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಮುಳುಗುವುದನ್ನು ಅವರು ತಡೆಯಬೇಕು. ಅವರ ಉಸ್ತುವಾರಿಯಲ್ಲಿ ಬಿಜೆಪಿ
2023ರ ಚುನಾವಣೆಯಲ್ಲಿ ಬಿಜೆಪಿ ಯಾವ ಸಾಧನೆ ಮಾಡುತ್ತದೆ ಎಂಬ ಫ‌ಲಿತಾಂಶ ತೆಗೆದುಕೊಂಡು ಹೋಗಲು ಅರುಣ್‌ಸಿಂಗ್‌ ಉಸ್ತುವಾರಿ ಯಾಗಿ ಇರಲೇಬೇಕು ಎಂದು ವ್ಯಂಗ್ಯವಾಡಿದರು.

ಜೆಡಿಎಸ್‌ ಏಳು-ಬೀಳನ್ನು ಕಂಡಿದೆ: ಬಿಜೆಪಿಯ ಸಖ್ಯಕ್ಕಾಗಿ ನಾವೇನು ಅರ್ಜಿ ಹಾಕಿಕೊಂಡಿದ್ದೇವೆಯೇ? ಜೆಡಿಎಸ್‌ ಮುಳುಗುವ ಹಡಗು ಎಂದು ಹೇಳಲು ಅರುಣ್‌ಸಿಂಗ್‌ ಯಾರು ? ಜೆಡಿಎಸ್‌ ಏಳು- ಬೀಳು, ನೋವು- ನಲಿವು ಎಲ್ಲವನ್ನೂ ಕಂಡಿದೆ. ಅಧಿಕಾರ ಸಿಕ್ಕಿದಾಗ ರೈತರಿಗೆ ಗ್ರಾಮೀಣ ಪ್ರದೇಶದ ಜನರಿಗೆ ಏನೇನು ಕೆಲಸಬೇಕೋ ಮಾಡಿದ್ದೇವೆ. ಈ ದೇಶದಲ್ಲಿ ಸಮ್ಮಿಶ್ರ ಸರ್ಕಾರವಿದ್ದಾಗ ರೈತರ25 ಸಾವಿರಕೋಟಿರೂ. ಸಾಲ ಮನ್ನಾ ಮಾಡಿದ ಯಾರಾದರೂ ದಿಟ್ಟ ನಾಯಕರಿದ್ದರೆ ಅದು ಎಚ್‌.ಡಿ. ಕುಮಾರಸ್ವಾಮಿ. ಜೆಡಿಎಸ್‌ ಏನು ಎಂಬುದು ರಾಜ್ಯದ ಜನರಿಗೆ ಗೊತ್ತಿದೆ. ಅರುಣ್‌ ಸಿಂಗ್‌ಗೆ ಏನು ಗೊತ್ತಿದೆ ಎಂದು ಹರಿಹಾಯ್ದರು.

ಸ್ವಾಭಿಮಾನವೇ ಶಕ್ತಿ: ಜೆಡಿಎಸ್‌ ಎಂದೂ ಅಧಿಕಾರಕ್ಕಾಗಿ ವಿಶ್ವಾಸಘಾತುಕನ ಮಾಡುವುದಿಲ್ಲ. ಕಳೆದ ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾಗುವ ಎರಡು ದಿನ ಮೊದಲು ಪ್ರಧಾನಿ ನರೇಂದ್ರಮೋದಿ ಅವರು ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿಅವರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್‌ ಸಖ್ಯ ತೊರೆಯಿರಿ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಬನ್ನಿ 5 ವರ್ಷ ಮುಖ್ಯಮಂತ್ರಿ ಯಾಗಿ ಮುಂದುವರಿಯಲು ಬಿಜೆಪಿ ಬೆಂಬಲ ನೀಡಲಿದೆ ಎಂದಿದ್ದರು. ಆದರೆಕುಮಾರಸ್ವಾಮಿ ಅವರು ಅಧಿಕಾರಕ್ಕೆ ಆಸೆಪಡಲಿಲ್ಲ. ಹಿಂದೆ ದೇವೇಗೌಡರು ಪ್ರಧಾನಿಯಾಗಿದ್ದಾಗಲೂ ಸೀತಾರಾಂ ಕೇಸರಿಯವರ ಷರತ್ತುಗಳಿಗೆ ಒಪಿದ್ದರೆ ಪ್ರಧಾನಿಯಾಗಿ ಮುಂದುವರಿಯಬಹುದಿತ್ತು. ಅದರೆ ಅಂದೂ ಸಹ ದೇವೇಗೌಡರು ಅಧಿಕಾರದಲ್ಲಿ ಉಳಿಯುವುದಕ್ಕಿಂತ ಸ್ವಾಭಿಮಾನ ಮೇಲು ಎಂದು ಪ್ರಧಾನಿ ಹುದ್ದೆ ತೊರೆದ ಎಂದರು.

ಇದನ್ನೂ ಓದಿ:ದೇಶದಲ್ಲಿ ದಾಖಲಾತಿ ಶುಲ್ಕ ಇಲ್ಲದೇ ಇರುವುದು ಈ ಬ್ಯಾಂಕ್ ನಲ್ಲಿ ಮಾತ್ರ..!?

Advertisement

ಎರಡು ರಾಷ್ಟ್ರೀಯ ಪಕ್ಷಗಳನ್ನು ರಾಜ್ಯದಲ್ಲಿ ಎದುರಿಸಿ 2023ರ ವಿಧಾನಸಭಾ ಚುನಾವಣೆಯನ್ನು ಎದರಿಸಿ ಅಧಿಕಾರಕ್ಕೆ ಬರಲು ಅಣಿಯಾಗುತ್ತಿದೆ ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ಎಂದೆಂದಿಗೂ ಜೆಡಿಎಸ್‌ ಸಮಾನ ಅಂತರ ಕಾಯ್ದುಕೊಂಡು ರಾಜಕಾರಣ ಮಾಡಬಯಸುತ್ತದೆ ಎಂದು ಸ್ಪಷ್ಟಪಡಿಸಿದರು

ಜೆಡಿಎಸ್‌ನಿಂದಲೇ ಬಿಜೆಪಿಗೆ ಅಧಿಕಾರ
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದರೆ ಅದು ಎಚ್‌.ಡಿ.ಕುಮಾರಸ್ವಾಮಿ ಅವರ ಕೊಡುಗೆ. ಬಿಜೆಪಿಯವರು ಎಚ್‌.ಡಿ.ಕುಮಾರಸ್ವಾಮಿ ಅವರ ಫೋಟೋ ಇಟ್ಟುಕೊಳ್ಳಬೇಕು. 2006ರಲ್ಲಿ ಎಚ್‌.ಡಿ.ಕುಮಾರಸ್ವಾಮಿ ಬಿಜೆಪಿಯೊಂದಿಗೆ ಸೇರಿ ಸಮ್ಮಿಶ್ರ ಸರ್ಕಾರ ರಚನೆ ಮಾಡದಿದ್ದರೆ ಇನ್ನೂ 50 ವರ್ಷಗಳು ಕಳೆದರೂ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಾಗುತ್ತಿರಲಿಲ್ಲ. ಮುಖ್ಯಮಂತ್ರಿಯಾದ ನಂತರ ಬಸವರಾಜ ಬೊಮ್ಮಾಯಿ ಅವರು ದೇವೇಗೌಡರ ಭೇಟಿಗೆ ಬಂದಾಗ ಅವರನ್ನು ಸ್ವಾಗತಿಸಿ ಒಳ್ಳೆಯದನ್ನು ಆಶಿಸುವುದು ನಮ್ಮ ಸಂಸ್ಕಾರ. ಅದನ್ನೇ ಅಪಾರ್ಥ ಮಾಡಿ ಕೊಂಡರೆ ನಾವೇನು ಮಾಡೋಣ ಎಂದು ಪ್ರಶ್ನಿಸಿದರು.

ಏರ್‌ಪೋರ್ಟ್‌ ಗುತ್ತಿಗೆ: 20 ಕೋಟಿ ಕಮೀಷನ್‌ಗೆ ಪಟ್ಟು
ಹಾಸನ: ರಾಜ್ಯದಲ್ಲಿ ಸರ್ಕಾರದ ನಾಯಕತ್ವ ಬದಲಾಗಿರಬಹುದು. ಆದರೆ ಭ್ರಷ್ಟಾಚಾರ ಈಗಲೂ ತಾಂಡವವಾಡುತ್ತಿದೆ. ಹಾಸನ ವಿಮಾನ
ನಿಲ್ದಾಣದ 200 ಕೋಟಿ ರೂ. ಕಾಮಗಾರಿ ಗುತ್ತಿಗೆ ನೀಡಲು ಬಿಜೆಪಿಯವರೊಬ್ಬರು 20 ಕೋಟಿ ರೂ. ಕಮೀಷನ್‌ಗೆ ಪಟ್ಟು ಹಿಡಿದ್ದಾರೆ ಎಂದು ಜೆಡಿಎಸ್‌ ಮುಖಂಡ , ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರು ಆರೋಪಿಸಿದರು.

ಮುಂಬೈನ ಗುತ್ತಿಗೆದಾರರೊಬ್ಬರಿಗೆ ಹಾಸನ ವಿಮಾನ ನಿಲ್ದಾಣದ ಕಾಮಗಾರಿ ಕೊಡಿಸಲು ಬಿಜೆಪಿಯವರೊಬ್ಬರು ಭಾರೀ ಪ್ರಯತ್ನ ನಡೆಸಿದ್ದರು. ಕನಿಷ್ಠ ಬಿಡ್‌ (ಎಲ್‌-1) ಸಲ್ಲಿಸಿದ್ದವರ ಟೆಂಡರ್‌ ವಾಪಸ್‌ ತೆಗೆಸಿ ಹೆಚ್ಚು ಬಿಡ್‌ (ಎಲ್‌-2)ನವರಿಗೆ ಗುತ್ತಿಗೆ ಕೊಡಿಸಿ 20 ಕೋಟಿ ರೂ. ಕಮೀಷನ್‌ಗೆ ಬೇಡಿಕೆ ಇಟ್ಟಿದ್ದರು. ಆದರೆ ಎಲ್‌ -1 ಒಪ್ಪದಿದ್ದಾಗಟೆಂಡರ್‌ ರದ್ದುಪಡಿಸಿ ಮರುಟೆಂಡರ್‌ಗೂ ಪ್ರಯತ್ನ ನಡೆಸಿದ್ದರು. ಈ ವಿಷಯ ಅಧಿಕಾರಿ ಯೊಬ್ಬ
ರಿಂದ ನನಗೆ ಗೊತ್ತಾದ ತಕ್ಷಣ ನಾನು ಗಲಾಟೆ ಮಾಡಿದೆ. ಆಗ ಟೆಂಡರ್‌ ಪೂರ್ಣಗೊಳಿಸಿ ಎಲ್‌- 1ಗೆ ವರ್ಕ್‌ ಆರ್ಡರ್‌ ಕೊಟ್ಟಿದ್ದಾರೆ . ಎಲ್‌- 1 ಬಳಿಯೂ ಕಮೀಷನ್‌ ವಸೂಲಿಗೆ ಬಿಜೆಪಿಯವರಿಂದ ಪ್ರಯತ್ನ ನಡೆದಿದೆ. ಹಾಗಾಗಿಯೇ ಇನ್ನೂ ಹಾಸನ ವಿಮಾನ ನಿಲ್ದಾಣ ಕಾಮಗಾರಿ ಆರಂಭವಾಗಿಲ್ಲ ಎಂದು ಹೇಳಿದರೂ ಕಮೀಷನ್‌ಗೆ ಪಟ್ಟು ಹಿಡಿದ ಬಿಜೆಪಿಯವರ ಹೆಸರು ಹೇಳಲು ನಿರಾಕರಿದರು.

20 ಕೋಟಿ ರೂ. ಕಮೀಷನ್‌ಗೆ ಪಟ್ಟು ಹಿಡಿದಿರುವುವರ ಹೆಸರನ್ನು ಸಮಯ ಬಂದಾಗ ನಾನೇ ಬಹಿರಂಗ ಪಡಿಸುವೆ. ಆದರೆ ಮುಖ್ಯಮಂತ್ರಿ ಯಾಗಿ ಅಧಿಕಾರ ವಹಿಸಿಕೊಂಡ ಬಸವರಾಜ ಬೊಮ್ಮಾಯಿ ಅವರು ಭ್ರಷ್ಟಾಚಾರಕ್ಕೆ ಅವಕಾಶ ಕೊಡಲ್ಲ ಎಂದಿದ್ದರು. ಆದರೆ ಹಾಸನ ವಿಮಾನ ನಿಲ್ದಾಣದಕಾಮಗಾರಿ ಗುತ್ತಿಗೆಕೊಡಿಸಲು ಕಮೀಷನ್‌ ಪಡೆಯಲು ಪ್ರಯತ್ನ ನಡೆಸಿದ್ದ ಸಂಬಂಧದ ದಾಖಲೆಗಳು ನನ್ನ ಬಳಿ ಇವೆ. ಮುಖ್ಯಮಂತ್ರಿ ಯವರು ತನಿಖೆ ನಡೆಸುವುದಾದರೆ ನಾನು ದಾಖಲೆ ಒದಗಿಸಲು ಸಿದ್ಧನಿದ್ದೇನೆ ಎಂದು ರೇವಣ್ಣ ಸ್ಪಷ್ಟಪಡಿಸಿದರು.

ಹಾಸನ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಈಗ ಕರೆದಿರುವ ಟೆಂಡರ್‌ನಲ್ಲಿ ಮೂಲ ಯೋಜನೆಯಂತೆ ವಿಮಾನ ನಿಲ್ದಾಣ ನಿರ್ಮಾಣ ಮಾಡುವ
ಪ್ರಸ್ತಾವವಿಲ್ಲ. ಆದರೆ, ಕಾಮಗಾರಿ ಆರಂಭವಾಗಲಿ. ಮುಂದಿನ ದಿನಗಳಲ್ಲಿ ನಾವು ಅಧಿಕಾರದಲ್ಲಿದ್ದಾಗ ರೂಪಿಸಿದ್ದ ಮೂಲ ಯೋಜನೆಯಂತೆಯೇ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದು ಗೊತ್ತಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next