ಗುವಾಹಟಿ:“ಶಾರುಖ್ ಖಾನ್ ಯಾರು ? ನನಗೆ ಆತನ ಬಗ್ಗೆಯಾಗಲಿ, ಅವರ ಸಿನಿಮಾ ಪಠಾಣ್ ಬಗ್ಗೆ ತಿಳಿದಲ್ಲ’ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಹೇಳಿದ್ದಾರೆ.
ಅಸ್ಸಾಂನಲ್ಲಿ ಪಠಾಣ್ ಸಿನಿಮಾ ಪ್ರದರ್ಶನದ ವಿರುದ್ಧ ಕೆಲ ಬಲಪಂಥೀಯ ಸಂಘಟನೆಗಳು ಪ್ರತಿಭಟನೆ ನಡೆಸಿ, ಸಿನಿಮಾ ಪೋಸ್ಟರ್‌ಗಳಿಗೆ ಬೆಂಕಿ ಹಚ್ಚಿದ ಘಟನೆಯುವ ವರದಿಯಾಗಿದೆ.
ಈ ಸಂಬಂಧಿಸಿದಂತೆ ಪತ್ರಕರ್ತರು ಸಿಎಂ ಹಿಮಂತ್ ಅವರನ್ನು ಪ್ರಶ್ನಿಸಿದ್ದು, ಈ ವೇಳೆ ಹಿಮಂತ್ ಈ ರೀತಿ ಉತ್ತರಿಸಿ,ಕಾನೂನು ಸುವ್ಯವಸ್ಥೆಗೆ ಅಡ್ಡಿಯಾದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. ಇನ್ನು ಖಾನ್ ಬಾಲಿವುಡ್ ಸ್ಟಾರ್ ಎನ್ನುತ್ತಿದ್ದಂತೆ ಪ್ರತಿಕ್ರಿಯಿಸಿರುವ ಶರ್ಮಾ, ರಾಜ್ಯದ ಜನತೆ ಅಸ್ಸಾಮಿಗಳ ಬಗ್ಗೆ ಯೋಚಿಸ್ಬೇಕು ಹಿಂದಿ ಸಿನಿಮಾಗಳ ಬಗ್ಗೆ ಅಲ್ಲ ಎಂದು ಚಾಟಿ ಬೀಸಿದ್ದಾರೆ.