Advertisement

ಯುದ್ಧಾಪರಾಧ : ರಷ್ಯಾ ಯೋಧನಿಗೆ ಉಕ್ರೇನ್‌ನಲ್ಲಿ ಜೀವಾವಧಿ ಶಿಕ್ಷೆ

10:02 AM May 24, 2022 | Team Udayavani |

ಕೀವ್‌: ಉಕ್ರೇನ್‌ ಮೇಲೆ ಯುದ್ಧ ಸಾರಿರುವ ರಷ್ಯಾ ಸೇನೆಯ ಯೋಧನೊಬ್ಬನಿಗೆ ಉಕ್ರೇನ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

Advertisement

ಉಕ್ರೇನ್‌ ನಾಗರಿಕನೊಬ್ಬರನ್ನು ಗುಂಡಿಕ್ಕಿ ಕೊಲೆ ಮಾಡಿರುವ ಆರೋಪದಲ್ಲಿ ಈ ಶಿಕ್ಷೆ ವಿಧಿಸಲಾಗಿದೆ. 21 ವರ್ಷದ ವಾಡಿಮ್‌ ಶಿಶಿ ಮರಿನ್‌ ತಾನು ನಾಗರಿಕನ ತಲೆಗೆ ಗುಂಡಿಟ್ಟಿರುವುದಾಗಿ ಒಪ್ಪಿಕೊಂಡಿದ್ದಾನೆ. ಸಾವನ್ನಪ್ಪಿದ ವ್ಯಕ್ತಿಯು ಫೋನ್‌ನಲ್ಲಿ ಮಾತನಾಡುತ್ತಿದ್ದು, ಆತ ಉಕ್ರೇನ್‌ ಯೋಧರಿಗೆ ಮಾಹಿತಿ ಕೊಡಬಹುದೆಂಬ ಅನುಮಾನದಿಂದ ಸೇನೆಯ ಮೇಲಧಿಕಾರಿಯು ಆತನನ್ನು ಕೊಲ್ಲುವಂತೆ ಆದೇಶಿಸಿದ್ದಾಗಿ ವಾಡಿಮ್‌ ಹೇಳಿಕೊಂಡಿದ್ದಾನೆ. ಯುದ್ಧ ಆರಂಭವಾದ ಬಳಿಕ ಯುದ್ಧಾಪರಾಧ ಸಂಬಂಧ ಶಿಕ್ಷೆಯಾದ ಮೊದಲ ಪ್ರಕರಣವಿದು.

ಇದೇ ವೇಳೆ ವಿಶ್ವಸಂಸ್ಥೆಯ ರಷ್ಯಾ ರಾಯಭಾರಿ ಬೋರಿಸ್‌ ಬೊಂಡರೆವ್‌(41) ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಷ್ಯಾ ಸರಕಾರದ ನಡೆಯಿಂದ ಬೇಸರಗೊಂಡು ಈ ನಿರ್ಧಾರ ತೆಗೆದುಕೊಂಡಿ ರುವುದಾಗಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ : ವನಿತಾ ಟಿ20 ಚಾಲೆಂಜರ್‌ ಸರಣಿ: ಸೂಪರ್‌ ನೋವಾ ಸೂಪರ್‌ ಬ್ಯಾಟಿಂಗ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next